RPF Constable Recruitment 2022: ಆರ್​ಪಿಎಫ್​ನಲ್ಲಿ ಯಾವುದೇ ನೇಮಕಾತಿ ಇಲ್ಲ: ಸುಳ್ಳು ಸುದ್ದಿ ನಂಬಬೇಡಿ

| Updated By: ಝಾಹಿರ್ ಯೂಸುಫ್

Updated on: Jan 10, 2022 | 8:03 PM

RPF Constable Recruitment 2022: ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಎಂಬುದು ರೈಲ್ವೇ ಪ್ರಯಾಣಿಕರು ಮತ್ತು ಆಸ್ತಿಯ ರಕ್ಷಣೆಗಾಗಿ ರೈಲ್ವೇ ಸಚಿವಾಲಯವು ಸ್ಥಾಪಿಸಿದ ವಿಶೇಷ ಭದ್ರತಾ ಪಡೆ.

RPF Constable Recruitment 2022: ಆರ್​ಪಿಎಫ್​ನಲ್ಲಿ ಯಾವುದೇ ನೇಮಕಾತಿ ಇಲ್ಲ: ಸುಳ್ಳು ಸುದ್ದಿ ನಂಬಬೇಡಿ
RPF Constable Recruitment 2022
Follow us on

RPF Constable Recruitment 2022: ಭಾರತೀಯ ರೈಲ್ವೇ ಕಾನ್ಸ್‌ಟೇಬಲ್ ನೇಮಕಾತಿಗಾಗಿ ಅರ್ಜಿ ಆಹ್ವಾನ ಎಂಬುದು ಸುಳ್ಳು ಸುದ್ದಿ ಎಂದು ಭಾರತೀಯ ರೈಲ್ವೆ ಸಂರಕ್ಷಣಾ ಪಡೆ (RPF) ತಿಳಿಸಿದೆ. ಅಂತಹ ಯಾವುದೇ ನೇಮಕಾತಿ ಪ್ರಕಟಣೆಯನ್ನು RPF ಪ್ರಕಟಿಸಿಲ್ಲ. ಇದಾಗ್ಯೂ ಕೆಲ ವೆಬ್‌ಸೈಟ್‌ಗಳು ನೇಮಕಾತಿಯ ಸುಳ್ಳು ಸುದ್ದಿಗಳನ್ನು ಪ್ರಕಟಿಸಿವೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಭಾರತೀಯ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (ಆರ್‌ಪಿಎಸ್‌ಎಫ್) ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2022 ಪರೀಕ್ಷೆಯ ಮೂಲಕ ಪುರುಷ ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದೆ. ಆರ್‌ಪಿಎಫ್‌ನಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಅಷ್ಟೇ ಅಲ್ಲದೆ ನೇಮಕಾತಿ ಅರ್ಜಿ ಸಲ್ಲಿಸಲು ಕೆಲ ನಕಲಿ ವೆಬ್​ ಸೈಟ್​ಗಳನ್ನು ಸೃಷ್ಟಿಸಿಕೊಂಡಿವೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ವಂಚಿಸುತ್ತಿದೆ ಎಂದು ಭಾರತೀಯ ರೈಲ್ವೇ ಇಲಾಖೆ ತಿಳಿಸಿದೆ.

ರೈಲ್ವೇ ಸಚಿವಾಲಯವು ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿ 2021/2022 ಕುರಿತು ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸುಮಾರು 9000 ರಿಂದ 11000 ಹುದ್ದೆಯ ಅಂದಾಜು ಖಾಲಿ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ನಂತರ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ indianrailways.gov.in ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

RPF ಎಂದರೇನು?
ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಎಂಬುದು ರೈಲ್ವೇ ಪ್ರಯಾಣಿಕರು ಮತ್ತು ಆಸ್ತಿಯ ರಕ್ಷಣೆಗಾಗಿ ರೈಲ್ವೇ ಸಚಿವಾಲಯವು ಸ್ಥಾಪಿಸಿದ ವಿಶೇಷ ಭದ್ರತಾ ಪಡೆ. ಇದು ಭಾರತೀಯ ರಾಷ್ಟ್ರೀಯ ಅರೆಸೈನಿಕ ಪಡೆಯ ಭಾಗವಾಗಿದೆ. ಆರ್‌ಪಿಎಫ್ (ರೈಲ್ವೇ ಪ್ರೊಟೆಕ್ಷನ್ ಫೋರ್ಸ್) ರೈಲ್ವೆ ಪ್ರಯಾಣಿಕರಿಗೆ ಸಮಗ್ರ ಭದ್ರತೆಯನ್ನು ಒದಗಿಸುವ ದೊಡ್ಡ ಸಂಸ್ಥೆಯಾಗಿದೆ.

ನೀವು ಆರ್‌ಪಿಎಫ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಲು ಬಯಸಿದರೆ, ಯಾವುದೇ ಮಾನ್ಯತೆ ಪಡೆದ ಪ್ರೌಢಶಾಲೆಯಿಂದ 10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಆರ್‌ಪಿಎಫ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಅರ್ಹತಾ ಮಾನದಂಡಗಳನ್ನು ನೀವು ದೃಢೀಕರಿಸಬೇಕು.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(RPF Constable Recruitment 2022)