‘ಸರಿಯಾಗಿ ವರ್ತಿಸಿ, ಇದು ಥಿಯೇಟರ್ ಅಲ್ಲ’; ಅಭಿಮಾನಿಗಳ ಮೇಲೆ ಕೂಗಾಡಿದ ನಟ ಅಜಿತ್

Ajith Kumar: ನಟ ಅಜಿತ್ ಕುಮಾರ್ ನಟನೆಗಿಂತ ಕಾರ್ ರೇಸಿಂಗ್‌ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇತ್ತೀಚೆಗೆ ಅಬುಧಾಬಿಯಲ್ಲಿ ಅಭಿಮಾನಿಗಳ ಮೇಲೆ ಸಿಟ್ಟಾಗಿ "ಇದು ಥಿಯೇಟರ್ ಅಲ್ಲ, ಸರಿಯಾಗಿ ವರ್ತಿಸಿ" ಎಂದು ಹೇಳಿದ್ದು ವೈರಲ್ ಆಗಿದೆ. ಅವರ ವರ್ತನೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

‘ಸರಿಯಾಗಿ ವರ್ತಿಸಿ, ಇದು ಥಿಯೇಟರ್ ಅಲ್ಲ’; ಅಭಿಮಾನಿಗಳ ಮೇಲೆ ಕೂಗಾಡಿದ ನಟ ಅಜಿತ್
ಅಜಿತ್ ಕುಮಾರ್

Updated on: Feb 10, 2026 | 10:21 AM

ತಮಿಳು ನಟ ಅಜಿತ್ ಕುಮಾರ್ (Ajith Kumar) ಅವರು ಇತ್ತೀಚೆಗೆ ನಟನೆಗಿಂತ ರೇಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ತೆರಳಿ ಕಾರ್ ರೇಸ್​ ಅಲ್ಲಿ ಭಾಗಿ ಆಗುತ್ತಿದ್ದಾರೆ. ಈಗ ಅವರು ಅಭಿಮಾನಿಗಳ ಮೇಲೆ ಸಿಟ್ಟಾಗಿದ್ದಾರೆ. ಅಜಿತ್ ಅವರನ್ನು ನೋಡಲು ಬಂದ ಫ್ಯಾನ್ಸ್ ಮೇಲೆ ತಿರುಗಿ ಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಅವರು ಸಾಕಷ್ಟು ಟೀಕೆ ಎದುರಿಸಿದ್ದಾರೆ.

ಅಜಿತ್ ಕುಮಾರ್ ಅವರು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಕೂಡ ನೀಡಿದ್ದಾರೆ. 2025ರಲ್ಲಿ ಅವರು ‘ವಿದುಮುಯಾರ್ಚಿ’ ಹಾಗೂ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ತೆರೆಗೆ ಬಂದವು. ಎರಡೂ ಸಿನಿಮಾಗಳು ಸಾಧಾರಣ ಎನಿಸಿಕೊಂಡವು. ‘ವಿದುಮುಯಾರ್ಚಿ’ ರಿಲೀಸ್ ಆಗಿ ವರ್ಷ ಕಳೆದಿದೆ. ಆದಾಗ್ಯೂ ಅವರು ಹೊಸ ಸಿನಿಮಾ ಘೋಷಣೆ ಆಗಿಲ್ಲ. ಬದಲಿಗೆ ಅವರು ವಿದೇಶದಲ್ಲಿ ಕಾರ್​ ರೇಸ್ ಅಲ್ಲಿ ಭಾಗಿ ಆಗುತ್ತಿದ್ದಾರೆ.

ಅಬುಧಾಬಿಯಲ್ಲಿ ನಡೆದ ರೇಸ್​​ನಲ್ಲಿ ಅಜಿತ್ ಭಾಗಿ ಆಗಿದ್ದರು. ಈ ವೇಳೆ ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಆಗ ಸಿಟ್ಟಾದ ಅಜಿತ್, ‘ಸರಿಯಾಗಿ ವರ್ತಿಸಿ. ಇದು ಥಿಯೇಟರ್​ ಅಲ್ಲ’ ಎಂದು ಖಾರವಾಗಿಯೇ ಹೇಳಿದ್ದಾರೆ. ಇದಕ್ಕೆ ಕೆಲವರು ಕೋಪ ಹೊರಹಾಕಿದ್ದಾರೆ. ‘ಅಭಿಮಾನಿಗಳನ್ನು ಹೀಗೆ ಟ್ರೀಟ್ ಮಾಡಬಾರದು’ ಎಂದು ಖಡಕ್ ಆಗಿಯೇ ಉತ್ತರಿಸಲಾಗಿದೆ.

ಅಜಿತ್ ಅವರು ಅಭಿಮಾನಿಗಳ ಕೈಗೆ ಸಿಗದೇ ಅದೆಷ್ಟೋ ವರ್ಷಗಳೇ ಕಳೆದಿವೆ. ಅವರು ಸಿನಿಮಾ ಮಾಡಿದ ಬಳಿಕ ಅದರ ಪ್ರಚಾರಕ್ಕೆ ತೆರಳೋದಿಲ್ಲ. ಅಭಿಮಾನಿಗಳ ಜೊತೆ ಸಿನಿಮಾ ನೋಡೋಕೆ ತೆರಳೋದಿಲ್ಲ. ಈ ಎಲ್ಲಾ ಕಾರಣದಿಂದ ಅಜಿತ್ ಅವರು ಕಂಡಾಗ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಆದರೆ, ಇದನ್ನು ಅವರು ಸಹಿಸಿಕೊಳ್ಳೋದೇ ಇಲ್ಲ.

ಇದನ್ನೂ ಓದಿ: ಕಮಲ್ ಹಾಸನ್, ಅಜಿತ್ ಕುಮಾರ್ ಬಳಿಕ ದಿಟ್ಟ ನಿರ್ಧಾರ ಕೈಗೊಂಡ ನಟಿ ನಯನತಾರಾ 

ಈ ಮೊದಲು ಕೂಡ ಅಜಿತ್ ಅವರು ಅನೇಕ ಬಾರಿ ಕೋಪ ಹೊರಹಾಕಿದ್ದು ಇದೆ. ಅಜಿತ್ ಸೋಶಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿಲ್ಲ. ಹೀಗಾಗಿ, ಅವರು ಅಭಿಮಾನಿಗಳ ಕೈಗೂ ಸಿಗೋದೆ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:20 am, Tue, 10 February 26