SIMCO Recruitment 2022: ಚಾಲಕ ಸೇರಿದಂತೆ ಸಿಮ್ಕೊದಲ್ಲಿದೆ ಹಲವು ಉದ್ಯೋಗಗಳು

| Updated By: ಝಾಹಿರ್ ಯೂಸುಫ್

Updated on: May 23, 2022 | 9:43 PM

SIMCO Recruitment 2022: 10ನೇ ತರಗತಿಯಲ್ಲಿ ಪಾಸಾಗಿರುವ 22 ರಿಂದ 35 ವರ್ಷಗಳ ಒಳಗಿನ ಅಭ್ಯರ್ಥಿಗಳು ವಾಹನ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

SIMCO Recruitment 2022: ಚಾಲಕ ಸೇರಿದಂತೆ ಸಿಮ್ಕೊದಲ್ಲಿದೆ ಹಲವು ಉದ್ಯೋಗಗಳು
jobs
Follow us on

SIMCO Recruitment 2022: ಸೌತ್ ಇಂಡಿಯಾ ಮಲ್ಟಿ ಸ್ಟೇಟ್ ಅಗ್ರಿಕಲ್ಚರ್ ಕೋ-ಆಪರೇಟಿವ್ ಸೊಸೈಟಿ (SIMCO) ಲಿಮಿಟೆಡ್​ನಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಧಿಸೂಚನೆಯ ಪ್ರಕಾರ, ವೈದ್ಯ, ಹೋಮಿಯೋಪತಿ ವೈದ್ಯ, ಆಯುರ್ವೇದ ವೈದ್ಯ, ಯುನಾನಿ ವೈದ್ಯ ಮತ್ತು ಚಾಲಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:
ವೈದ್ಯ – 6 ಹುದ್ದೆಗಳು
ಹೋಮಿಯೋಪತಿ ವೈದ್ಯ – 6 ಹುದ್ದೆಗಳು
ಆಯುರ್ವೇದ ವೈದ್ಯರು – 6 ಹುದ್ದೆಗಳು
ಯುನಾನಿ ವೈದ್ಯರು – 6 ಹುದ್ದೆಗಳು
ಚಾಲಕ – 2 ಹುದ್ದೆಗಳು
ಒಟ್ಟು – 26 ಹುದ್ದೆಗಳು

ವೇತನ:
ವೈದ್ಯರು – ತಿಂಗಳಿಗೆ ರೂ 15800-35500
ಚಾಲಕ – ರೂ 8500-15000 ಪ್ರತಿ ತಿಂಗಳು

ಇದನ್ನೂ ಓದಿ
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ:
ಡಾಕ್ಟರ್- BSMS/BHMS/BAMS/BUMS ಪದವಿ ಮಾಡಿರಬೇಕು.
ಚಾಲಕ – 10 ನೇ ತರಗತಿ ತೇರ್ಗಡೆಯಾಗಿರಬೇಕು. ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಕೂಡ ಹೊಂದಿರಬೇಕು.

ವಯೋಮಿತಿ:
22 ರಿಂದ 35 ವರ್ಷಗಳ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯು ಪರೀಕ್ಷೆ/ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.

ಅರ್ಜಿ ಕಳುಹಿಸಬೇಕಾದ ವಿಳಾಸ:
Director, SOUTH INDIA MULTI-STATE AGRICULTURE CO-OPERATIVE SOCIETY LTD., HEAD OFFICE, TOWN HALL CAMPUS, NEAR OLD BUS STAND, VELLORE – 632004.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.