Karnataka Govt Jobs 2022: ಜಲಸಂಪನ್ಮೂಲ ಇಲಾಖೆಯ ಬ್ಯಾಕ್​ಲಾಗ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Jul 31, 2022 | 8:00 AM

Karnataka Govt Jobs 2022: ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Karnataka Govt Jobs 2022: ಜಲಸಂಪನ್ಮೂಲ ಇಲಾಖೆಯ ಬ್ಯಾಕ್​ಲಾಗ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
Karnataka Govt Jobs 2022
Follow us on

ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಗ್ರೂಪ್‌ ಸಿ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ 155 ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂದರೆ ಇದು ಪರಿಶಿಷ್ಟ ಜಾತಿಗೆ ಮೀಸಲಿರಿಸಿದ್ದ ಹುದ್ದೆಗಳಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ- 155
  • ಮಹಿಳಾ ಅಭ್ಯರ್ಥಿಗಳಿಗೆ- 47 ಹುದ್ದೆಗಳು
  • ಗ್ರಾಮೀಣ ಅಭ್ಯರ್ಥಿಗಳಿಗೆ- 39 ಹುದ್ದೆಗಳು
  • ಮಾಜಿ ಸೈನಿಕರಿಗೆ- 15 ಹುದ್ದೆಗಳು
  • ತೃತಿಯ ಲಿಂಗಿಗಳಿಗೆ- 2 ಹುದ್ದೆಗಳು
  • ಅಂಗವಿಕಲರಿಗೆ- 8 ಹುದ್ದೆಗಳು
  • ಯೋಜನಾ ನಿರಾಶ್ರಿತರಿಗೆ- 7 ಹುದ್ದೆಗಳು
  • ಇತರೆ- 29 ಹುದ್ದೆಗಳು

ವಿದ್ಯಾರ್ಹತೆ:
ಪಿಯುಸಿ, ಸಿಬಿಎಸ್‌ಸಿ, ಐಎಸ್‌ಸಿ 10 +, ಜೆಒಸಿ, ಜೆಒಡಿಸಿ, ಮೂರು ವರ್ಷಗಳ ಡಿಪ್ಲೋಮೊ, ಐಟಿಐ ವಿದ್ಯಾರ್ಹತೆಯ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಂದರೆ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಈ ಹುದ್ದೆಗಳಿಗೆ ಆಯ್ಕೆ ಮಾಡುವುದಿಲ್ಲ.

ಇದನ್ನೂ ಓದಿ
Anganwadi Recruitment 2022: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
HAL Recruitment 2022: ಹೆಚ್​ಎಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Coal India MT Recruitment 2022: ಕೋಲ್ ಇಂಡಿಯಾದ 481 ಹುದ್ದೆಗಳಿಗೆ ಅರ್ಜಿ ಆಹ್ವಾನ
BBMP Recruitment 2022: ‘ನಮ್ಮ ಕ್ಲಿನಿಕ್’​ನಲ್ಲಿರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಯನ್ನು ಅಭ್ಯರ್ಥಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳು ಹಾಗೂ ವಯೋಮಿತಿ ಆಧಾರದ ಮೇಲೆ ನಡೆಸಲಾಗುತ್ತದೆ. ಅಂದರೆ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 40 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಇಲ್ಲಿ ಅಭ್ಯರ್ಥಿಗಳನ್ನು 18 ರಿಂದ 28 ಮತ್ತು 29 ರಿಂದ 40 ವರ್ಷಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಇಲ್ಲಿ 29 ರಿಂದ 40 ವರ್ಷದವರೆಗಿನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದಾದ ಬಳಿಕ ಉಳಿದ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 21 ರಿಂದ 42 ಸಾವಿರದವರೆಗೆ ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 10, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.