ಟೀಕೆ ಬಂದರೇನಂತೆ? ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆದ ತೆಗೆದ ‘ಆದಿಪುರುಷ್’ ಸಿನಿಮಾ

Adipurush Movie First Day Collection: ಒಳ್ಳೆಯ ಓಪನಿಂಗ್ ಪಡೆಯಲೇಬೇಕಾದ ಅನಿವಾರ್ಯತೆ ಬಿಗ್ ಬಜೆಟ್ ಚಿತ್ರಗಳಿಗೆ ಇರುತ್ತದೆ. ಹಾಗಾದರೆ ಮಾತ್ರ ನಿರ್ಮಾಪಕರು ಲಾಭ ಕಾಣುತ್ತಾರೆ. ‘ಆದಿಪುರುಷ್’ ಚಿತ್ರಕ್ಕೂ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಟೀಕೆ ಬಂದರೇನಂತೆ? ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆದ ತೆಗೆದ ‘ಆದಿಪುರುಷ್’ ಸಿನಿಮಾ
ಸೈಫ್​-ಪ್ರಭಾಸ್
Edited By:

Updated on: Jun 17, 2023 | 10:55 AM

ಪ್ರಭಾಸ್ ಹಾಗೂ ಕೃತಿ ಸನೋನ್​ ನಟನೆಯ ‘ಆದಿಪುರುಷ್’ ಸಿನಿಮಾ (Adipurush Movie) ಬಗ್ಗೆ ಕೇಳಿ ಬಂದ ಟೀಕೆಗಳು ಒಂದೆರಡಲ್ಲ. ಈ ಚಿತ್ರಕ್ಕೆ ಸಾಕಷ್ಟು ನೆಗೆಟಿವ್ ಕಮೆಂಟ್​ಗಳು ಬಂದವು. ವಿಮರ್ಶೆಯಲ್ಲಿ ಮಿಶ್ರಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರ ಐಎಂಡಿಬಿಯಲ್ಲಿ ಕಡಿಮೆ ರೇಟಿಂಗ್ ಪಡೆದಿದೆ. ಆದರೆ, ಚಿತ್ರದ ಬಾಕ್ಸ್ ಆಫೀಸ್​ ಮೇಲೆ ಇದೆಲ್ಲ ಅಷ್ಟಾಗಿ ಪ್ರಭಾವ ಬೀರಲೇ ಇಲ್ಲ. ಹೌದು, ಮೊದಲ ದಿನ ‘ಆದಿಪುರುಷ್’ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿದೆ. ವಿಶ್ವಾದ್ಯಂತ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ 150 ಕೋಟಿ ರೂಪಾಯಿ ದಾಟಿದೆ ಎಂದು ವರದಿ ಆಗಿದೆ. ಈ ಮೂಲಕ ಒಳ್ಳೆಯ ಓಪನಿಂಗ್ ಪಡೆದಿದೆ.

ಒಳ್ಳೆಯ ಓಪನಿಂಗ್ ಪಡೆಯಲೇಬೇಕಾದ ಅನಿವಾರ್ಯತೆ ಬಿಗ್ ಬಜೆಟ್ ಚಿತ್ರಗಳಿಗೆ ಇರುತ್ತದೆ. ಹಾಗಾದರೆ ಮಾತ್ರ ನಿರ್ಮಾಪಕರು ಲಾಭ ಕಾಣುತ್ತಾರೆ. ಅದೇ ರೀತಿಯಲ್ಲಿ ‘ಆದಿಪುರುಷ್’ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಜೂನ್ 16ರಂದು ರಿಲೀಸ್ ಈ ಚಿತ್ರ ಇಂದು (ಜೂನ್17) ಹಾಗೂ ನಾಳೆ (ಜೂನ್ 18) ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

ಹಿಂದಿ, ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ‘ಆದಿಪುರುಷ್’ ರಿಲೀಸ್ ಆಗಿದೆ. ಭಾರತದಲ್ಲಿ ಈ ಚಿತ್ರ 110-112 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ವರ್ಷನ್​ನ ಒಂದರಲ್ಲೇ ಈ ಚಿತ್ರದ ಗಳಿಕೆ 36-38 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಈ ಚಿತ್ರ 150 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಏರಿಕೆ ಆಗಬಹುದು.

ಇದನ್ನೂ ಓದಿ: ಐಎಂಡಿಬಿಯಲ್ಲಿ ಅತೀ ಕಡಿಮೆ ರೇಟಿಂಗ್ ಪಡೆದ ‘ಆದಿಪುರುಷ್’; ಬುಕ್ ಮೈ ಶೋ ರೇಟಿಂಗ್ ಎಷ್ಟು?

ಇಂಟರ್ನೆಟ್ ಮೂವೀ ಡೇಟಾಬೇಸ್​ನಲ್ಲಿ (ಐಎಂಡಿಬಿ) ‘ಆದಿಪುರುಷ್’ ಚಿತ್ರಕ್ಕೆ ಕಡಿಮೆ ರೇಟಿಂಗ್ ಸಿಕ್ಕಿದೆ. ಈ ಸಿನಿಮಾ ಸದ್ಯ 2.9 ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಸಿನಿಮಾಗೆ ಅತೀ ಕಡಿಮೆ ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರೇಟಿಂಗ್ ಹೆಚ್ಚಬಹುದು ಅನ್ನೋದು ಅಭಿಮಾನಿಗಳ ನಂಬಿಕೆ. ಐಎಂಡಿಬಿಗೆ ಹೋಲಿಕೆ ಮಾಡಿದರೆ ಬುಕ್ ಮೈ ಶೋನಲ್ಲಿ ‘ಆದಿಪುರುಷ್’ ರೇಟಿಂಗ್ ಕೊಂಚ ಉತ್ತಮವಾಗಿದೆ. ಈವರೆಗೆ 81 ಸಾವಿರ ಮಂದಿ ರೇಟಿಂಗ್ ನೀಡಿದ್ದು, 10ಕ್ಕೆ 7.4 ರೇಟಿಂಗ್ ಪಡೆದಿದೆ. ಈ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 10:33 am, Sat, 17 June 23

Web contact

TV9 Kannada

Read More
Follow Us