RBI Recruitment 2022: ಆರ್​ಬಿಐನಲ್ಲಿ ಉದ್ಯೋಗಾವಕಾಶ; ಹುದ್ದೆ, ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ

Job Alert: ಭಾರತೀಯ ರಿಸರ್ವ್ ಬ್ಯಾಂಕ್ ಸೇವಾ ಮಂಡಳಿಯು ಮ್ಯಾನೇಜರ್ ಸೇರಿದಂತೆ ಇತರ 14 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

RBI Recruitment 2022: ಆರ್​ಬಿಐನಲ್ಲಿ ಉದ್ಯೋಗಾವಕಾಶ; ಹುದ್ದೆ, ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ
ಆರ್​ಬಿಐ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on: Jan 16, 2022 | 3:51 PM

ಭಾರತೀಯ ರಿಸರ್ವ್ ಬ್ಯಾಂಕ್ ಸೇವಾ ಮಂಡಳಿಯು (RBI Services Board) ಮ್ಯಾನೇಜರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು RBIಯ ಅಧಿಕೃತ ವೆಬ್ ಸೈಟ್ rbi.org.in ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು 2022ರ ಫೆಬ್ರವರಿ 4 ಕೊನೆಯ ದಿನವಾಗಿದೆ. ಈ ನೇಮಕಾತಿ ಡ್ರೈವ್ ಸಂಸ್ಥೆಯಲ್ಲಿ ಒಟ್ಟು 14 ಪೋಸ್ಟ್‌ಗಳನ್ನು ಭರ್ತಿ ಮಾಡಲಾಗುತ್ತದೆ. ಪರೀಕ್ಷೆಯನ್ನು ಮಾರ್ಚ್ 6, 2022 ರಂದು ನಡೆಸಲಾಗುವುದು. ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಇಲ್ಲಿವೆ.

ಹುದ್ದೆಯ ವಿವರಗಳು ಗ್ರೇಡ್ ‘ಬಿ’ ಯಲ್ಲಿ ಲೀಗಲ್ ಆಫೀಸರ್ (ಕಾನೂನು ಅಧಿಕಾರಿ): 2 ಹುದ್ದೆಗಳು

ಮ್ಯಾನೇಜರ್ (ಟೆಕ್ನಿಕಲ್-ಸಿವಿಲ್): 6 ಹುದ್ದೆಗಳು

ಮ್ಯಾನೇಜರ್ (ಟೆಕ್ನಿಕಲ್-ಎಲೆಕ್ಟ್ರಿಕಲ್): 3 ಹುದ್ದೆಗಳು

ಲೈಬ್ರರಿ ಪ್ರೊಫೆಶನಲ್ಸ್ (ಸಹಾಯಕ ಗ್ರಂಥಪಾಲಕರು) ಗ್ರೇಡ್ ‘A’: 1 ಪೋಸ್ಟ್

ಗ್ರೇಡ್ ‘A’ ನಲ್ಲಿ ಆರ್ಕಿಟೆಕ್ಟ್: 1 ಪೋಸ್ಟ್

ಕೋಲ್ಕತ್ತಾದಲ್ಲಿರುವ RBI ಮ್ಯೂಸಿಯಂಗಾಗಿ ಪೂರ್ಣಕಾಲಿಕ ಒಪ್ಪಂದದ ಮೇಲೆ ಕ್ಯುರೇಟರ್: 1 ಪೋಸ್ಟ್

ಅರ್ಹತೆಯ ಮಾನದಂಡ: ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಪರೀಕ್ಷಾ ಮಾದರಿ ಮೊದಲಾದ ಮಾಹಿತಿಯನ್ನು ವೆಬ್ ಸೈಟ್​ನಲ್ಲಿ ಪರಿಶೀಲಿಸಬಹುದು. ಅಥವಾ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ತಿಳಿಯಬಹುದು.

ಅರ್ಜಿ ಶುಲ್ಕ: ಸಾಮಾನ್ಯ/ OBC/ ಆರ್ಥಿಕ ಹಿಂದುಳಿದ ವರ್ಗಕ್ಕೆ ಅರ್ಜಿ ಶುಲ್ಕ ₹600/-, SC/ST/ PwBD ವರ್ಗಕ್ಕೆ ₹100/- ನಿಗದಿಪಡಿಸಲಾಗಿದೆ. ಬ್ಯಾಂಕ್ ಪ್ರತ್ಯೇಕವಾಗಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವ ಆರ್‌ಬಿಐ (ಸಿಬ್ಬಂದಿ ಅಭ್ಯರ್ಥಿಗಳು) ಉದ್ಯೋಗಿಗಳಿಗೆ ಮಾತ್ರ ಶುಲ್ಕ/ ಸೂಚನೆ ಶುಲ್ಕ ಮನ್ನಾ. ಒಮ್ಮೆ ಪಾವತಿಸಿದ ಶುಲ್ಕ/ಇಟಿಮೇಷನ್ ಶುಲ್ಕಗಳನ್ನು ಯಾವುದೇ ಖಾತೆಯಲ್ಲಿ ಮರುಪಾವತಿಸಲಾಗುವುದಿಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:

Railway Recruitment 2022: ರೈಲ್ವೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ: ವೇತನ 25 ಸಾವಿರ ರೂ.

Job Alert: ಗಡಿ ಭದ್ರತಾ ಪಡೆಯಲ್ಲಿ 2,788 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ವೇತನ ಸೇರಿದಂತೆ ಇತರ ಮಾಹಿತಿ ಇಲ್ಲಿದೆ