Railway Recruitment 2025: ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ
ಕೇಂದ್ರ ರೈಲ್ವೆಯ PLW ನಿಂದ 225 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ, ಇಂಟರ್ಮೀಡಿಯೇಟ್ ಅಥವಾ ITI ವಿದ್ಯಾರ್ಹತೆ ಹೊಂದಿದ, 15-24 ವಯಸ್ಸಿನ ಅಭ್ಯರ್ಥಿಗಳು ಡಿಸೆಂಬರ್ 22ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಇಲ್ಲದೆ ಶೈಕ್ಷಣಿಕ ಅರ್ಹತೆ ಆಧರಿಸಿ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 9,600-11,040 ರೂ. ಸ್ಟೈಫಂಡ್ ದೊರೆಯಲಿದೆ.

ಕೇಂದ್ರ ರೈಲ್ವೆ ಸಚಿವಾಲಯದ ಒಂದು ಘಟಕವಾದ ಪಂಜಾಬ್‌ನ ಪಟಿಯಾಲ ಲೋಕೋಮೋಟಿವ್ ವರ್ಕ್ಸ್ ಇಂಡಿಯನ್ ರೈಲ್ವೇಸ್ (PLW), ವಿವಿಧ ಇಲಾಖೆಗಳಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 225 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 22ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇಲಾಖೆವಾರು ಅಪ್ರೆಂಟಿಸ್ ಹುದ್ದೆಗಳ ವಿವರ ಇಂತಿದೆ:
- ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ: 120
- ಮೆಕ್ಯಾನಿಕ್ (ಡೀಸೆಲ್) ವಿಭಾಗ: 25
- ಮೆಷಿನಿಸ್ಟ್ ವಿಭಾಗ: 12
- ಫಿಟ್ಟರ್ : 50
- ವೆಲ್ಡರ್ (ಜಿ & ಇ): 18
ಇದನ್ನೂ ಓದಿ: 25,487 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ; 10 ನೇ ತರಗತಿ ಪಾಸಾಗಿದ್ರೆ ಸಾಕು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ 10 ನೇ ತರಗತಿ, ಇಂಟರ್ಮೀಡಿಯೇಟ್ ಮತ್ತು ಐಟಿಐ ಪ್ರಮಾಣಪತ್ರದಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯಸ್ಸಿನ ಮಿತಿ 15 ರಿಂದ 24 ವರ್ಷಗಳ ನಡುವೆ ಇರಬೇಕು. ಈ ಅರ್ಹತೆಗಳನ್ನು ಹೊಂದಿರುವವವರು ಡಿಸೆಂಬರ್ 22 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಂತಿಮ ಆಯ್ಕೆಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆಗಳಲ್ಲಿ ಸಾಧಿಸಿದ ಅರ್ಹತೆಯನ್ನು ಆಧರಿಸಿರುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ ರೂ. 9,600 ರಿಂದ ರೂ. 11,040 ರವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಇತರ ವಿವರಗಳನ್ನು ಕೆಳಗಿನ ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




