ಮಲಯಾಳಂನ ‘ದೃಶ್ಯಂ’ (Drishyam) ಹಾಗೂ ‘ದೃಶ್ಯಂ 2’ ಸಿನಿಮಾಗಳು ಸೂಪರ್ ಹಿಟ್ ಆದವು. ಕನ್ನಡ, ಹಿಂದಿ ಮೊದಲಾದ ಭಾಷೆಗಳಿಗೆ ಈ ಸಿನಿಮಾನ ರಿಮೇಕ್ ಮಾಡಲಾಯಿತು. ಅಲ್ಲಿಯೂ ಸಿನಿಮಾ ಹಿಟ್ ಆದವು. ಹಿಂದಿಯಲ್ಲಿ ಈ ಚಿತ್ರವನ್ನು ರಿಮೇಕ್ ಮಾಡುವ ಹಕ್ಕನ್ನು ಪನೋರಮ ಸ್ಟುಡಿಯೋಸ್ ಇಂಟರ್ನ್ಯಾಷನಲ್ ಪಡೆದುಕೊಂಡಿತ್ತು. ಈಗ ಇವರು ವಿದೇಶಿ ಭಾಷೆಗಳ ರಿಮೇಕ್ ಹಕ್ಕನ್ನು ಪಡೆದಿದ್ದಾರೆ. ಈ ಮೂಲಕ ಚೈನೀಸ್ (Chinees) ಮೊದಲಾದ ಭಾಷೆಗಳಿಗೆ ಈ ಸಿನಿಮಾನ ರಿಮೇಕ್ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಪನೋರಮ ಸ್ಟುಡಿಯೋಸ್ ಇಂಟರ್ನ್ಯಾನಲ್ ಕಡೆಯಿಂದಲೇ ಮಾಹಿತಿ ಸಿಕ್ಕಿದೆ. ‘ಹಿಂದಿಯಲ್ಲಿ ದೃಶ್ಯಂ 2 ಯಶಸ್ಸು ಕಂಡಿತು. ಈ ಬೆನ್ನಲ್ಲೇ ನಾವು ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕನ್ನು ಪಡೆದಿದ್ದೇವೆ. ಸದ್ಯ ನಾವು ಕೊರಿಯನ್, ಜಪಾನೀಸ್ ಹಾಗೂ ಹಾಲಿವುಡ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಪನೋರಮ ಸ್ಟುಡಿಯೋಸ್ ಇಂಟರ್ನ್ಯಾಷನಲ್ ತಿಳಿಸಿದೆ.
‘DRISHYAM 1’, ‘DRISHYAM 2’ TO BE REMADE IN NON-INDIAN LANGUAGES… Panorama Studios Intl Ltd acquires remake rights of #Malayalam language #Drishyam 1 and #Drishyam2 in all non-Indian languages, including #English, but excluding #Filipino, #Sinhala and #Indonesian. pic.twitter.com/5FyEslriXU
— taran adarsh (@taran_adarsh) February 8, 2023
ಮೂಲ ಚಿತ್ರದಲ್ಲಿ ಮೋಹನ್ಲಾಲ್, ಜೀತು ಜೊಸೆಫ್, ಮೀನಾ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ಜೀತು ಜೊಸೆಫ್ ನಿರ್ದೇಶನ ಮಾಡಿದ್ದರು. ಕಿರುಕುಳ ಕೊಡುತ್ತಿರುವ ವ್ಯಕ್ತಿಯನ್ನು ಕಥಾನಾಯಕನ ಕುಟುಂಬದವರು ಹತ್ಯೆ ಮಾಡುತ್ತಾರೆ. ಆ ಹೆಣವನ್ನು ನಿರ್ಮಾಣ ಆಗುತ್ತಿರುವ ಪೊಲೀಸ್ ಠಾಣೆ ಒಳಗೆ ಹುಗಿದು ಹಾಕುತ್ತಾನೆ. ಈ ಪ್ರಕರಣದಿಂದ ಆತ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾದ ಕಥೆ.
‘ದೃಶ್ಯಂ 2’ ಚಿತ್ರದಲ್ಲಿ ಪೊಲೀಸ್ ಠಾಣೆ ಅಡಿಯಲ್ಲಿ ಮೂಳೆಗಳು ಇವೆ ಎಂಬ ವಿಚಾರ ರಿವೀಲ್ ಆಗುತ್ತದೆ. ಇದರಿಂದಲೂ ಕಥಾನಾಯಕ ತಪ್ಪಿಸಿಕೊಳ್ಳುತ್ತಾನೆ. ಅದು ‘ದೃಶ್ಯಂ 2’ನ ಸಸ್ಪೆನ್ಸ್. ಕನ್ನಡದಲ್ಲಿ ರವಿಚಂದ್ರನ್ ಅವರು ಮುಖ್ಯ ಪಾತ್ರ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ