ಬಹುಭಾಷಾ ನಟಿ ರಾಕುಲ್ ಪ್ರೀತಿ ಸಿಂಗ್ (Rakul Preet Singh) ಕೈಯಲ್ಲಿ ಹಲವು ಸಿನಿಮಾಗಳಿವೆ. ಅವುಗಳಲ್ಲಿ ಬಹುತೇಕ ಚಿತ್ರಗಳು ಶೂಟಿಂಗ್ ಮುಗಿಸಿದ್ದು, ತೆರೆಗೆ ಬರಲು ಸಿದ್ಧವಾಗಿವೆ. ಅವೆಲ್ಲವೂ 2022ರಲ್ಲಿ ತೆರೆಕಾಣಲಿದೆ ಎಂಬ ನಿರೀಕ್ಷೆ ನಟಿಯಲ್ಲಿದೆ. ‘ಅಟ್ಯಾಕ್’, ‘ರನ್ವೇ 34’, ‘ಡಾಕ್ಟರ್ ಜಿ’ ಮತ್ತು ‘ಥ್ಯಾಂಕ್ಗಾಡ್’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ರಿಲೀಸ್ ದಿನಾಂಕಗಳನ್ನೂ ಘೋಷಿಸಿವೆ. ವಿಶೇಷವೆಂದರೆ ಇಷ್ಟೂ ಚಿತ್ರಗಳು ಚಿತ್ರಮಂದಿರಗಳಲ್ಲೇ ತೆರೆಕಾಣಲಿವೆ. ಈ ಚಿತ್ರಗಳು ಬಿಡುಗಡೆಯಾಗುವುದನ್ನೇ ತಾನು ಕಾಯುತ್ತಿದ್ದೇನೆ, ಈ ವರ್ಷ ಬಹಳ ವಿಶೇಷವಾದುದು. ಸಿನಿ ಪ್ರೇಮಿಗಳು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಲು ಕಾತರಳಾಗಿದ್ದೇನೆ ಎಂದು ನಟಿ ಹೇಳಿಕೊಂಡಿದ್ದರು. ಆದರೆ ಇದೀಗ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಬಹಳಷ್ಟು ಚಿತ್ರಗಳ ಬಿಡುಗಡೆ ಮುಂದೂಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ ನಟಿ ಭರವಸೆಯ ಮಾತುಗಳನ್ನು ಆಡಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಮಾತನಾಡುತ್ತಾ ಚಿತ್ರಗಳು ಬಿಡುಗಡೆಯಾಗಬೇಕು. ಬಹಳಷ್ಟು ಜನರ ಜೀವನ ಇದನ್ನೇ ಅವಲಂಬಿಸಿವೆ ಎಂದು ಕಾಳಜಿಯ ಮಾತುಗಳನ್ನಾಡಿದ್ದಾರೆ. ‘‘ಬಹಳಷ್ಟು ಜನರು ಚಿತ್ರಗಳು ಹೊರ ಬರುವುದನ್ನೇ ಕಾಯುತ್ತಿದ್ದಾರೆ. ಮತ್ತು ಅದಕ್ಕಾಗಿ ಬಹಳ ಕಷ್ಟಪಡುತ್ತಿದ್ದಾರೆ. ಕಲಾವಿದರು, ನಿರ್ದೇಶಕರು, ನಿರ್ಮಾಪಕರ ಹೊರತಾಗಿಯೂ ಚಿತ್ರಮ=ರಂಗ ನಂಬಿ ಬದುಕುವ ಬಹುದೊಡ್ಡ ಜನರಿದ್ದಾರೆ. ಅವರೆಲ್ಲರ ಜೀವನ ಸಂಕಷ್ಟದಲ್ಲಿದೆ’’ ಎಂದಿದ್ದಾರೆ ನಟಿ.
ಕೊರೊನಾ ಪ್ರಕರಣಗಳು ಮತ್ತೆ ಏರುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ನಟಿ, ಒಮಿಕ್ರಾನ್ ಪ್ರಕರಣಗಳು ಏರುತ್ತಿರುವುದು ಕಟು ವಾಸ್ತವ ಎಂದಿದ್ದಾರೆ. ‘‘ಈಗ ಎಲ್ಲವೂ ಅನಿಶ್ಚಿತವಾಗಿದೆ. ಎಲ್ಲವೂ ಸರಿಯಾಗಲಿ ಎಂದು ನಾವು ಆಶಿಸಬಹುದಷ್ಟೇ. ಎಲ್ಲರೂ ಲಸಿಕೆ ಪಡೆಯಿರಿ. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ. ಕೊರೊನಾ ಸೋಂಕು ಶಾಶ್ವತವಾಗಿ ಇರಬಾರದು. ನಾವು ವೈರಸ್ ವಿರುದ್ಧ ಹೋರಾಡಬೇಕು’’ ಎಂದಿದ್ದಾರೆ ರಾಕುಲ್.
2021ರಲ್ಲಿ ಕೊರೊನಾ ನಡುವೆಯೂ ಚಿತ್ರಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಮುಂದೆಯೂ ಹೀಗೇ ಆಗಬಹುದು ಎನ್ನುವ ಭರವಸೆ ಇದೆ ಎಂದಿದ್ದಾರೆ ನಟಿ. ಭವಿಷ್ಯದಲ್ಲಿ ಎಲ್ಲವೂ ಮೊದಲಿನಂತೆ ಆಗಲಿದೆ ಎಂದು ರಾಕುಲ್ ಪ್ರೀತ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Radhe Shyam: ಓಟಿಟಿ ರಿಲೀಸ್ ಮಾಡುವಂತೆ ‘ರಾಧೆ ಶ್ಯಾಮ್’ಗೆ ಬರೋಬ್ಬರಿ 350 ಕೋಟಿ ಆಫರ್; ಚಿತ್ರತಂಡದ ಪ್ಲಾನ್ ಏನು?
Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ