ತಮಿಳು ನಟಿ ಚಿತ್ರಾ ಸಾವಿನ ಸೀಕ್ರೆಟ್ ರಿವೀಲ್.. ಕಾರಣ ಏನು ಗೊತ್ತಾ?
ಆಕೆ ತಮಿಳಿನ ನಟಿ. ಕಿರು ತೆರೆ ಮೇಲೆ ನಟಿಸಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ಲು.ಆದ್ರೆ ಆಕೆ ಕೆಲ ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ಲು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ರು. ಈಗ ತನಿಖೆಯಲ್ಲಿ ಕೊಲೆ ಮಾಡಿದ್ದು ಯಾರು, ಕೊಲೆಗೆ ಕಾರಣವೇನು ಅನ್ನೋದು ರಿವೀಲ್ ಆಗಿದೆ.

ಹೈದರಾಬಾದ್: ನೋಡೋಕೆ ಸುಂದರಿ.. ನಟನೆಯಲ್ಲಿ ಎತ್ತಿದ ಕೈ.. ತನ್ನ ನಗುವಿನ ಮೂಲಕವೇ ಅದೆಷ್ಟೋ ಅಭಿಮಾನಿಗಳ ಮನಸ್ಸು ಕದ್ದ ಚೆಲುವೆ. ಸಾಧನೆ ಮಾಡ್ಬೇಕು, ಎಲ್ಲರಂತೆ ನಾನು ದೊಡ್ಡ ನಟಿ ಆಗ್ಬೇಕು ಅನ್ನೋ ಕನಸು ಕಂಡಿದ್ದ ನಟಿ..
ಜೀವವನ್ನೇ ತೆಗೆದ ಸೀರಿಯಲ್ ಕಿಸ್ಸಿಂಗ್ ಸೀನ್: ಈಕೆಯ ಹೆಸರು ಚಿತ್ರಾ.. 28 ವರ್ಷ. ಚನ್ನೈನಲ್ಲಿ ವಾಸಿಸುತ್ತಿದ್ದ ಈಕೆ ತಮಿಳು ಚಿತ್ರೋದ್ಯಮದ ಉದಯೋನ್ಮುಖ ನಟಿ. ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನ ಅಭಿನಯದಿಂದ ಒಳ್ಳೆಯ ಹೆಸರು ಪಡೆದಿದ್ದ ನಟಿ. ಆದ್ರೆ ಇದೇ ತಿಂಗಳ 9ರಂದು ಚನ್ನೈನ ಹೊರ ವಲಯದ ಖಾಸಗಿ ಹೋಟೆಲ್ವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ಲು.
ಈಕೆಯ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಚಿತ್ರಾಳ ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದು ಪತಿ ಹೇಮಂತ್ ಕೊಲೆ ಮಾಡಿದ್ದಾಗಿ ಆರೋಪಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಸಹ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಚನ್ನೈನ ಪೊಲೀಸರು ಪತಿ ಹೇಮಂತನನ್ನು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೆ ಸಹ ಒಳಪಡಿಸಿದ್ದರು.
ಸದ್ಯ ನಟಿ ಚಿತ್ರ ಸಾವಿಗೆ ಮುಖ್ಯವಾದ ಕಾರಣ ಏನು ಅನ್ನೋದು ಈಗ ಬಯಲಾಗಿದೆ. ನಟಿ ಸಾವಿನ ಮುಂಚೆ ನಟಿಸಿದ ಹೊಸ ಧಾರವಾಹಿಯೊಂದರಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದು ಈಕೆಯ ಸಾವಿಗೆ ಕಾರಣ ಎಂದು ಬಯಲಾಗಿದೆ. ಪಾಂಡಿಯನ್ ಸ್ಟೋರ್ಸ್ ಅನ್ನೋ ಧಾರವಾಹಿಯಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿ ಚಿತ್ರಾ ನಟಿಸಿದ್ದಳು. ಆದ್ರೆ, ಇದಕ್ಕೆ ಪತಿ ಹೇಮಂತ್ ವಿರೋಧಿಸಿದ್ದ. ಹೀಗಾಗಿ ಆತ ಈ ವಿಷಯ ಹಿಡಿದುಕೊಂಡು ನಟಿ ಚಿತ್ರಾಳಿಗೆ ತೀವ್ರವಾಗಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಧಾರವಾಹಿಯ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸುವಾಗ ಶೂಟಿಂಗ್ ಸ್ಪಾಟ್ಗೆ ಹೋಗಿದ್ದ ಪತಿ ಹೇಮಂತ್ ಚಿತ್ರೀಕರಣವನ್ನ ವೀಕ್ಷಿಸಿದ್ದ.
ನಂತರದಲ್ಲಿ ಹೋಟೆಲ್ಗೆ ವಾಪಸ್ಸು ಬಂದ ಮೇಲೆ ಕಿಸ್ಸಿಂಗ್ ದೃಶ್ಯದ ಬಗ್ಗೆ ವಿರೋಧಿಸಿದ್ದ. ನಟಿ ಚಿತ್ರಾಳ ಕ್ಯಾರೆಕ್ಟರ್ ಮೇಲೆ ಸಾಕಷ್ಟು ಆರೋಪ ಮಾಡಿದ್ದ ಎನ್ನಲಾಗಿದೆ. ಚಿತ್ರಾ ಪತಿಗೆ ಕೇವಲ ಪಾತ್ರದ ಭಾಗವಾಗಿ ರೋಮ್ಯಾನ್ಸ್ ಸೀನ್‌ನಲ್ಲಿ ನಟಿಸಿದ್ದಾಗಿ, ಅದು ಬಿಟ್ಟು ಬೇರೆ ಉದ್ದೇಶ ಇಲ್ಲ ಎಂದು ಉತ್ತರ ನೀಡಿದ್ಲು. ಈ ವೇಳೆ ಇಬ್ಬರ ಜಗಳ ತಾರಕಕ್ಕೇರಿದೆ. ನಂತರದಲ್ಲಿ ಮರುದಿನ ಬೆಳಗ್ಗೆ ಚಿತ್ರಾಳ ಶವ ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿತ್ತು.
ಧಾರವಾಹಿಯಲ್ಲಿ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದಕ್ಕೆ ಹೇಮಂತ್ ಚಿತ್ರಾಳನ್ನ ಕೊಂದಿದ್ದಾನೆ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಕೇವಲ ನಟನೆ ಮಾಡಿದ್ದಕ್ಕೆ ಹೇಮಂತ್ ನಟಿ ಚಿತ್ರಾಳನ್ನ ಕೊಂದಿದ್ದು ನಿಜಕ್ಕೂ ವಿಪರ್ಯಾಸ.
ನಟಿ ಚಿತ್ರಾ ಆತ್ಮಹತ್ಯೆಗೆ ಹೊಸ ತಿರುವು: 6 ದಿನಗಳ ವಿಚಾರಣೆ ಬಳಿಕ ಪತಿ ಹೇಮಂತ್ ಅರೆಸ್ಟ್