ಕೊರೊನಾ ವೈರಸ್ (Coronavirus Positive) ಮೂರನೇ ಅಲೆಯಿಂದಾಗಿ ಅನೇಕರಿಗೆ ತೊಂದರೆ ಆಗಿದೆ. ಹಲವು ಸೆಲೆಬ್ರಿಟಿಗಳಿಗೆ ಕೊವಿಡ್ ಪಾಸಿಟಿವ್ ಆಗಿದೆ. ಸದಾ ಕಾಲ ಸಿನಿಮಾ ಚಟುವಟಿಕೆಗಳ ಸಲುವಾಗಿ ಹೊರಗಡೆ ಸುತ್ತಾಡುವ ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲುತ್ತಿದೆ. ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಅವರಿಗೆ ಈಗ ಕೊವಿಡ್ ಪಾಸಿಟವ್ ಆಗಿದೆ. ಕೆಲವೇ ದಿನಗಳ ಹಿಂದೆ ನಟ ಧನುಷ್ (Dhanush) ಜೊತೆಗಿನ ದಾಂಪತ್ಯ ಜೀವನಕ್ಕೆ ಐಶ್ವರ್ಯಾ ಅವರು ಅಂತ್ಯ ಹಾಡಿದರು. ಡಿವೋರ್ಸ್ ಪಡೆದಿರುವ ಅವರಿಗೆ ಈಗ ಅನಾರೋಗ್ಯದ ಸಮಸ್ಯೆ ಶುರುವಾಗಿದೆ. ತಮಗೆ ಕೊರೊನಾ ವೈರಸ್ ತಗುಲಿರುವ ಬಗ್ಗೆ ಐಶ್ವರ್ಯಾ ರಜನಿಕಾಂತ್ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳವಾರ (ಫೆ.2) ರಾತ್ರಿ ಅವರು ಈ ಕುರಿತು ಪೋಸ್ಟ್ ಮಾಡಿದ್ದಾರೆ. ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಐಶ್ವರ್ಯಾ ಅವರು ಬೇಗ ಗುಣಮುಖರಾಗಲಿ ಎಂದು ಅವರ ಫ್ಯಾನ್ಸ್ ಪ್ರಾರ್ಥಿಸಿದ್ದಾರೆ.
‘ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ಕೂಡ ಕೊರೊನಾ ಪಾಸಿಟಿವ್ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ದಯವಿಟ್ಟು ಎಲ್ಲರೂ ಮಾಸ್ಕ್ ಧರಿಸಿ. ವ್ಯಾಕ್ಸಿನ್ ಪಡೆದು ಹುಷಾರಾಗಿರಿ’ ಎಂದು ಐಶ್ವರ್ಯಾ ಅವರು ಪೋಸ್ಟ್ ಮಾಡಿದ್ದಾರೆ. ಬೇಸರದ ಮುಖ ಹೊತ್ತುಕೊಂಡು ಅವರು ಫೋಟೋ ಹಂಚಿಕೊಂಡಿದ್ದಾರೆ.
ಧನುಷ್ ಅವರಿಂದ ದೂರಾಗಿದ್ದರೂ ಕೂಡ ಐಶ್ವರ್ಯಾ ಅವರು ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಾಯಿಸಿಕೊಂಡಿಲ್ಲ. ಕೆಲವೇ ದಿನಗಳ ಹಿಂದೆ ಧನುಷ್ ಅವರ ತಂದೆ ಕಸ್ತೂರಿ ರಾಜ ಪ್ರತಿಕ್ರಿಯೆ ನೀಡಿದ್ದರು. ಅವರ ಮಾತು ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಮಗ-ಸೊಸೆಯ ಡಿವೋರ್ಸ್ ಸುದ್ದಿಯನ್ನು ಕಸ್ತೂರಿ ರಾಜ ತಳ್ಳಿ ಹಾಕಿದ್ದರು.
‘ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ಒಂದು ಕುಟುಂಬದ ಜಗಳ ಅಷ್ಟೇ. ಗಂಡ-ಹೆಂಡತಿ ನಡುವೆ ಇದೆಲ್ಲ ಸಹಜ. ಇದು ಡಿವೋರ್ಸ್ ಅಲ್ಲ. ಅವರಿಬ್ಬರು ಈಗ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್ನಲ್ಲಿ ಇದ್ದಾರೆ. ಅವರಿಗೆ ನಾನು ಒಂದಷ್ಟು ಸಲಹೆ ನೀಡಿದ್ದೇನೆ’ ಎಂದು ಕಸ್ತೂರಿ ರಾಜ ಹೇಳಿದ್ದರು.
ಇದನ್ನೂ ಓದಿ:
ಧನುಷ್ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಐಶ್ವರ್ಯಾ; ಇಲ್ಲಿದೆ ಫೋಟೋ
ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್-ಐಶ್ವರ್ಯಾ?