Adipurush: ಹನುಮ ಜಯಂತಿ ಪ್ರಯುಕ್ತ ಹೊಸ ಪೋಸ್ಟರ್​ ಹಂಚಿಕೊಂಡ ‘ಆದಿಪುರುಷ್​’ ಚಿತ್ರತಂಡ

|

Updated on: Apr 06, 2023 | 12:26 PM

Hanuma Jayanti 2023: ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿನಿಮಾ ಮೂಡಿಬರುತ್ತಿದೆ. ಜೂನ್​ 16ರಂದು ಈ ಚಿತ್ರ ಬಿಡುಗಡೆ ಆಗಲಿದೆ.

Adipurush: ಹನುಮ ಜಯಂತಿ ಪ್ರಯುಕ್ತ ಹೊಸ ಪೋಸ್ಟರ್​ ಹಂಚಿಕೊಂಡ ‘ಆದಿಪುರುಷ್​’ ಚಿತ್ರತಂಡ
ಆದಿಪುರುಷ್ ಸಿನಿಮಾ ಪೋಸ್ಟರ್
Follow us on

ಎಲ್ಲೆಡೆ ಇಂದು (ಏಪ್ರಿಲ್​ 6) ಹನುಮ ಜಯಂತಿ (Hanuma Jayanti 2023) ಆಚರಿಸಲಾಗುತ್ತಿದೆ. ಆ ಸಂಭ್ರಮವನ್ನು ಹೆಚ್ಚಿಸುವ ರೀತಿಯಲ್ಲಿ ‘ಆದಿಪುರುಷ್​’ (Adipurush Movie) ತಂಡದಿಂದ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಬಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ಆಂಜನೇಯನ ಪೋಸ್ಟರ್​ ಇದಾಗಿದ್ದು, ಹಿನ್ನೆಲೆಯಲ್ಲಿ ರಾಮನ ಪಾತ್ರ ಮಾಡಿರುವ ಪ್ರಭಾಸ್​ ಫೋಟೋ ಕಾಣಿಸಿದೆ. ಇದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಈ ಮೊದಲು ರಿಲೀಸ್​ ಆದ ಪೋಸ್ಟರ್​ಗಳನ್ನು ಟ್ರೋಲ್​ ಮಾಡಲಾಗಿತ್ತು. ಆದರೆ ಹನುಮಂತದ ಪೋಸ್ಟರ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಓಂ ರಾವತ್​ (Om Raut) ಅವರು ‘ಆದಿಪುರುಷ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿನಿಮಾ ಮೂಡಿಬರುತ್ತಿದೆ. ಜೂನ್​ 16ರಂದು ಈ ಚಿತ್ರ ಬಿಡುಗಡೆ ಆಗಲಿದೆ. ರಾಮನಾಗಿ ಪ್ರಭಾಸ್​, ಸೀತೆಯಾಗಿ ಕೃತಿ ಸನೋನ್​, ಲಕ್ಷ್ಮಣನಾಗಿ ಸನ್ನಿ ಸಿಂಗ್​​, ರಾವಣನಾಗಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣದಲ್ಲಿ ಆಂಜನೇಯನ ಪಾತ್ರಕ್ಕೆ ಹೆಚ್ಚು ಮಹತ್ವ ಇದೆ. ಈ ಪಾತ್ರದಲ್ಲಿ ದೇವದತ್ತ ನಾಗೆ ಅವರು ನಟಿಸುತ್ತಿದ್ದಾರೆ. ಹೊಸ ಪೋಸ್ಟರ್​ನಲ್ಲಿ ಅವರನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ದೇವದತ್ತ ನಾಗೆ ಅವರು ಮಾರಾಠಿ ಧಾರಾವಾಹಿಯಲ್ಲಿ ಪೌರಾಣಿಕ ಪಾತ್ರ ಮಾಡಿ ಫೇಮಸ್​ ಆಗಿದ್ದಾರೆ. ‘ಒನ್ಸ್​ ಅಪಾನ್​ ಎ ಟೈಮ್ ಇನ್​ ಮುಂಬೈ ದೊಬಾರಾ​’, ‘ತಾನಾಜಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರನ್ನು ‘ಆದಿಪುರುಷ್​’ ಸಿನಿಮಾದಲ್ಲಿ ಹನುಮಂತನ ವೇಷದಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಪೋಸ್ಟರ್​ ವೈರಲ್​ ಆಗಿದೆ.

‘ಆದಿಪುರುಷ್​’ ಪೋಸ್ಟರ್​ ಮೇಲೆ ಕೇಸ್​:

ರಾಮನವಮಿ ಪ್ರಯುಕ್ತ ‘ಆದಿಪುರುಷ್​’ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಯಿತು. ಆದರೆ ಅದನ್ನು ಕಂಡು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಈ ವಿಷಯ ಈಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ನಿರ್ದೇಶಕ ಓಂ ರಾವತ್ ನಟ ಪ್ರಭಾಸ್​ ಸೇರಿದಂತೆ ಇಡೀ ಚಿತ್ರತಂಡದ ಮೇಲೆ ದೂರು ನೀಡಲಾಗಿದೆ. ಈ ಪೋಸ್ಟರ್​ನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Prabhas: 1 ರೂಪಾಯಿ ಸಂಭಾವನೆ ಕೂಡ ಬೇಡ ಎಂಬ ನಿರ್ಧಾರಕ್ಕೆ ಬಂದ ಪ್ರಭಾಸ್​; ಏನಿದು ಹೊಸ ತಂತ್ರ?

ಸಂಜಯ್​ ದೀನನಾಥ್​ ತಿವಾರಿ ಎಂಬುವವರು ‘ಆದಿಪುರುಷ್​’ ಸಿನಿಮಾತಂಡದ ವಿರುದ್ಧ ದೂರು ನೀಡಿದ್ದಾರೆ. ಹೊಸ ಪೋಸ್ಟರ್​ನಲ್ಲಿ ರಾಮಚರಿತಮಾನಸದ ವಿವರಗಳನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಮ ಧರಿಸಿದ ವಸ್ತ್ರ ಸರಿಯಾಗಿಲ್ಲ. ಜನಿವಾರವನ್ನು ತೆಗೆಯಲಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿಂದೆ ಟೀಸರ್​ ಬಿಡುಗಡೆ ಆದಾಗಲೂ ಕಿರಿಕ್​ ಮಾಡಲಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:26 pm, Thu, 6 April 23