Mann Ki Baat Conclave: ಮನ್​ ಕಿ ಬಾತ್ ರಾಷ್ಟ್ರೀಯ ಸಮಾವೇಶದಲ್ಲಿ ಚಿತ್ರರಂಗದವರು ಭಾಗಿ; ನಟ ಆಮಿರ್ ಖಾನ್ ಹೇಳಿದ್ದೇನು?

|

Updated on: Apr 26, 2023 | 12:52 PM

ಇಂದಿನ ಸಮಾವೇಶದಲ್ಲಿ (ಏಪ್ರಿಲ್ 26) ದೀರ್ಘ ಚರ್ಚೆ ನಡೆಯಲಿದೆ. ಇದರಲ್ಲಿ ಭಾಗಿ ಆಗುವುದಕ್ಕೂ ಮೊದಲು ಆಮಿರ್ ಖಾನ್ ಮಾತನಾಡಿದ್ದಾರೆ.

Mann Ki Baat Conclave: ಮನ್​ ಕಿ ಬಾತ್ ರಾಷ್ಟ್ರೀಯ ಸಮಾವೇಶದಲ್ಲಿ ಚಿತ್ರರಂಗದವರು ಭಾಗಿ; ನಟ ಆಮಿರ್ ಖಾನ್ ಹೇಳಿದ್ದೇನು?
ಆಮಿರ್ ಖಾನ್
Follow us on

ನರೇಂದ್ರ ಮೋದಿ (Narendra Modi) ಅವರು ಪ್ರಧಾನಿ ಆದ ಬಳಿಕ ‘ಮನ್​ ಕಿ ಬಾತ್’ ಕಾರ್ಯಕ್ರಮ ಆರಂಭಿಸಿದ್ದರು. ಇದರ ನೂರನೇ ಎಪಿಸೋಡ್ ಏಪ್ರಿಲ್ 30ರಂದು ಪ್ರಸಾರ ಕಾಣುತ್ತಿದೆ. ಈ ವಿಶೇಷ ಎಪಿಸೋಡ್​ನ ಸ್ಮರಣೀಯವಾಗಿಸಲು ಸಮಾವೇಶ ಆಯೋಜನೆ ಮಾಡಲಾಗಿದೆ. ಆಮಿರ್ ಖಾನ್ (Aamir Khan) ​, ರವೀನಾ ಟಂಡನ್, ಕ್ರೀಡಾ ಜಗತ್ತಿನ ದೀಪಾ ಮಲಿಕ್, ನಿಖತ್ ಜರೀನ್ ಭಾಗಿ ಆಗಲಿದ್ದಾರೆ. ಇದರ ಜೊತೆಗೆ ಪತ್ರಕರ್ತರು, ಆರ್​ಜೆ ಹಾಗೂ ಉದ್ಯಮಿಗಳು ಕೂಡ ಇದರಲ್ಲಿ ಭಾಗಿ ಆಗುತ್ತಿದ್ದಾರೆ.

ಇಂದಿನ ಸಮಾವೇಶದಲ್ಲಿ (ಏಪ್ರಿಲ್ 26) ದೀರ್ಘ ಚರ್ಚೆ ನಡೆಯಲಿದೆ. ಇದರಲ್ಲಿ ಭಾಗಿ ಆಗುವುದಕ್ಕೂ ಮೊದಲು ಮಾತನಾಡಿರುವ ಆಮಿರ್ ಖಾನ್, ‘ಜನರೊಂದಿಗೆ ದೇಶದ ನಾಯಕ ಮಾಡುತ್ತಿರುವ ಅತ್ಯಂತ ಪ್ರಮುಖವಾದ ಸಂವಹನ ಇದು. ಪ್ರಮುಖ ವಿಷಯಗಳನ್ನು ಚರ್ಚಿಸುವುದು, ಆಲೋಚನೆಗಳನ್ನು ಮುಂದಿಡುವುದು ಮತ್ತು ಸಲಹೆಗಳನ್ನು ನೀಡುವ ಕೆಲಸ ಆಗಲಿದೆ. ಮನ್​ ಕಿ ಬಾತ್​ನಲ್ಲಿ ಇದು ಆಗುತ್ತಿದೆ ಅನ್ನೋದು ಮುಖ್ಯ’ ಎಂದಿದ್ದಾರೆ ಅವರು.

ಈ ಕಾರ್ಯಕ್ರಮವನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ಆಯೋಜನೆ ಮಾಡಿದೆ. ದೇಶದ 100 ನಾಗರೀಕರು ಇದರಲ್ಲಿ ಭಾಗಿ ಆಗಲಿದ್ದಾರೆ. ಎರಡು ಪುಸ್ತಕ ಬಿಡುಗಡೆ ಆಗಲಿದೆ. ಸ್ಟಾಂಪ್ ಹಾಗೂ ಕಾಯಿನ್ ಕೂಡ ಇಲ್ಲಿ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: Mann Ki Baat@100: ಮನ್ ಕಿ ಬಾತ್ 100 ಕೋಟಿ ಕೇಳುಗರನ್ನು ತಲುಪಿದೆ: IIM ಸಮೀಕ್ಷೆ

‘ಮನ್ ಕಿ ಬಾತ್​​ನಲ್ಲಿ ನಾನು ಹಲವು ಬಾರಿ ರಾಗಿ ಬಗ್ಗೆ ಪ್ರಸ್ತಾಪಿಸಿದ್ದೆ. ಮುಂದಿನ ಭಾನುವಾರ ಮನ್ ಕಿ ಬಾತ್ 100ನೇ ಸಂಚಿಕೆ ಪೂರೈಸಲಿದೆ. ಜನರ ವಿಶೇಷತೆಗಳನ್ನು ಎತ್ತಿ ಹಿಡಿಯಲು ಮನ್ ಕಿ ಬಾತ್ ಉತ್ತಮ ವೇದಿಕೆಯಾಗಿದೆ. ನಿಮ್ಮಂತೆ ನಾನು ಕೂಡ 100 ನೇ ಸಂಚಿಕೆಗಾಗಿ ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಮೋದಿ ಹೇಳಿದ್ದರು. 100ನೇ ಸಂಚಿಕೆ ತುಂಬಾನೇ ವಿಶೇವಾಗಿರಲಿದೆ’ ಎಂದು ಮೋದಿ ಇತ್ತೀಚೆಗೆ ಹೇಳಿದ್ದರು.

ಆಮಿರ್ ಖಾನ್ ಅವರು ಸದ್ಯ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಕುಟುಂಬಕ್ಕೆ ಹೆಚ್ಚು ಸಮಯ ಕೊಡಬೇಕು ಎಂಬುದು ಅವರು ಉದ್ದೇಶ. ಈ ಬ್ರೇಕ್​ನಲ್ಲಿ ಅವರು ಹಲವು ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಟಿಸಲಿರುವ ಸಿನಿಮಾ ಅನ್ನು ಆಮಿರ್ ಖಾನ್ ನಿರ್ಮಾಣ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:50 pm, Wed, 26 April 23