Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

Ashes 2021-22: ಸರ್ ಡಾನ್ ಬ್ರಾಡ್‌ಮನ್ ಆ್ಯಶಸ್‌ನಲ್ಲಿ ಆಡಿದ 37 ಟೆಸ್ಟ್‌ಗಳ 63 ಇನ್ನಿಂಗ್ಸ್‌ಗಳಲ್ಲಿ 89.78 ಸರಾಸರಿಯಲ್ಲಿ 5028 ರನ್ ಗಳಿಸಿದ್ದಾರೆ. ಈ ವೇಳೆ ಅವರು 19 ಶತಕ ಮತ್ತು 12 ಅರ್ಧ ಶತಕಗಳನ್ನು ಬಾರಿಸಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on: Jan 08, 2022 | 3:31 PM

ಇಂಗ್ಲೆಂಡ್​ ವಿರುದ್ದ ನಡೆಯುತ್ತಿರುವ ಪ್ರತಿಷ್ಠಿತ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಸ್ಟೀವ್ ಸ್ಮಿತ್ ಕೇವಲ 23 ರನ್​ಗಳಿಸಿ ಔಟಾಗಿದ್ದರು. ಆದರೆ ಕಡಿಮೆ ರನ್​ಗಳಿಸಿದರೂ ವಿಶೇಷ ದಾಖಲೆಯೊಂದು ಸ್ಮಿತ್ ಹೆಸರಿಗೆ ಸೇರ್ಪಡೆಯಾಗಿರುವುದು ವಿಶೇಷ. ಹೌದು, ಆ್ಯಶಸ್ ಸರಣಿಯಲ್ಲಿ 3 ಸಾವಿರ ರನ್​ ಪೂರೈಸಿದ ಸಾಧಕರ ಪಟ್ಟಿಗೆ ಸ್ಮಿತ್ ಕೂಡ ಸೇರ್ಪಡೆಯಾಗಿದ್ದಾರೆ.

1 / 7
ಆ್ಯಶಸ್ ಇತಿಹಾಸದಲ್ಲಿ ಕೇವಲ 5 ಬ್ಯಾಟರ್​ಗಳು ಮಾತ್ರ 3000 ಕ್ಕೂ ಅಧಿಕ ಗಳಿಸಿದ್ದಾರೆ. ಇದೀಗ ಈ ಪಟ್ಟಿಗೆ 6ನೇ ಬ್ಯಾಟರ್​ ಆಗಿ ಸ್ಮಿತ್ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ನಾಲ್ವರು ಆಸ್ಟ್ರೇಲಿಯಾ ಬ್ಯಾಟರ್​ಗಳಿದ್ದರೆ, ಇಬ್ಬರು ಇಂಗ್ಲೆಂಡ್ ಬ್ಯಾಟರ್​ಗಳಿರುವುದು. ಅಂದರೆ ಆ್ಯಶಸ್ ಸರಣಿಯಲ್ಲಿ ಆಸೀಸ್ ಬ್ಯಾಟರ್​ಗಳದ್ದೇ ಕಾರುಬಾರು ಎಂಬುದು ಸ್ಪಷ್ಟ. ಅದರಲ್ಲೂ ಪ್ರಸ್ತುತ ಆ್ಯಶಸ್ ಸರಣಿ ಆಡುತ್ತಿರುವ ಆಟಗಾರರಲ್ಲಿ ಸ್ಮಿತ್ ಮಾತ್ರ 3 ಸಾವಿರ ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

2 / 7
ಆ್ಯಶಸ್ ಸರಣಿಯಲ್ಲಿ 54 ಇನಿಂಗ್ಸ್​ ಆಡಿರುವ ಸ್ಟೀವ್ ಸ್ಮಿತ್ 3017 ರನ್​ ಸಾವಿರ ರನ್ ಕಲೆಹಾಕಿದ್ದಾರೆ.  ಈ ವೇಳೆ ಸ್ಮಿತ್ ಬ್ಯಾಟ್​ನಿಂದ 11 ಶತಕ ಮತ್ತು 11 ಅರ್ಧ ಶತಕಗಳು ಮೂಡಿ ಬಂದಿವೆ.  ಇನ್ನು ಆ್ಯಶಸ್ ಸರಣಿಯಲ್ಲಿ ಸ್ಮಿತ್ ಅವರ ಬ್ಯಾಟಿಂಗ್ ಸರಾಸರಿ 61.57 ಇದ್ದು, ಇದು ಆ್ಯಶಸ್‌ನಲ್ಲಿ 3000 ಪ್ಲಸ್ ರನ್ ಗಳಿಸಿದ ಬ್ಯಾಟರ್​ಗಳಲ್ಲಿ 2ನೇ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯಾಗಿದೆ.

3 / 7
ಸರ್ ಡಾನ್ ಬ್ರಾಡ್‌ಮನ್ ಆ್ಯಶಸ್‌ನಲ್ಲಿ ಆಡಿದ 37 ಟೆಸ್ಟ್‌ಗಳ 63 ಇನ್ನಿಂಗ್ಸ್‌ಗಳಲ್ಲಿ 89.78 ಸರಾಸರಿಯಲ್ಲಿ 5028 ರನ್ ಗಳಿಸಿದ್ದಾರೆ.  ಈ ವೇಳೆ ಅವರು 19 ಶತಕ ಮತ್ತು 12 ಅರ್ಧ ಶತಕಗಳನ್ನು ಬಾರಿಸಿದ್ದರು. ಈ ಮೂಲಕ ಆ್ಯಶಸ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದೀಗ ಬ್ಯಾಟಿಂಗ್ ಸರಾಸರಿ ವಿಷಯದಲ್ಲಿ ಸ್ಟೀವ್ ಸ್ಮಿತ್, ಸರ್ ಬ್ರಾಡ್​ಮನ್ ನಂತರದ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

4 / 7
ಇನ್ನು ಆ್ಯಶಸ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜಾಕ್ ಹಾಬ್ಸ್ ಎರಡನೇ ಸ್ಥಾನದಲ್ಲಿದ್ದಾರೆ.  ಅವರು 41 ಟೆಸ್ಟ್‌ಗಳ 71 ಇನ್ನಿಂಗ್ಸ್‌ಗಳಲ್ಲಿ 3636 ರನ್ ಗಳಿಸಿದ್ದಾರೆ.  ಹಾಗೆಯೇ ಆಸ್ಟ್ರೇಲಿಯಾದ ಇಬ್ಬರು ಮಾಜಿ ನಾಯಕರಾದ ಅಲನ್ ಬಾರ್ಡರ್ (3222) ಮತ್ತು ಸ್ಟೀವ್ ವಾ (3173) ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಗೋವರ್ 3037 ರನ್‌ಗಳೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ.

5 / 7
ಇದೀಗ ಸ್ಟೀವ್ ಸ್ಮಿತ್ 3017 ರನ್​ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. 32 ವರ್ಷದ ಸ್ಮಿತ್ ಟೆಸ್ಟ್​ ಕ್ರಿಕೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದು, ಹೀಗಾಗಿ ವೃತ್ತಿಜೀವನದ ಅಂತ್ಯದ ವೇಳೆಗೆ ಆ್ಯಶಸ್ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಎರಡನೇ ಅಥವಾ ಮೊದಲ ಸ್ಥಾನ ತಲುಪಿದರೂ ಅಚ್ಚರಿಪಡಬೇಕಿಲ್ಲ.

6 / 7
Steve Smith

Steve Smith's big achievement in the history of Ashes

7 / 7
Follow us