World Bank Internship 2026: ವಿಶ್ವ ಬ್ಯಾಂಕ್‌ನಲ್ಲಿ ವೃತ್ತಿಜೀವನ ಪ್ರಾರಂಭಿಸುವ ಕನಸು ನಿಮಗಿದ್ಯಾ? ಇಲ್ಲಿದೆ ಸುವರ್ಣವಕಾಶ
ವಿಶ್ವ ಬ್ಯಾಂಕ್ ಗ್ರೂಪ್ (WBG) 'Pioneers Internship Programme 2026' ಅನ್ನು ಘೋಷಿಸಿದೆ. ಇದು ವಿದ್ಯಾರ್ಥಿಗಳಿಗೆ ಜಾಗತಿಕ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡಲು ಒಂದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆಯ ದಿನಾಂಕವಾಗಿದ್ದು, ಆಯ್ಕೆಯಾದವರಿಗೆ ಗಂಟೆಯ ಆಧಾರದ ಮೇಲೆ ಸ್ಟೈಫಂಡ್ ನೀಡಲಾಗುವುದು. ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು ಈ ಮಹತ್ವದ ಅನುಭವಕ್ಕಾಗಿ ಅರ್ಜಿ ಸಲ್ಲಿಸಬಹುದು.

ವಿಶ್ವ ಬ್ಯಾಂಕ್‌ನೊಂದಿಗೆ ಕೆಲಸ ಮಾಡುವ ಆಸೆ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. ವಿಶ್ವ ಬ್ಯಾಂಕ್ ಗ್ರೂಪ್ (WBG) ತನ್ನ “World Bank Group (WBG) Pioneers Internship Programme 2026” ಅನ್ನು ಅಧಿಕೃತವಾಗಿ ಘೋಷಿಸಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಫೆಬ್ರವರಿ 17 ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಕಾರ್ಯಕ್ರಮದ ವಿಶೇಷತೆ ಎಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಯ ಆಧಾರದ ಮೇಲೆ ಸ್ಟೈಫಂಡ್ ನೀಡಲಾಗುತ್ತದೆ. ಜೊತೆಗೆ, ಜಾಗತಿಕ ಮಟ್ಟದ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುವ ಅಮೂಲ್ಯ ಅನುಭವವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ.
Become a World Bank Group Pioneer. 𝐀𝐩𝐩𝐥𝐢𝐜𝐚𝐭𝐢𝐨𝐧𝐬 𝐟𝐨𝐫 𝐨𝐮𝐫 𝐈𝐧𝐭𝐞𝐫𝐧𝐬𝐡𝐢𝐩 𝐏𝐫𝐨𝐠𝐫𝐚𝐦 𝐨𝐩𝐞𝐧 𝐉𝐚𝐧 𝟏𝟗 – 𝐅𝐞𝐛 𝟏𝟕, 𝟐𝟎𝟐𝟔.
Join a live info session to learn how to apply and ask questions: • Jan 21, 11 AM ET (HQ+LAC) – https://t.co/GrKosdOJhy •… pic.twitter.com/hznhYWW7EE
— World Bank (@WorldBank) January 19, 2026
ಯಾರು ಅರ್ಜಿ ಸಲ್ಲಿಸಬಹುದು?
- ಪದವಿ (Graduation) ವಿದ್ಯಾರ್ಥಿಗಳು
- ಸ್ನಾತಕೋತ್ತರ (Post Graduation) ವಿದ್ಯಾರ್ಥಿಗಳು
- ಅಂತಿಮ ವರ್ಷದ ಪದವಿ / ಸ್ನಾತಕೋತ್ತರ / ಪಿಎಚ್‌ಡಿ ವಿದ್ಯಾರ್ಥಿಗಳು
ವಿಶ್ವ ಬ್ಯಾಂಕ್ ಇಂಟರ್ನ್‌ಶಿಪ್ 2026 ಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಯ ಆಧಾರದ ಮೇಲೆ ಸ್ಟೈಫಂಡ್ ನೀಡಲಾಗುತ್ತದೆ. ಆದರೆ, ವಸತಿ ವ್ಯವಸ್ಥೆಯನ್ನು ಇಂಟರ್ನ್‌ಗಳು ತಮ್ಮದೇ ಆದ ರೀತಿಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಈ ಇಂಟರ್ನ್‌ಶಿಪ್‌ಗಳು ವಾಷಿಂಗ್ಟನ್ ಡಿಸಿ ಹಾಗೂ ವಿಶ್ವ ಬ್ಯಾಂಕ್ ಗ್ರೂಪ್‌ನ ವಿವಿಧ ದೇಶಗಳ ಕಚೇರಿಗಳಲ್ಲಿ ಲಭ್ಯವಿರುತ್ತವೆ.
ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು!
ಅರ್ಜಿ ಸಲ್ಲಿಸಿದ ನಂತರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮಾರ್ಚ್ 2026 ರೊಳಗೆ ಸಂದರ್ಶನದ ಮಾಹಿತಿ ನೀಡಲಾಗುತ್ತದೆ. ಅಂತಿಮ ಆಯ್ಕೆಯೂ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಇಂಟರ್ನ್‌ಶಿಪ್ ಅವಧಿಯು ಏಪ್ರಿಲ್ 2026 ರಿಂದ ಸೆಪ್ಟೆಂಬರ್ ರವರೆಗೆ ನಡೆಯಲಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಶ್ವ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್(http://wrld.bg/EEzW50XXvKR) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಶಯ ನಿವಾರಣೆಗೆ ವಿಶ್ವ ಬ್ಯಾಂಕ್ ನಡೆಸುವ ನೇರ ಪ್ರಶ್ನೋತ್ತರ ಅಧಿವೇಶನಗಳಲ್ಲಿ ಭಾಗವಹಿಸುವ ಅವಕಾಶವೂ ಅಭ್ಯರ್ಥಿಗಳಿಗೆ ಲಭ್ಯವಿದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
