ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡ ನಟಿ ಐಶ್ವರ್ಯಾ

|

Updated on: Apr 22, 2023 | 7:01 AM

Aishwarya Bhaskaran: ನಟನೆ ಜೊತೆಗೆ ಜೀವನ ಸಾಗಿಸಲು ಸೋಪು ಬ್ಯುಸಿನೆಸ್ ಮಾಡುತ್ತಿರುವ ಐಶ್ವರ್ಯಾ ಭಾಸ್ಕರನ್, ತಾವು ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.

ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡ ನಟಿ ಐಶ್ವರ್ಯಾ
ಐಶ್ವರ್ಯಾ ಭಾಸ್ಕರನ್
Follow us on

ನಟಿಯರಿಗೆ ಸಾಮಾಜಿಕ ಜಾಲತಾಣಗಳು (Social Media) ವರಕ್ಕಿಂತಲೂ ಶಾಪವಾಗಿ ಪರಿಣಮಿಸಿರುವುದೇ ಹೆಚ್ಚು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಹುತೇಕ ನಟಿಯರು ಟ್ರೋಲಿಂಗ್, ಬಾಡಿ ಶೇಮಿಂಗ್ (Body Shaming) ಲೈಂಗಿಕ ಲೈಂಗಿಕ ಕಿರುಕುಳಗಳನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ಕೆಲವರು ಧೈರ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲವರು ಬಹಿರಂಗವಾಗಿ ಈ ಸಮಸ್ಯೆಯ ಬಗ್ಗೆ ಚರ್ಚಿಸಿದ್ದಾರೆ. ಆದರೆ ಇದು ಅಂತ್ಯವಂತೂ ಆಗಿಲ್ಲ. ಇದೀಗ ನಟಿ ಐಶ್ವರ್ಯಾ ಭಾಸ್ಕರನ್ ಈ ಆನ್​ಲೈನ್ ಲೈಂಗಿಕ ಕಿರುಕುಳದಿಂದ ಅನುಭವಿಸುತ್ತಿರುವ ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ.

ಐಶ್ವರ್ಯಾ ಭಾಸ್ಕರನ್ (Aishwarya Bhaskaran), ಖ್ಯಾತ ನಟಿ ಜೂಲಿ ಲಕ್ಷ್ಮಿ ಪುತ್ರಿ. ತೆಲುಗು ತಮಿಳಿನ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಇವರು ಹಲವು ಟಿವಿ ಧಾರಾವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ. ಸಂಕಷ್ಟದ ಜೀವನ ನಡೆಸುತ್ತಿದ್ದ ವೇಳೆಯಲ್ಲಿ ಸೋಪು ಮಾರಾಟವನ್ನೂ ಮಾಡುತ್ತಿದ್ದರು, ಈಗಲೂ ಆ ಬ್ಯುಸಿನೆಸ್ ಮುಂದುವರೆಸುತ್ತಿದ್ದಾರೆ. ತಮ್ಮ ಸೋಪನ್ನು ಹೆಚ್ಚು ಮಂದಿಗೆ ತಲುಪಿಸುವ ನಿಟ್ಟಿನಲ್ಲಿ ಸಂದರ್ಶನವೊಂದರಲ್ಲಿ ತಮ್ಮ ಮೊಬೈಲ್ ನಂಬರ್ ಅನ್ನು ನಟಿ ಬಹಿರಂಗಪಡಿಸಿದ್ದರು. ಆಗಿನಿಂದ ಅವರಿಗೆ ಕಿರುಕುಳ ಪ್ರಾರಂಭವಾಗಿದೆ.

ಮೊಬೈಲ್​ ನಂಬರ್​ಗೆ ಹಲವಾರು ಮಂದಿ ಕಟ್ಟ-ಕೆಟ್ಟದಾಗಿ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಕೆಲವು ಪುರುಷರು ತಮ್ಮ ಮರ್ಮಾಂಗದ ಚಿತ್ರಗಳನ್ನು ಕಳಿಸಿದ್ದಾರೆ. ಇನ್ನು ಕೆಲವರು ತಮ್ಮ ಚಿತ್ರವನ್ನು ತಿದ್ದಿ ಅಸಭ್ಯ ಚಿತ್ರವನ್ನಾಗಿ ಎಡಿಟ್ ಮಾಡಿ ನನಗೇ ಕಳಿಸಿದ್ದಾರೆ. ಕೆಟ್ಟ-ಕೆಟ್ಟದಾಗಿ ಕಮೆಂಟ್​ಗಳನ್ನು ಮಾಡಿದ್ದಾರೆ ಒಟ್ಟಾರೆ ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ತೀವ್ರ ಕಿರುಕುಳ ನೀಡುತ್ತಿದ್ದಾರೆ, ಕರೆ ಮಾಡಿ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಐಶ್ವರ್ಯಾ ಹೇಳಿದ್ದಾರೆ.

ನಾನು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಬೇಡ ಎಂದುಕೊಂಡು ಸುಮ್ಮನಿದ್ದೆ ಆದರೆ ನನ್ನ ಮಗಳೇ ಇದರ ವಿರುದ್ಧ ಏನಾದರೂ ಕ್ರಮ ಜರುಗಿಸಲೇ ಬೇಕು ಎಂದು ಹೇಳಿದಳು, ಹಾಗಾಗಿ ಈ ಬಗ್ಗೆ ಮಾತನಾಡುತ್ತಿದ್ದೇನೆ, ಪೊಲೀಸರಿಗೆ ದೂರು ನೀಡುವ ಉದ್ದೇಶವೂ ಇರಲಿಲ್ಲ ಆದರೆ ದಿನೇ-ದಿನೇ ಕಿರುಕುಳ ಹೆಚ್ಚಾದ ಕಾರಣ ಅದರ ಬಗ್ಗೆಯೂ ಯೋಚಿಸುತ್ತದ್ದೇನೆ. ನನಗೆ ಕೆಟ್ಟದಾಗಿ ಸಂದೇಶ ಕಳಿಸುವವರ ವಿರುದ್ಧ ಕಾನೂನು ಮೂಲಕ ಸಮರ ಸಾರಲಿದ್ದೇನೆ ಎಂದಿದ್ದಾರೆ.

ತಮ್ಮ ಸೋಪಿನ ಬ್ಯುಸಿನೆಸ್​ ಬಗ್ಗೆಯೂ ಮಾತನಾಡಿರುವ ಐಶ್ವರ್ಯಾ ಬಾಲಕೃಷ್ಣ, ಇತ್ತೀಚೆಗೆ ನಟನೆಯ ಅವಕಾಶಗಳು ಕಡಿಮೆ ಆಗಿರುವ ಸೋಪಿನ ಉದ್ಯಮವೇ ನನ್ನ ಏಕೈಕ ಹಾಗೂ ಪ್ರಮುಖ ಆದಾಯದ ಮೂಲವಾಗಿದೆ. ಉದ್ಯಮವನ್ನು ನಾನು ಮುಂದುವರೆಸುತ್ತಿದ್ದೇನೆ ಎಂದಿದ್ದಾರೆ. ಕೋವಿಡ್ ಸಮಯದಲ್ಲಿ ಮನೆ-ಮನೆಗೆ ತೆರಳಿ ಸೋಪು ಮಾರಿದ್ದಾಗಿಯೂ ನಟಿ ಐಶ್ವರ್ಯಾ ಹೇಳಿಕೊಂಡಿದ್ದರು.

ಐಶ್ವರ್ಯಾ ಬಾಲಕೃಷ್ಣ, ನಟಿ ಜೂಲಿ ಲಕ್ಷ್ಮಿಯವರ ಪುತ್ರಿ. ಬಹಳ ಹಿಂದೆಯೇ ಪತಿಯಿಂದ ವಿಚ್ಛೇದನ ಪಡೆದು ಮಗಳೊಟ್ಟಿಗೆ ಒಬ್ಬರೇ ಬದುಕುತ್ತಿದ್ದಾರೆ ಈ ನಟಿ. ಐಶ್ವರ್ಯಾ ಅವರು ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡ ಬಳಿಕ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ