SAIL Recruitment 2022: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
SAIL Recruitment 2022: ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SAIL ನ ಅಧಿಕೃತ ವೆಬ್‌ಸೈಟ್ sail.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
SAIL Recruitment 2022: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL) ಪ್ರಾವೀಣ್ಯತೆ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ಪ್ಯಾರಾಮೆಡಿಕಲ್ ಹುದ್ದೆಗಳನ್ನು (SAIL ನೇಮಕಾತಿ 2022) ಭರ್ತಿ ಮಾಡಲು ಅರ್ಜಿಗಳನ್ನು ಕೋರಿದೆ. ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SAIL ನ ಅಧಿಕೃತ ವೆಬ್‌ಸೈಟ್ sail.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 78 ನರ್ಸ್ – 40 ಹುದ್ದೆಗಳು ಫಾರ್ಮಾಸಿಸ್ಟ್ -15 ಹುದ್ದೆಗಳು ಲ್ಯಾಬೋರೇಟರಿ ಮತ್ತು ಬ್ಲಡ್ ಬ್ಯಾಂಕ್ ತಂತ್ರಜ್ಞ/ಫ್ಲೆಬೋಟೊಮಿಸ್ಟ್ – 12 ಹುದ್ದೆಗಳು ಡಯಾಲಿಸಿಸ್ ತಂತ್ರಜ್ಞ -02 ಹುದ್ದೆಗಳು ಆಪ್ಟೋಮೆಟ್ರಿಸ್ಟ್ – 02 ಹುದ್ದೆಗಳು ಇಸಿಜಿ/ಇಇಜಿ ತಂತ್ರಜ್ಞ – 02 ಹುದ್ದೆಗಳು ಡ್ರೆಸ್ಸರ್ – 05 ಹುದ್ದೆಗಳು
ಅರ್ಹತಾ ಮಾನದಂಡಗಳು:
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಪದವಿ/ಡಿಪ್ಲೊಮಾ/ಪಿಜಿ ಡಿಪ್ಲೊಮಾ/MBA/BBA/PGDCA/ ಪ್ರಮಾಣಪತ್ರ ಕೋರ್ಸ್ ಹೊಂದಿರಬೇಕು. ಹಾಗೆಯೇ ಆಯಾ ಪರವಾನಗಿ/ನೋಂದಣಿ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ. ಈ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: Indian Navy SSR Recruitment 2022: ನೌಕಾಪಡೆಯ ಅಗ್ನಿವೀರರ ನೇಮಕಾತಿ: PUC ಪಾಸಾದವರಿಗೆ ಉದ್ಯೋಗಾವಕಾಶ
ಪ್ರಮುಖ ದಿನಾಂಕ: ನೇರ ಸಂದರ್ಶನದ ದಿನಾಂಕ- ಡಿಸೆಂಬರ್ 6 ಮತ್ತು 7, 2022
ಸಂದರ್ಶನ ನಡೆಯುವ ಸ್ಥಳ:
conference hall ground, Administrative Building, Bokaro Steel Plant, M46P+2HP, ADM Building , Bokaro Steel City, Jharkhand
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 2:29 pm, Thu, 1 December 22