ಲಾಸ್​ ಏಜಲೀಸ್​ಗೆ ಹೊರಟಿದ್ದ ವಿಮಾನದಲ್ಲಿದ್ದ ವ್ಯಕ್ತಿ ಕೊರೊನಾಗೆ ಬಲಿ

ಡಿಸೆಂಬರ್​ 18ರಂದು 69 ವರ್ಷದ ಇಸಾಯಿಸ್ ಹೆರ್ನಾಂಡೆಜ್ಒರ್ಲ್ಯಾಂಡೊನಿಂದ ಏಂಜಲೀಸ್​ಗೆ ಹೊರಟಿದ್ದರು. ಈ ವೇಳೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಇವರು ಮೃತಪಟ್ಟಿದ್ದರು.

ಲಾಸ್​ ಏಜಲೀಸ್​ಗೆ ಹೊರಟಿದ್ದ ವಿಮಾನದಲ್ಲಿದ್ದ ವ್ಯಕ್ತಿ ಕೊರೊನಾಗೆ ಬಲಿ
ಸಾಂದರ್ಭಿಕ ಚಿತ್ರ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 23, 2020 | 9:58 PM

ವಾಷಿಂಗ್​ಟನ್​: ಫ್ಲೋರಿಡಾದಿಂದ ಅಮೆರಿಕದ ಲಾಸ್​ ಏಂಜಲೀಸ್​​​ಗೆ ತೆರಳುತ್ತಿದ್ದ ವ್ಯಕ್ತಿ ವೈದ್ಯಕೀಯ ತುರ್ತುಪರಿಸ್ಥಿತಿಗೆ ಒಳಗಾಗಿ ಮೃತಪಟ್ಟಿದ್ದರು. ಅವರು ಮೃತಪಡಲು ಕೊರೊನಾ ಕಾರಣ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಡಿ.18ರಂದು 69 ವರ್ಷದ ಇಸಾಯಿಸ್ ಹೆರ್ನಾಂಡೆಜ್ ಒರ್ಲ್ಯಾಂಡೊನಿಂದ ಏಂಜಲೀಸ್​ಗೆ ಹೊರಟಿದ್ದರು. ಈ ವೇಳೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ವಿಮಾನವನ್ನು ನ್ಯೂ ಓರ್ಲಿಯನ್ಸ್​ನತ್ತ ತಿರುಗಿಸಲಾಗಿತ್ತು. ವಿಮಾನ ಲ್ಯಾಂಡ್​ ಆದ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈಗ ಅವರ ಸಾವಿನ ವರದಿಯಲ್ಲಿ ಅವರಿಗೆ ಕೊರೊನಾ ಇದ್ದ ವಿಚಾರ ದೃಢವಾಗಿದೆ.

ವಿಮಾನ ಏರುವುದಕ್ಕೂ ಮೊದಲು ಇಸಾಯಿಸ್​ಗೆ ಕೊರೊನಾದ ಯಾವುದೇ ಲಕ್ಷಣ ಇರಲಿಲ್ಲ. ಅಲ್ಲದೆ, ಕೊರೊನಾ ಟೆಸ್ಟ್​ ಮಾಡಿಸಿದ್ದು, ವರದಿಯಲ್ಲಿ ನೆಗೆಟಿವ್​ ಎಂದಿತ್ತು. ಹೀಗಾಗಿ, ಅವರಿಗೆ ವಿಮಾನದಲ್ಲಿ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು.

22 ಜನರಿಗೆ ಕೊರೊನಾ ಕಳೆದ ಕೆಲ ದಿನಗಳಿಂದ ಇಂಗ್ಲೆಂಡ್​ನಿಂದ ಭಾರತಕ್ಕೆ ಬಂದ 22 ಜನರಲ್ಲಿ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಭಾರತ-ಇಂಗ್ಲೆಂಡ್​ ನಡುವೆ ವಿಮಾನ ಹಾರಾಟ ಡಿ.31ರವರೆಗೆ ರದ್ದು ಮಾಡಲಾಗಿದೆ.

ಕೊರೊನಾ ಎರಡನೇ ಅಲೆ ಭೀತಿ ಬೆನ್ನಲ್ಲೇ ರಾಜ್ಯದಲ್ಲಿ ಇಳಿಮುಖವಾಯ್ತು ಕೊವಿಡ್ ಪ್ರಕರಣ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada