
ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ ಆಲಿಯಾ ಭಟ್ ಅವರಿಗೆ ಸೋಮವಾರ (ಮಾ.15) ಹುಟ್ಟುಹಬ್ಬದ ಸಡಗರ. 28ನೇ ವಸಂತಕ್ಕೆ ಕಾಲಿಟ್ಟಿರುವ ಈ ಬೆಡಗಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಕೋರುತ್ತಿದ್ದಾರೆ. ಅಲ್ಲದೆ, ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ತಂಡದಿಂದ ಆಲಿಯಾ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.
ಈವರೆಗೂ ಬಾಲಿವುಡ್ನಲ್ಲಿ ಮಿಂಚಿರುವ ಆಲಿಯಾ ಭಟ್, ಇದೇ ಮೊದಲ ಬಾರಿಗೆ RRR ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಬಹುನಿರೀಕ್ಷಿತ ಸಿನಿಮಾದ ಮೂಲಕ ಆಲಿಯಾ ದಕ್ಷಿಣದತ್ತ ಹೆಜ್ಜೆ ಹಾಕುತ್ತಿರುವುದರಿಂದ ಅವರ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕುತೂಹಲ ಇದೆ. ಸೀತಾ ಎಂಬ ಪಾತ್ರಕ್ಕೆ ಆಲಿಯಾ ಬಣ್ಣ ಹಚ್ಚುತ್ತಿದ್ದಾರೆ. ಅವರ ಗೆಟಪ್ ಹೇಗಿರಲಿದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ರಾಜಮೌಳಿ ಅವರು ಸೀತಾ ಪಾತ್ರದ ಫಸ್ಟ್ಲುಕ್ ಬಿಡುಗಡೆ ಮಾಡಿದ್ದಾರೆ.
ಫಸ್ಟ್ಲುಕ್ ಪೋಸ್ಟರ್ ಮೂಲಕ ಆಲಿಯಾಗೆ ಆರ್ಆರ್ಆರ್ ತಂಡ ಶುಭಾಶಯ ಕೋರಿದೆ. ಸೀರೆ ಮತ್ತು ಆಭರಣ ಧರಿಸಿ ಸಾಂಪ್ರದಾಯಿಕ ಗೆಟಪ್ನಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಪೋಸ್ಟರ್ ಕಂಡು ಫಿದಾ ಆಗಿದ್ದಾರೆ. ಬಾಹುಬಲಿ, ಮಗಧೀರ, ಮುಂತಾದ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಅದ್ದೂರಿಯಾಗಿ ತೋರಿಸಿದ್ದ ರಾಜಮೌಳಿ ಅವರು ಆರ್ಆರ್ಆರ್ ಚಿತ್ರದಲ್ಲಿ ಆಲಿಯಾರನ್ನು ಇನ್ನೆಷ್ಟು ಅದ್ಭುತವಾಗಿ ತೋರಿಸಲಿದ್ದಾರೆ ಎಂಬ ನಿರೀಕ್ಷೆ ಮೂಡಿದೆ.
ಈ ಚಿತ್ರದಲ್ಲಿ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ನಾಯಕರಾಗಿ ನಟಿಸಿದ್ದಾರೆ. ಕೊರೊನಾ ವೈರಸ್ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬ ಆಗಿದ್ದವು. ಕಳೆದ ವರ್ಷ ಡಿಸೆಂಬರ್ನಲ್ಲಿ ಆಲಿಯಾ ಭಟ್ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ, ಅದರಲ್ಲಿ ಚಿತ್ರೀಕರಣ ಮಾಡಲಾಗಿದೆ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಇದೇ ವರ್ಷ ಅಕ್ಟೋಬರ್ 13ರಂದು ‘ಆರ್ಆರ್ಆರ್’ ತೆರೆಕಾಣಲಿದೆ. ಚಿತ್ರದ ಇನ್ನೊಂದು ಮುಖ್ಯ ಪಾತ್ರದಲ್ಲಿ ಅಜಯ್ ದೇವಗನ್ ಕೂಡ ನಟಿಸಿದ್ದಾರೆ.
ಆಲಿಯಾ ಭಟ್ ಅವರ ಫಸ್ಟ್ಲುಕ್ ಪೋಸ್ಟರ್ ಹಂಚಿಕೊಂಡ ನಿರ್ದೇಶಕ ರಾಜಮೌಳಿ
ಇದನ್ನೂ ಓದಿ: ಬಿಟೌನ್ನಲ್ಲಿ ಮದುವೆ ಗುಸುಗುಸು: ಮೌನ ಮುರಿದ ಆಲಿಯಾ ಭಟ್ ಮದುವೆ ಬಗ್ಗೆ ಹೇಳಿದ್ದೇನು?
RRR ಸಿನಿಮಾದ ಶೂಟಿಂಗ್ ಗಿಂತ ಗ್ರಾಫಿಕ್ಸ್ಗೇ ಅತಿಹೆಚ್ಚು ಹಣ ಖರ್ಚಾ.. ತೆರೆಮೇಲೆ ಹುಟ್ಟಲಿದೆ ಅದ್ಭುತ ದೃಶ್ಯ ವೈಭವ