AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prasar Bharati Recruitment 2025: ಪ್ರಸಾರ ಭಾರತಿಯಲ್ಲಿ 29 ಕಾಪಿ ಎಡಿಟರ್ ಹುದ್ದೆಗೆ ನೇಮಕಾತಿ; 35000 ರೂ. ಸಂಬಳ

ಪ್ರಸಾರ ಭಾರತಿ 29 ಕಾಪಿ ಎಡಿಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದಲ್ಲಿ ಖಾಲಿ ಹುದ್ದೆಗಳಿವೆ. ಪತ್ರಿಕೋದ್ಯಮ/ಸಮೂಹ ಸಂವಹನ ಪದವಿ, 5 ವರ್ಷದ ಅನುಭವ ಮತ್ತು 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಡಿಸೆಂಬರ್ 05ರೊಳಗೆ ಅರ್ಜಿ ಸಲ್ಲಿಸಿ. ಆಯ್ಕೆಯಾದವರಿಗೆ 35,000 ರೂ. ಮಾಸಿಕ ಸಂಬಳ ಇರಲಿದೆ. ಲಿಖಿತ ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

Prasar Bharati Recruitment 2025: ಪ್ರಸಾರ ಭಾರತಿಯಲ್ಲಿ 29 ಕಾಪಿ ಎಡಿಟರ್ ಹುದ್ದೆಗೆ ನೇಮಕಾತಿ; 35000 ರೂ. ಸಂಬಳ
ಪ್ರಸಾರ ಭಾರತಿ
ಅಕ್ಷತಾ ವರ್ಕಾಡಿ
|

Updated on: Nov 26, 2025 | 6:09 PM

Share

ಭಾರತ ಸರ್ಕಾರದ ಸಾರ್ವಜನಿಕ ಸೇವಾ ಪ್ರಸಾರಕರಾದ ಪ್ರಸಾರ ಭಾರತಿ, ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾಪಿ ಎಡಿಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 29 ಕಾಪಿ ಎಡಿಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ ದೂರದರ್ಶನದಲ್ಲಿ 21 ಹುದ್ದೆಗಳು ಮತ್ತು ಆಲ್ ಇಂಡಿಯಾ ರೇಡಿಯೋದಲ್ಲಿ 8 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಸಾರ ಭಾರತಿಯಲ್ಲಿ ಕಾಪಿ ಎಡಿಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಪತ್ರಿಕೋದ್ಯಮ, ಸಮೂಹ ಸಂವಹನ ವಿಷಯದಲ್ಲಿ ಪದವಿ ಅಥವಾ ಪಿಜಿ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಅವರು ಐದು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಹಿಂದಿ/ಇಂಗ್ಲಿಷ್ ಹಾಗೂ ಸಂಬಂಧಿತ ಪ್ರಾದೇಶಿಕ ಭಾಷೆಯ ಜ್ಞಾನದ ಅಗತ್ಯವಿದೆ. ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ 35 ವರ್ಷಗಳನ್ನು ಮೀರಬಾರದು. ಆಸಕ್ತ ಅಭ್ಯರ್ಥಿಗಳು ಜಾಹೀರಾತು ಪ್ರಕಟವಾದ 15 ದಿನಗಳ ಒಳಗೆ ಅಂದರೆ ಡಿಸೆಂಬರ್​​ 05ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್​​ ನ್ಯೂಸ್​; ಹೀಗೆ ಅರ್ಜಿ ಸಲ್ಲಿಸಿ

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶಾದ್ಯಂತ ಪ್ರಸಾರ ಭಾರತಿ ಶಾಖೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ತಿಂಗಳಿಗೆ ರೂ. 35 ಸಾವಿರದವರೆಗೆ ಸಂಬಳ ನೀಡಲಾಗುತ್ತದೆ. ಇತರ ವಿವರಗಳನ್ನು ಕೆಳಗಿನ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ