‘ಜೈಲರ್’ ಗೆದ್ದ ಖುಷಿಯಲ್ಲಿ ರಜನಿಗೆ 100 ಕೋಟಿ ರೂ. ಚೆಕ್ ಕೊಟ್ಟ ಕಲಾನಿಧಿ ಮಾರನ್; ಒಟ್ಟೂ ಸಂಭಾವನೆ ಎಷ್ಟು?

|

Updated on: Sep 01, 2023 | 11:21 AM

ರಜನಿಕಾಂತ್ ಅವರು ‘ಜೈಲರ್’ ಚಿತ್ರಕ್ಕಾಗಿ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಭಾವನೆ ಹಣವನ್ನು ಈ ಮೊದಲೇ ನೀಡಲಾಗಿದೆ. ಇದರ ಜೊತೆಗೆ ಪ್ರಾಫಿಟ್​ನಲ್ಲೂ ರಜನಿಗೆ ಪಾಲು ಸಿಕ್ಕಿದೆ. ಸನ್ ಪಿಕ್ಚರ್ಸ್​ನ ಮುಖ್ಯಸ್ಥ ಕಲಾನಿಧಿ ಮಾರನ್ ಅವರು ರಜನಿಕಾಂತ್​ಗೆ 100 ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ!

‘ಜೈಲರ್’ ಗೆದ್ದ ಖುಷಿಯಲ್ಲಿ ರಜನಿಗೆ 100 ಕೋಟಿ ರೂ. ಚೆಕ್ ಕೊಟ್ಟ ಕಲಾನಿಧಿ ಮಾರನ್; ಒಟ್ಟೂ ಸಂಭಾವನೆ ಎಷ್ಟು?
ರಜನಿಕಾಂತ್
Follow us on

‘ಜೈಲರ್’ ಸಿನಿಮಾ (Jailer Movie) ಮಾಡಿದ ಮೋಡಿ ತುಂಬಾನೇ ದೊಡ್ಡದು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 650 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲೇ 328 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರ ಇನ್ನೂ ಕೆಲವು ದಿನಗಳ ಕಾಲ ತನ್ನ ಅಬ್ಬರ ಮುಂದುವರಿಸಲಿದೆ. ರಜನಿಕಾಂತ್ (Rajinikanth) ಅವರ ವೃತ್ತಿ ಜೀವನದಲ್ಲಿ ಮತ್ತೊಂದು ದೊಡ್ಡ ಗೆಲುವು ಸಿಕ್ಕಿದೆ. ಮತ್ತೊಂದು ವಿಶೇಷ ಎಂದರೆ, ಈ ಚಿತ್ರದ ಮೂಲಕ ರಜನಿಕಾಂತ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಹೀರೋ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಜನಿಕಾಂತ್ ಅವರು ‘ಜೈಲರ್’ ಚಿತ್ರಕ್ಕಾಗಿ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಭಾವನೆ ಹಣವನ್ನು ಈ ಮೊದಲೇ ನೀಡಲಾಗಿದೆ. ಇದರ ಜೊತೆಗೆ ಪ್ರಾಫಿಟ್​ನಲ್ಲೂ ರಜನಿಗೆ ಪಾಲು ಸಿಕ್ಕಿದೆ. ಸನ್ ಪಿಕ್ಚರ್ಸ್​ನ ಮುಖ್ಯಸ್ಥ ಕಲಾನಿಧಿ ಮಾರನ್ ಅವರು ರಜನಿಕಾಂತ್​ಗೆ 100 ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ! ರಜನಿಕಾಂತ್​ಗೆ ಚೆಕ್ ಹಸ್ತಾಂತರ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಜೈಲರ್’ ಚಿತ್ರದ ನಟನೆಗೆ ರಜನಿಕಾಂತ್​ಗೆ 210 ಕೋಟಿ ರೂಪಾಯಿ ಸಂಭಾವನೆ ಸಿಕ್ಕಂತೆ ಆಗಿದೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ಹೀರೋ ಎನ್ನುವ ಖ್ಯಾತಿ ರಜನಿಕಾಂತ್​ಗೆ ಸಿಕ್ಕಿದೆ. ಈ ವಿಚಾರ ಕೇಳಿ ರಜನಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಜನಿಕಾಂತ್

‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಯಿತು. ಈ ಚಿತ್ರದ ಮೂಲಕ ರಜನಿಕಾಂತ್ ದೊಡ್ಡ ಯಶಸ್ಸು ಕಂಡರು. ಈ ಚಿತ್ರದಲ್ಲಿ ರಜನಿ ಜೊತೆ ಶಿವರಾಜ್​ಕುಮಾರ್, ಮೋಹನ್​ಲಾಲ್ ಮೊದಲಾದವರು ಮಾಡಿರುವ ಪಾತ್ರ ಕೂಡ ಗಮನ ಸೆಳೆದಿದೆ. ಗುರುವಾರ (ಆಗಸ್ಟ್ 31) ಈ ಚಿತ್ರ 2.4 ಕೋಟಿ ರೂಪಾಯಿ ಗಳಿಕೆ ಮಾಡಿದೆ.  ಈ ಮಧ್ಯೆ ಸಿನಿಮಾದ ಎಚ್​ಡಿ ಪ್ರಿಂಟ್ ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಚಿತ್ರಕ್ಕೆ ಹಿನ್ನಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ