#SaveNandiniKMF: ಅಮೂಲ್ ವಿರುದ್ಧ ಕನ್ನಡಿಗರ ಕಿಡಿ, ಸಾಮಾಜಿಕ ಜಾಲತಾಣದಲ್ಲಿ ಸೇವ್‌ ನಂದಿನಿ ಕೆಎಂಎಫ್‌ ಅಭಿಯಾನ

ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಬ್ರ್ಯಾಂಡ್​​ ಬಳಸುವುದಿಲ್ಲ. ಈಗ ನಂದಿನಿ ಜಾಗವನ್ನು ಅಮುಲ್‌ ಆಕ್ರಮಿಸಲು ಬರುತ್ತಿದೆ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸೋಣ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

#SaveNandiniKMF: ಅಮೂಲ್ ವಿರುದ್ಧ ಕನ್ನಡಿಗರ ಕಿಡಿ, ಸಾಮಾಜಿಕ ಜಾಲತಾಣದಲ್ಲಿ ಸೇವ್‌ ನಂದಿನಿ ಕೆಎಂಎಫ್‌ ಅಭಿಯಾನ
ಸೇವ್​ ನಂದಿನಿ ಕೆಎಂಎಫ್​ ಅಭಿಯಾನ
Follow us
ವಿವೇಕ ಬಿರಾದಾರ
|

Updated on:Apr 08, 2023 | 2:19 PM

ಬೆಂಗಳೂರು: ಗುಜರಾತ್​​ನ (Gujarat) ಅಮುಲ್​ (Amul) ಮತ್ತು ಕರುನಾಡಿನ ಕೆಎಂಎಫ್​ (KMF) ನಂದಿನಿ ಹಾಲು (Nandini Milk) ಒಕ್ಕೂಟ ವಿಚಾರವಾಗಿ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಿಜೆಪಿಯವರು (BJP) ನಂದಿನಿಯನ್ನು ಅಮುಲ್​ನಲ್ಲಿ, ​​ವಿಲೀನ ಮಾಡಲು ಮುಂದಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ (Congress)​ ನಾಯಕರು ಆರೋಪ ಮಾಡುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಅಮುಲ್​ ಕಂಪನಿಯ ಐಸ್​​ಕ್ರೀಂ ಸೇರಿದಂತೆ ಹಲವು ಉತ್ಪನ್ನಗಳು ಮಾರಾಟವಾಗುತ್ತಿವೆ. ಇದರ ಜೊತೆಗೆ ಈಗ ಅಮುಲ್​ ಮೊಸರು ಮತ್ತು ಹಾಲನ್ನು ಮಾರಾಟ ಮಾಡಲು ಮುಂದಾಗಿದ್ದು, ಇದನ್ನು ವಿರೋಧಿಸಿ ಸಾಮಾಜಿ ಜಾಲತಾಣದಲ್ಲಿ (Social Media) ಸಾರ್ವಜನಿಕರು ಅಭಿಯಾನ ಆರಂಭಿಸಿದ್ದಾರೆ. #SaveNandiKMF ಎಂದು ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಬ್ರ್ಯಾಂಡ್​​ ಬಳಸುವುದಿಲ್ಲ. ಕೆಎಂಎಫ್​​​ ಉತ್ಪನ್ನ ಬಳಸೋಣ ಎಂದು ಶಪಥಗೈಯುತ್ತಿದ್ದಾರೆ.

ಈಗ ನಂದಿನಿ ಜಾಗವನ್ನು ಅಮುಲ್‌ ಆಕ್ರಮಿಸಲು ಬರುತ್ತಿದೆ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಕರೆ ನೀಡುತ್ತಿದ್ದಾರೆ.

ಇದನ್ನೂ ಓದಿ: ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್​, ಕಾಂಗ್ರೆಸ್​ನಿಂದ ಅಮುಲ್ ವಿಚಾರದಲ್ಲಿ ರಾಜಕೀಯ; ಸಿಎಂ ಬೊಮ್ಮಾಯಿ

ಗುಜರಾತ್‌ನ ಅಮುಲ್‌ಗೆ, ಕೆಎಂಎಫ್​ ವಿಲೀನ ಮಾಡಲು ಷಡ್ಯಂತ್ರ ನಡೆಯುತ್ತಿದೆ

“ಗುಜರಾತ್‌ನ ಅಮುಲ್‌ಗೆ, ಕೆಎಂಎಫ್​ ವಿಲೀನ ಮಾಡಲು ಷಡ್ಯಂತ್ರ ನಡೆಯುತ್ತಿದೆ. ಬಿಜೆಪಿಯ ಷಡ್ಯಂತ್ರ ಈಗ ಸ್ಪಷ್ಟವಾಗಿದೆ. ಅಮುಲ್​ನಲ್ಲಿ ಕೆಎಂಎಫ್​ ವಿಲೀನ ಮಾಡಲಾಗುತ್ತೆದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಈಗ ಅಮಿತ್ ಶಾ ಹೇಳಿಕೆಯನ್ನು ಶೋಭಾ ಕರಂದ್ಲಾಜೆ ಬೆಂಬಲಿಸಿದ್ದಾರೆ. ನಂದಿನಿ ಇಳಿಕೆ, ಅಮುಲ್​ ಗಳಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಮೂಕ ಬಸವ. ನಂದಿನಿ ಉಳಿಸಿ, ಬಿಜೆಪಿ ಓಡಿಸಿ” ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ​ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಜೀವನಾಡಿ ಕೆಎಂಎಫ್​ ಮುಗಿಸಲು 3ನೇ ಸಂಚು ನಡೆದಿದೆ

ರಾಜ್ಯದಲ್ಲಿ ಗುಜರಾತ್​ನ ಅಮುಲ್​ ಉತ್ಪನ್ನಗಳ ಮಾರಾಟ ವಿಚಾರವಾಗಿ ಟ್ವಿಟರ್​ ಮೂಲಕ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. “ಕನ್ನಡಿಗರ ಜೀವನಾಡಿ ಕೆಎಂಎಫ್​ ಮುಗಿಸಲು 3ನೇ ಸಂಚು ನಡೆದಿದೆ. ಮೊದಲನೇ ಸಂಚು ಅಮುಲ್ ಜತೆ ಕೆಎಂಎಫ್​ ವಿಲೀನ. ಅಮುಲ್ ಜತೆ ಕೆಎಂಎಫ್​ ವಿಲೀನ ಎಂದು ಅಮಿತ್ ಶಾ ಹೇಳಿದ್ದರು. 2ನೇ ಸಂಚು ಮೊಸರಿನ ಪಾಕೆಟ್​ ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ. ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲವಾಗಿದೆ” ಎಂದು ಟ್ವೀಟ್​ ಮಾಡಿದ್ದಾರೆ.

3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಹೊರಟಿದೆ. ಕೆಎಂಎಫ್​​ಗೆ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ‘ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್’ ಇದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್​​ಗೆ ಒತ್ತಾಸೆಯಾಗಿ ನಿಂತು ಕೆಎಂಎಫ್​​ ಕತ್ತು ಹಿಚುಕುತ್ತಿದೆ. ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Sat, 8 April 23

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!