AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Job

Bank Job

ಹಲೋ ಉದ್ಯೋಗಾಕಾಂಕ್ಷಿಗಳೇ! ಸರ್ಕಾರಿ ಬ್ಯಾಂಕ್‌ನ ಜೊತೆಗೆ ವಿವಿಧ ಬ್ಯಾಂಕ್​ಗಳಲ್ಲಿ ಉದ್ಯೋಗ ಹೊಂದುವ ಕನಸು ಸಾಕಾರಗೊಳಿಸಲು ಬಯಸುವ ಪದವೀಧರರು ಮತ್ತು ವೃತ್ತಿಪರ ಅಭ್ಯರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನೀವು ಬ್ಯಾಂಕಿಂಗ್ ಉದ್ಯೋಗಕ್ಕೆ ವರ್ಷಗಳಿಂದ ತಯಾರಿ ನಡೆಸುತ್ತಿದ್ದರೆ, ವಿವಿಧ ಬ್ಯಾಂಕ್​ಗಳಿಗೆ ಸಂಬಂಧಿಸಿದ ಪ್ರಮುಖ ಪ್ರಕಟನೆಗಳು, ಏನೆಲ್ಲಾ ಪ್ರಮುಖ ಮಾಹಿತಿಗಳನ್ನು ತಿಳಿದಿರಬೇಕು, ಯಾವ್ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪದವೀಧರರು ಮತ್ತು ವೃತ್ತಿಪರ ಅಭ್ಯರ್ಥಿಗಳು ಈ ಸುವರ್ಣವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಇನ್ನೂ ಹೆಚ್ಚು ಓದಿ

BOI Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ 400 ಅಪ್ರೆಂಟಿಸ್ ನೇಮಕಾತಿ; ಪದವೀಧರರು ಅರ್ಹರು

ಬ್ಯಾಂಕ್ ಆಫ್ ಇಂಡಿಯಾ 400 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಪ್ರಕ್ರಿಯೆ ಡಿಸೆಂಬರ್ 25 ರಿಂದ ಪ್ರಾರಂಭವಾಗಿದ್ದು, ಜನವರಿ 10 ಕೊನೆಯ ದಿನಾಂಕ. ಪದವೀಧರ ಅಭ್ಯರ್ಥಿಗಳು (20-28 ವಯಸ್ಸು) bankofindia.bank.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ಮೂಲಕ ನಡೆಯಲಿದೆ. ಶುಲ್ಕ ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ.

SBI Recruitment 2025: SBIನಲ್ಲಿ 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗೆ ನೇಮಕಾತಿ; ಪದವೀಧರರು ಅರ್ಹರು!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SEO) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ಜನವರಿ 5 ರವರೆಗೆ ವಿಸ್ತರಿಸಿದೆ. ಪದವೀಧರರಿಗೆ ಇದೊಂದು ಸುವರ್ಣಾವಕಾಶ. ಆಸಕ್ತ ಅಭ್ಯರ್ಥಿಗಳು sbi.co.in ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹತೆ, ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

RBI Recruitment 2025: ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಲಿಖಿತ ಪರೀಕ್ಷೆಯಿಲ್ಲದೆ 93 ತಜ್ಞರ ಹುದ್ದೆಗೆ ನೇಮಕಾತಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) 93 ತಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇವು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ. ಆಸಕ್ತರು ಜನವರಿ 6 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರಗಳನ್ನು ನೀಡಲಾಗಿದೆ. ಲಿಖಿತ ಪರೀಕ್ಷೆ ಇಲ್ಲ, ಸಂದರ್ಶನದ ಮೂಲಕ ಆಯ್ಕೆ. ಉತ್ತಮ ವೇತನದ ಜೊತೆಗೆ ಉದ್ಯೋಗ ಪಡೆಯಲು ಇದು ಸುವರ್ಣವಕಾಶ.

SBI SO Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 996 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಪದವೀಧರರು ಡಿಸೆಂಬರ್ 23 ರೊಳಗೆ sbi.bank.in/careers ಮೂಲಕ ಅರ್ಜಿ ಸಲ್ಲಿಸಬಹುದು. VP ವೆಲ್ತ್, AVP ವೆಲ್ತ್ ಮತ್ತು ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಿಗೆ ವಯೋಮಿತಿ ಮತ್ತು ಅರ್ಹತಾ ಮಾನದಂಡಗಳು ವಿಭಿನ್ನವಾಗಿವೆ. ಅರ್ಜಿ ಶುಲ್ಕ 750 ರೂ. (ಕೆಲವು ವರ್ಗಗಳಿಗೆ ವಿನಾಯಿತಿ). ಶಾರ್ಟ್‌ಲಿಸ್ಟ್ ಮಾಡಿದವರನ್ನು ಸಂದರ್ಶನಕ್ಕೆ ಕರೆಯಲಾಗುವುದು.