unemployment Reality: ಇರೋದು 15 ಜಾಬ್; ಬಂದಿರೋದು 11 ಸಾವಿರ ಮಂದಿ ಪದವೀಧರರು -ಫೈಟಿಂಗ್​ ಹೆಂಗೆ ನಡೀತು ನೋಡಿ

unemployment Reality: ಇರೋದು 15 ಜಾಬ್; ಬಂದಿರೋದು 11 ಸಾವಿರ ಮಂದಿ ಪದವೀಧರರು -ಫೈಟಿಂಗ್​ ಹೆಂಗೆ ನಡೀತು ನೋಡಿ
ಇರೋದು 15 ಜಾಬ್; ಬಂದಿರೋದು 11 ಸಾವರ ಮಂದಿ - ಫೈಟಿಂಗ್​ ಹೆಂಗೆ ನಡೀತು ನೋಡಿ

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸ್ಟ್ರೀಟ್​ ವೆಂಡರ್​ ಯೋಜನೆಯಡಿ ಸರ್ಕಾರ ಅರ್ಜಿಗಳನ್ನು ಅಹ್ವಾನಿಸಿತ್ತು. 15 ಲಕ್ಷ ಮಂದಿ ಅರ್ಜಿ ಗುಜರಾಯಿಸಿದ್ದರು. ಅವರಲ್ಲಿ 99 ಸಾವಿರ ಮಂದಿಗೆ ಅಸ್ತು ಅನ್ನಲಾಯಿತು. ಆದರೆ ವಿಷಯ ಏನು ಅಂದರೆ ಸ್ಟ್ರೀಟ್​ ವೆಂಡರ್ ಆಗಲು ಅರ್ಜಿ ಸಲ್ಲಿಸಿದ್ದವರ ಪೈಕಿ ಶೇ. 90 ರಷ್ಟು ಮಂದಿ ಪದವೀಧರರು.

TV9kannada Web Team

| Edited By: sadhu srinath

Dec 29, 2021 | 8:31 AM

ಇರೋದು 15 ಜಾಬ್; ಬಂದಿರೋದು 11 ಸಾವರ ಮಂದಿ – ಫೈಟಿಂಗ್​ ಹೆಂಗೆ ನಡೀತು ನೋಡಿ… ಈ ಚಿತ್ರಣ ಸದ್ಯಕ್ಕೆ ಮಧ್ಯ ಪ್ರದೇಶದಲ್ಲಿ ಕಂಡುಬಂದಿದೆ. ಹಾಗಂತ ಇದು ಆ ರಾಜ್ಯಕ್ಕಷ್ಟೇ ಸೀಮಿತ, ಉಳಿದ ರಾಜ್ಯಗಳಲ್ಲಿ ನಿರುದ್ಯೋಗ (unemployed) ಪರ್ವ ಇಲ್ಲ ಎಲ್ಲಾ ಸುಭುಕ್ಷವಾಗಿವೆ ಎಂದು ಭಾವಿಸಬೇಕಿಲ್ಲ. ಬಹುತೇಕ ಎಲ್ಲ ಕಡೆಯೂ ಈ ಚಿತ್ರಣ ಸಾಮಾನ್ಯ. ಅದರಲ್ಲೂ ಕೊರೊನಾ ಸಂಕಷ್ಟ ಕಾಲದಲ್ಲಿ ಉದ್ಯೋಗಕ್ಕೆ ತತ್ವಾರ ಬಂದಿರೋದು ಹೆಚ್ಚಾಗಿದೆ. ಇನ್ನು ವಾಪಸ್​ ಮಧ್ಯಪ್ರದೇಶದ ಚಿತ್ರಣಕ್ಕೆ ಬರೋದಾದರೆ ಈ ರಾಜ್ಯದಲ್ಲಿ 32 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕೋರಿ (employment) ಅರ್ಜಿ ಕೈಯಲ್ಲಿ ಹಿಡಿದುಕೊಂಡು ಹೋರಾಟ ನಡೆಸಿದ್ದಾರೆ. ಕುತೂಃಲಕಾರಿ ಸಂಗತಿಯೆಂದರೆ ಮಧ್ಯಪ್ರದೇಶದಲ್ಲಿ (Madhya Pradesh) ಸುಮಾರು 1 ಲಕ್ಷ ಉದ್ಯೋಗಗಳು ಖಾಲಿಯಿವೆ!

ಮಧ್ಯಪ್ರದೇಶದ ಗ್ವಾಲಿಯಾರ್​​ನಲ್ಲಿ ಕಳೆದ ವರ್ಷಾಂತ್ಯ ಕೇವಲ 15 ಮಂದಿಯ ಉದ್ಯೋಗಕ್ಕಾಗಿ 11 ಸಾವಿರ ಯುವಕರು ಸಾಲುಗಟ್ಟಿ ಪೈಪೋಟಿಗೆ ಇಳಿದಿದ್ದರು. ಪೀವನ್, ಡ್ರೈವರ್​, ವಾಚ್​​ಮನ್​ ಇಂತಹುದೇ ಉದ್ಯೋಗಳಿಗೆ ಇವರೆಲ್ಲಾ ಬಡಿದಾಟ ನಡೆಸಿದ್ದರು. ಸಾಲದೂ ಅಂತಾ ಉತ್ತರಪ್ರದೇಶದಿಂದಲೂ ಮಂದಿ ಉದ್ಯೋಗಕ್ಕಾಗಿ ಇಲ್ಲಿಗೆ ಬಂದಿದ್ದರು. ಇನ್ನು ಈ ಉದ್ಯೋಗಳಿಗೆಲ್ಲಾ ಜಸ್ಟ್​ ಟೆಂತ್ ಪಾಸ್​ ಆಗಿದ್ದರೆ ಸಾಕು ಎಂದು ಸರ್ಕಾರ ಪ್ರಕಟಿಸಿತ್ತು. ಆದರೆ ಬಂದಿದ್ದು ಯಾರೆಲ್ಲಾ ಗೊತ್ತಾ!? ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಹೆಚ್​.ಡಿ, ಎಂಜಿನಿಯರುಗಳು, ಎಂಬಿಎ ಕೊನೆಗೆ ಸಿವಿಲ್​ ಜಡ್ಜ್​​ ಅಭ್ಯರ್ಥಿಗಳು ಇಲ್ಲಿ ಅರ್ಜಿ ಗುಜರಾಯಿಸಿ ಸಾಲಲ್ಲಿ ನಿಂತುಬಿಟ್ಟಿದ್ದರು.

ಮಧ್ಯಪ್ರದೇಶದ ಉದ್ಯೋಗ ನೋಂದಣಿ ಕಚೇರಿಯಲ್ಲಿ 33 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 30 ಸಾವಿರ ಮಂದಿ, ಗೃಹ ಇಲಾಖೆಯಲ್ಲಿ 10 ಸಾವಿರ ಮಂದಿ, ಆರೋಗ್ಯ ಇಲಾಖೆಯಲ್ಲಿ 10 ಸಾವಿರ ಮಂದಿ, ಕಂದಾಯ ಇಲಾಖೆಯಲ್ಲಿ 10 ಸಾವಿರ ಮಂದಿ… ಹೀಗೆ ನಾನಾ ಇಲಾಖೆಯಲ್ಲಿ ಬ್ಯಾಕ್​ ಲಾಗ್​ ಸೇರಿದಂತೆ 33 ಲಕ್ಷ ಮಂದಿಗೆ ಉದ್ಯೋಗ ಖಾಲಿ ಇದೆ. ಅದಕ್ಕೇ ಉದ್ಯೋಗ ಸಿಗುತ್ತದೆ ಎಂದು ಇಷ್ಟು ಮಂದಿ ಥರಗುಟ್ಟುವ ಚಳಿಯಲ್ಲಿ ಉದ್ಯೋಗಕ್ಕಾಗಿ ಬಡಿದಾಡಿದ್ದಾರೆ.

ಉದ್ಯೋಗಕ್ಕಾಗಿ ಇಷ್ಟೊಂದು ಬರಗೆಟ್ಟ ಪರಿಸ್ಥಿತಿ ಇದೆಯಾ ಎಂಬುದರ ಬಗ್ಗೆ ಚಿಂತಿಸಿದಾಗ… ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸ್ಟ್ರೀಟ್​ ವೆಂಡರ್​ ಯೋಜನೆಯಡಿ ಸರ್ಕಾರ ಅರ್ಜಿಗಳನ್ನು ಅಹ್ವಾನಿಸಿತ್ತು. 15 ಲಕ್ಷ ಮಂದಿ ಅರ್ಜಿ ಗುಜರಾಯಿಸಿದ್ದರು. ಅವರಲ್ಲಿ 99 ಸಾವಿರ ಮಂದಿಗೆ ಅಸ್ತು ಅನ್ನಲಾಯಿತು. ಆದರೆ ವಿಷಯ ಏನು ಅಂದರೆ ಸ್ಟ್ರೀಟ್​ ವೆಂಡರ್ ಆಗಲು ಅರ್ಜಿ ಸಲ್ಲಿಸಿದ್ದವರ ಪೈಕಿ ಶೇ. 90 ರಷ್ಟು ಮಂದಿ ಪದವೀಧರರು. ಹಾಗೆ ನೋಡಿದರೆ ಮಧ್ಯಪ್ರದೇಶದಲ್ಲಿ ನಿರುದ್ಯೋಗ ಅಂಕಿಅಂಶ ನೋಡೋದಾದರೆ ಅಲ್ಲಿ ಶೇ. 1.7 ರಷ್ಟು ಮಾತ್ರವೇ ನಿರುದ್ಯೋಗ ಇರುವುದು (Centre for Monitoring Indian Economy -CMIE). ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಇದು ಅತ್ಯಂತ ಕಡಿಮೆ.

ಇದನ್ನೂ ಓದಿ: New Year 2022 Astrology Pediction- Cancer: ಕರ್ಕಾಟಕ ರಾಶಿಯವರಿಗೆ ಹೊಸ ವರ್ಷ 2022 ಹೇಗಿರಲಿದೆ, ವಿಡಿಯೋ ನೋಡಿ ಇದನ್ನೂ ಓದಿ: New Year 2022 Astrology Pediction- Gemini: ಮಿಥುನ ರಾಶಿಯವರಿಗೆ ಹೊಸ ವರ್ಷ 2022 ಹೇಗಿರಲಿದೆ, ವಿಡಿಯೋ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada