AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾ.. ತೆರೆಮೇಲೆ ಹುಟ್ಟಲಿದೆ ಅದ್ಭುತ ದೃಶ್ಯ ವೈಭವ

ಬಾಹುಬಲಿ ಮಾಂತ್ರಿಕ ನಿರ್ದೇಶಕ ರಾಜಮೌಳಿ ಆ್ಯಕ್ಷನ್‌ ಕಟ್ ಹೇಳ್ತಿರೋ ಆರ್‌ಆರ್‌ಆರ್‌ ಸಿನಿಮಾ ಒಂದಲ್ಲ ಒಂದು ವಿಶೇಷತೆಯಿಂದ ಸೌಂಡ್‌ ಮಾಡ್ತಾನೆ ಇದೆ. ಸದ್ಯಕ್ಕಂತೂ ಆರ್‌ಆರ್‌ಆರ್‌ ಸಿನಿಮಾಗಳಿಗಾಗಿ ಚಿತ್ರತಂಡ ಹಗಲಿರುಳು ಶ್ರಮಿಸಿ ತೆರೆಗೆ ತರೋಕೆ ಹರಸಾಹಸ ಪಡ್ತಿದೆ. ಆದ್ರೀಗ ಶೂಟಿಂಗ್‌ ಗಿಂತ ಸಿನಿಮಾ ಗ್ರಾಫಿಕ್ಸ್‌ ಕೆಲಸಕ್ಕೆ ಹೆಚ್ಚು ಹಣ ಖರ್ಚು ಮಾಡೋಕೆ ತಯಾರಾಗಿದೆ ಚಿತ್ರತಂಡ. ಈ ಕುರಿತ ಲೇಟೆಸ್ಟ್ ಅಪ್‌ಡೇಟ್‌ ಇಲ್ಲಿದೆ ಓದಿ.

RRR ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾ.. ತೆರೆಮೇಲೆ ಹುಟ್ಟಲಿದೆ ಅದ್ಭುತ ದೃಶ್ಯ ವೈಭವ
ಆಯೇಷಾ ಬಾನು
|

Updated on: Dec 20, 2020 | 7:49 AM

Share

ಆರ್‌ಆರ್‌ಆರ್, ನಿರ್ದೇಶಕ ರಾಜಮೌಳಿ ಆ್ಯಕ್ಷನ್‌ ಕಟ್ ಹೇಳ್ತಿರೋ ಸಿನಿಮಾ. ಕೋಮರಂ ಭೀಮ್‌ ಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಹಾಗೆಯೇ ಅಲ್ಲುರಿ ಸೀತಾರಾಮ್‌ ಪಾತ್ರದಲ್ಲಿ ರಾಮ್‌ ಚರಣ್‌ ತೇಜಾ ನಟಿಸಿ ಕಮಾಲ್‌ ಮಾಡ್ತಿರೋದು ಒಂದೆಡೆಯಾದ್ರೆ ಸಿನಿಮಾ ಕುರಿತ ಲೇಟೆಸ್ಟ್ ಅಪ್‌ಡೇಟ್‌ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿದೆ.

ತೆರೆಮೇಲೆ ಅದ್ಭುತ ದೃಶ್ಯ ವೈಭವ: ರಾಜಮೌಳಿ ಆ್ಯಕ್ಷನ್‌ ಕಟ್‌ ಹೇಳ್ತಿರೋ ಆರ್‌ಆರ್‌ಆರ್‌ ಸಿನಿಮಾ ಬರೋಬ್ಬರಿ 10 ಭಾಷೆಯಲ್ಲಿ ರಿಲೀಸ್‌ ಆಗಲಿದೆ ಅನ್ನೋ ಮಾಹಿತಿ ಇದೆ. ಹೀಗಾಗಿ ಸದ್ಯ ಹಿಂದಿ ಭಾಷೆಯ ಸಿನಿಮಾದಲ್ಲಿ ನಾಯಕರನ್ನ ಪರಿಚಯಿಸೋ ಕೆಲ್ಸಕ್ಕೆ ಆಮೀರ್‌ ಖಾನ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರಂತೆ. ಈಗಾಗ್ಲೇ ಬಾಲಿವುಡ್‌ ನಟ ಅಜೇಯ್‌ ದೇವಗನ್‌ ಹಾಗೂ ಆಲಿಯಾ ಭಟ್‌ ನಟಿಸ್ತಿದ್ದಾರೆ. ಈಗ ಆಮೀರ್‌ ಖಾನ್ ಕೂಡ ಆರ್‌ಆರ್‌ಆರ್‌ ತಂಡ ಸೇರಿದ್ದಾರೆ. ಇದೆಲ್ಲಾ ಮಾಹಿತಿ ಒಂದು ಕಡೆಯಾದ್ರೆ ಸದ್ಯ ಸಿನಿಮಾದ ಗ್ರಾಫಿಕ್ಸ್‌ಗಾಗಿ ಚಿತ್ರತಂಡ ಖರ್ಚು ಮಾಡ್ತಿರೋ ಮೊತ್ತ ಎಲ್ಲರನ್ನೂ ಬೆರಗುಗೊಳಿಸಲಿದ್ಯಂತೆ. ಆದ್ರೆ, ಇದ್ರ ಪರಿಣಾಮ ತೆರೆಮೇಲೆ ಒಂದು ಅದ್ಭುತ ದೃಶ್ಯ ವೈಭವ ಕಟ್ಟಿಕೊಡೋಕೆ ತಯಾರಾಗಿದೆ ಆರ್‌ಆರ್‌ಆರ್ ತಂಡ.

ಈಗಾಗ್ಲೇ ಆರ್‌ಆರ್‌ಆರ್‌ ಸಿನಿಮಾವನ್ನ ಬರೋಬ್ಬರಿ 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡ್ತಿದೆ ಚಿತ್ರತಂಡ. ವಿಶೇಷ ಅಂದ್ರೆ ಆರ್‌ಆರ್‌ಆರ್‌ ಸಿನಿಮಾದ ಶೂಟಿಂಗ್‌ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾಗಲಿದ್ಯಂತೆ. ಸದ್ಯ ಈ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ. ಮೊದಲೇ ರಾಜಮೌಳಿ ತಮ್ಮ ಕಲ್ಪನೆಯಂತೆ ಕೆತ್ತಿರೋ ಕಥೆ ಅಚ್ಚುಕಟ್ಟಾಗಿ ತೆರೆ ಮೇಲೆ ಮೂಡೋಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳೋ ನಿರ್ದೇಶಕ. ಹೀಗಾಗಿ ಈಗ ಗ್ರಾಫಿಕ್ಸ್‌ ವಿಚಾರವಾಗಿ ಸಿನಿಮಾ ಮೇಲಿನಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಒಟ್ಟಿನಲ್ಲಿ ಆರ್‌ಆರ್‌ಆರ್‌ ಐತಿಹಾಸಿಕ ಸಿನಿಮಾಗಾಗಿ ನುರಿತ ತಂತ್ರಜ್ಞರ ತಂಡ ಕೆಲಸ ಮಾಡ್ತಿದೆ. ಆದ್ರೆ ಗ್ರಾಫಿಕ್ಸ್‌ಗಾಗಿ ಸುರೀತಿರೋ ಹಣ ಎಷ್ಟು ಅನ್ನೋದನ್ನ ಮಾತ್ರ ಚಿತ್ರತಂಡ ರಿವೀಲ್‌ ಮಾಡಿಲ್ಲ.

ರಾಜಮೌಳಿಯ RRR ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟನೆ? ಪಾತ್ರ ಯಾವುದು?

ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು