ಬಿಟೌನ್​ನಲ್ಲಿ ಮದುವೆ ಗುಸುಗುಸು: ಮೌನ ಮುರಿದ ಆಲಿಯಾ ಭಟ್ ಮದುವೆ ಬಗ್ಗೆ ಹೇಳಿದ್ದೇನು?

ಬಿಟೌನ್​ನಲ್ಲಿ ಮದುವೆ ಗುಸುಗುಸು: ಮೌನ ಮುರಿದ ಆಲಿಯಾ ಭಟ್ ಮದುವೆ ಬಗ್ಗೆ ಹೇಳಿದ್ದೇನು?

ಬಾಲಿವುಡ್​ನಲ್ಲಿ ಸಿನಿಮಾಗಳಿಗಿಂತಾ ಹೆಚ್ಚಾಗಿ ಮದುವೆ ವಿಚಾರ ಸುದ್ದಿಯಾಗ್ತಿದೆ. ಅದ್ರಲ್ಲೂ ಆಲಿಯಾ ಭಟ್​ ಮದುವೆ ವಿಚಾರ ಸದಾ ಸದ್ದು ಮಾಡ್ತಲೇ ಇರುತ್ತೆ. ಈಗ ಮತ್ತೇ ಆಲಿಯಾ ಮದುವೆ ಚರ್ಚೆ ಆಗೋಕೆ ಆಲಿಯಾನೆ ಕಾರಣ. ಆಲಿಯಾ ತಮ್ಮ ಮದುವೆ ಬಗ್ಗೆ ಏನ್​ ಹೇಳಿದ್ದಾರೆ ಅನ್ನೋದನ್ನ ಇಲ್ಲಿ ಓದಿ.

Ayesha Banu

|

Dec 24, 2020 | 7:09 AM

ಲಾಕ್​ಡೌನ್ ಬಳಿಕಾ ಆಲಿಯಾ ಭಟ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸಿನಿಮಾದ ಒಂದು ಶೆಡ್ಯೂಲ್ ಮುಗಿಸಿ ಬಂದಿದ್ದಾರೆ. ಆದ್ರೆ, ಈ ಸುದ್ದಿಯ ಬದಲು ಆಲಿಯಾ ಮದುವೆ ಸುದ್ದಿ ಬಿಟೌನ್​ನಲ್ಲಿ ಜೋರಾಗಿದೆ. ಪದೇಪದೆ ಆಲಿಯಾ ಮದುವೆ ಬಗ್ಗೆ ಜನ ಮಾತಾಡೋಕೆ ಕಾರಣ, ಆಲಿಯಾ ಮತ್ತು ರಣ್​ಬೀರ್ ಕಪೂರ್​ ನಡುವೆ ಇರೋ ಲವ್ವಿ-ಡವ್ವಿ.

ಶೂಟಿಂಗ್ ಮುಗಿಸಿ ಮರಳಿದ ಆಲಿಯಾ, ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಮದುವೆ ಯಾವಾಗ ಅನ್ನೋದನ್ನ ಹೇಳೋ ಬದಲಿಗೆ, ಮದುವೆ ಯಾಕಾಗಬೇಕು ಅಂದಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿರೋ ಸಂದರ್ಶನದಲ್ಲಿ ಆಲಿಯಾ ಭಟ್, ನನಗಿನ್ನೂ 25 ವರ್ಷ ವಯಸ್ಸು ಈಗಲೇ ಯಾಕೆ ಮದುವೆ ಆಗಬೇಕು. ಯಾಕೆ ಎಲ್ಲರೂ ನನ್ನ ಮದುವೆ ಬಗ್ಗೆ ಮಾತಾಡುತ್ತಾರೆ. ಅದಕ್ಕಿನ್ನೂ ಸಮಯ ಇದೆ ಅಂತಾ ಉತ್ತರಿಸಿದ್ದಾರೆ.

ಮದುವೆ ಬಗ್ಗೆ ಮಾತ್ನಾಡಿರೋ ಆಲಿಯಾ ಟ್ರೋಲ್​ಗೂ ತುತ್ತಾಗಿದ್ದಾರೆ. ಆಲಿಯಾ ತನಗೆ 25 ವರ್ಷ ವಯಸ್ಸು ಅಂತ ಹೇಳಿಕೊಂಡಿದ್ದಾರೆ. ಆಕೆಯ ವಯಸ್ಸು 27 ಆದ್ರೆ 25 ಅಂತ ಹೇಳಿಕೊಂಡಿದ್ದು, ನಿಜವಾದ ವಯಸ್ಸನ್ನ ಮುಚ್ಚಿಟ್ಟಿದ್ದಾರೆ ಅಂತ ನೆಟ್ಟಿಗರು ಆಲಿಯಾಗೆ ತಿವಿಯುತ್ತಿದ್ದಾರೆ.

ಮತ್ತೊಂದು ಕಡೆ ಆಲಿಯಾ ಭಟ್, ರಣ್​ಬೀರ್ ಜೊತೆಗೆ ಲಿವ್​ಇನ್ ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಹೀಗಾಗಿಯೇ ಮದುವೆ ಬಗ್ಗೆ ಮಾತನಾಡುತ್ತಿಲ್ಲ ಅನ್ನೋ ಗುಸುಗುಸು ಬಿಟೌನ್​ನಲ್ಲಿ ಹರಡಿದೆ.

Follow us on

Related Stories

Most Read Stories

Click on your DTH Provider to Add TV9 Kannada