UPSC Recruitment 2022: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್​ನಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Aug 15, 2022 | 4:05 PM

UPSC Recruitment 2022: ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1 ರವರೆಗೆ ಅಧಿಕೃತ ವೆಬ್‌ಸೈಟ್ upsc.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

UPSC Recruitment 2022: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್​ನಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
UPSC Recruitment 2022
Follow us on

UPSC Recruitment 2022: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಹಾಯಕ ನಿರ್ದೇಶಕ, ಉಪ ನಿರ್ದೇಶಕ, ವೈಜ್ಞಾನಿಕ ಅಧಿಕಾರಿ (ನಾನ್ ಡಿಸ್ಟ್ರಕ್ಟಿವ್) ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1 ರವರೆಗೆ ಅಧಿಕೃತ ವೆಬ್‌ಸೈಟ್ upsc.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ- 37
  • ಸಹಾಯಕ ನಿರ್ದೇಶಕ- 2 ಹುದ್ದೆಗಳು
  • ಉಪ ನಿರ್ದೇಶಕ- 4 ಹುದ್ದೆಗಳು
  • ವೈಜ್ಞಾನಿಕ ಅಧಿಕಾರಿ (ನಾನ್-ಡೆಸ್ಟ್ರಕ್ಟಿವ್)- 1 ಹುದ್ದೆ
  • ಫೋಟೋಗ್ರಾಫಿಕ್ ಆಫೀಸರ್- 1 ಹುದ್ದೆ
  • ಹಿರಿಯ ಫೋಟೋಗ್ರಾಫಿಕ್ ಅಧಿಕಾರಿ- 1 ಹುದ್ದೆ
  • ಜೂನಿಯರ್ ಸೈಂಟಿಫಿಕ್ ಆಫೀಸರ್ (ಭೌತಶಾಸ್ತ್ರ)- 1 ಹುದ್ದೆ
  • ಜೂನಿಯರ್ ಸೈಂಟಿಫಿಕ್ ಆಫೀಸರ್ (ನ್ಯೂಟ್ರಾನ್ ಆಕ್ಟಿವೇಶನ್ ಅನಾಲಿಸಿಸ್)- 1 ಹುದ್ದೆ
  • ಭಾರತೀಯ ಮಾಹಿತಿ ಸೇವೆಯ ಹಿರಿಯ ಶ್ರೇಣಿ- 22 ಹುದ್ದೆಗಳು
  • ರೈಲ್ವೇ ಪದವಿ ಕಾಲೇಜಿನ ಪ್ರಿನ್ಸಿಪಾಲ್- 1 ಹುದ್ದೆ
  • ರಾಷ್ಟ್ರೀಯ ಅಟ್ಲಾಸ್ ಮತ್ತು ವಿಷಯಾಧಾರಿತ ಮ್ಯಾಪಿಂಗ್ ಸಂಸ್ಥೆಯಲ್ಲಿ ನಿರ್ದೇಶಕ- 1 ಹುದ್ದೆ
  • ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್)/ಸರ್ವೇಯರ್ ಆಫ್ ವರ್ಕ್ಸ್ (ಸಿವಿಲ್)- 2 ಹುದ್ದೆಗಳು

ಅರ್ಹತಾ ಮಾನದಂಡ:
ಇಲ್ಲಿ ಆಯಾ ಹುದ್ದೆಗಳಿಗೂ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದ್ದು. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯ ಮೂಲಕ ಅರ್ಹತಾ ಮಾನದಂಡಗಳು, ಶೈಕ್ಷಣಿಕ ಅರ್ಹತೆಗಳು, ವೇತನ ಶ್ರೇಣಿ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ. 25. ಪಾವತಿಸಬೇಕು. ಹಾಗೆಯೇ SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.