ನಟಿ ಐಶ್ವರ್ಯಾ ರೈ (Aishwarya Rai) ಅವರು ಇತ್ತೀಚೆಗೆ ಕುಟುಂಬದ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಸಿನಿಮಾ ಕೆಲಸಗಳತ್ತ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಿನಿಮಾ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರದಲ್ಲಿ (Ponniyin Selvan: I Movie) ನಟಿಸಿ ಐಶ್ವರ್ಯಾ ಗಮನ ಸೆಳೆದಿದ್ದರು. ಈಗ ಅವರು ಮತ್ತೊಂದು ತಮಿಳು ಚಿತ್ರಕ್ಕೆ ಸಹಿ ಹಾಕಲು ರೆಡಿ ಆಗಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಸಿನಿಮಾ ಆಯ್ಕೆ ವಿಚಾರದಲ್ಲಿ ಐಶ್ವರ್ಯಾ ಆತುರ ಮಾಡುತ್ತಿಲ್ಲ. ತಮಗೆ ಸಿಕ್ಕ ಆಫರ್ಗಳೆಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಅಳೆದು ತೂಗಿ ಸಿನಿಮಾಗೆ ಸಹಿ ಹಾಕುತ್ತಿದ್ದಾರೆ. ಈಗ ಅಜಿತ್ ಕುಮಾರ್ ನಟನೆಯ ‘ಅಜಿತ್ 62’ ಸಿನಿಮಾಗೆ ಐಶ್ವರ್ಯಾ ರೈ ನಾಯಕಿ ಆಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಅಜಿತ್ ಕುಮಾರ್ ಅವರು ‘ತುನಿವು’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದೆ. ‘ವಾರಿಸು’ ಚಿತ್ರದಿಂದ ಸ್ಪರ್ಧೆ ಎದುರಿಸಿದ ಹೊರತಾಗಿಯೂ ಈ ಚಿತ್ರ ಗೆಲುವು ಕಂಡಿದೆ. ಈಗ ‘ಅಜಿತ್ 62’ನೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಯನತಾರಾ ಪತಿ ವಿಘ್ನೇಶ್ ಶಿವನ್ ಅವರು ಡೈರೆಕ್ಷನ್ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಐಶ್ವರ್ಯಾ ರೈ ಅವರ ಜತೆ ಒಂದು ಹಂತದ ಮಾತುಕತೆ ನಡೆದಿದೆ. ಕಥೆ ಹಾಗೂ ಪಾತ್ರವನ್ನು ಐಶ್ವರ್ಯಾ ರೈ ಅವರು ಇಷ್ಟಪಟ್ಟಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಸಿಗಲಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ತುನಿವು’-‘ವಾರಿಸು’ ಮಧ್ಯೆ ಸಮಬಲದ ಫೈಟ್; ಯಾವ ಚಿತ್ರದ ಕಲೆಕ್ಷನ್ ಎಷ್ಟು?
‘ಅಜಿತ್ 62’ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ಹೀಗಾಗಿ ಗ್ರ್ಯಾಂಡ್ ಆಗಿ ಈ ಚಿತ್ರವನ್ನು ಲಾಂಚ್ ಮಾಡಲು ಲೈಕಾ ಪ್ರೊಡಕ್ಷನ್ ಸಂಸ್ಥೆ ಆಲೋಚನೆ ಮಾಡಿದೆ. ಈ ವಿಚಾರ ಕೇಳಿ ಅಜಿತ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಅಜಿತ್ ಅವರು ರಗಡ್ ಅವತಾರ ತಾಳಲಿದ್ದಾರೆ. ಕಾಮಿಡಿ-ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ