Pushpa Movie Trailer: ಟ್ರೇಲರ್​ ರಿಲೀಸ್​ ಮಾಡಲು ಹೋಗಿ ಟ್ರೋಲ್​ ಆದ ‘ಪುಷ್ಪ’ ತಂಡ

‘ಅಲಾ ವೈಕುಂಠಪುರಮುಲೋ’ ಸಿನಿಮಾ ನಂತರ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Pushpa Movie Trailer: ಟ್ರೇಲರ್​ ರಿಲೀಸ್​ ಮಾಡಲು ಹೋಗಿ ಟ್ರೋಲ್​ ಆದ ‘ಪುಷ್ಪ’ ತಂಡ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ


ಸುಕುಮಾರ್​ ನಿರ್ದೇಶನದ ಸಿನಿಮಾ ಎಂದರೆ ಅಲ್ಲೊಂದು ಅದ್ದೂರಿತನ ಇದ್ದೇ ಇರುತ್ತದೆ. ಈ ಬಾರಿ ಅವರು ಖ್ಯಾತ ನಟ ಅಲ್ಲು ಅರ್ಜುನ್​ ಜತೆ ಕೈ ಜೋಡಿಸಿದ್ದಾರೆ. ಈ ಕಾರಣಕ್ಕೆ ನಿರೀಕ್ಷೆ ಡಬಲ್​ ಆಗಿದೆ. ಡಿಸೆಂಬರ್​ 17ರಂದು ‘ಪುಷ್ಪ’ ಸಿನಿಮಾ ತೆರೆಗೆ ಬರುತ್ತಿದೆ. ಇಂದು (ಡಿಸೆಂಬರ್​ 6 ) ಸಂಜೆ ಚಿತ್ರದ ಟ್ರೇಲರ್​ ರಿಲೀಸ್​ ಆಗಬೇಕಿತ್ತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಟ್ರೇಲರ್​ ರಿಲೀಸ್​ ಮಾಡಲು ಸಾಧ್ಯವಿಲ್ಲ ಎಂದು ಚಿತ್ರತಂಡ ಹೇಳಿತ್ತು. ರಾತ್ರಿ ವೇಳೆಗೆ ಕನ್ನಡದಲ್ಲಿ ಟ್ರೇಲರ್​ ರಿಲೀಸ್​ ಆಗಿದೆ.   

‘ಪುಷ್ಪ’ ಟ್ರೇಲರ್​ ರಿಲೀಸ್​ಗೂ ಮೊದಲೇ PushpaTrailer ಹ್ಯಾಶ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು. ಎಲ್ಲರೂ ಟ್ರೇಲರ್​ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಲೆಕ್ಕಾಚಾರ ಉಲ್ಟಾ ಆಗಿತ್ತು. ಕೊನೇ ಕ್ಷಣದಲ್ಲಿ ಟ್ರೇಲರ್​ ರಿಲೀಸ್​ ಮಾಡುವುದಿಲ್ಲ ಎಂದು ಘೋಷಣೆ ಮಾಡಲಾಗಿತ್ತು. ಈ ಬಗ್ಗೆ ಸಾಕಷ್ಟು ಜನರು ಟ್ರೋಲ್​ ಮಾಡಿದ್ದರು.

ರಾತ್ರಿ ವೇಳೆಗೆ  ಟ್ರೇಲರ್​ ರಿಲೀಸ್​ ಮಾಡಲಾಗಿದೆ.

‘ಅಲಾ ವೈಕುಂಠಪುರಮುಲೋ’ ಸಿನಿಮಾ ನಂತರ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ‘ರಂಗಸ್ಥಲಂ’ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ‘ಪುಷ್ಪ’ ಚಿತ್ರ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಎಲ್ಲ ಸಿನಿಮಾದಲ್ಲೂ ಐಟಂ ಸಾಂಗ್​ಗೆ ಸುಕುಮಾರ್​ ಹೆಚ್ಚು ಮಹತ್ವ ನೀಡುತ್ತಾರೆ. ಅದನ್ನು ‘ಪುಷ್ಪ’ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಸಮಂತಾ ಅವರು ಈ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ‘ಪುಷ್ಪ’ ಚಿತ್ರದಲ್ಲಿ ನಟಿ ಸಮಂತಾಗೆ ಐಟಂ ಡ್ಯಾನ್ಸ್​ ಹೇಳಿಕೊಡಲು ಬಂದ​ ಗಣೇಶ್​ ಆಚಾರ್ಯ  

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

 

Published On - 6:12 pm, Mon, 6 December 21

Click on your DTH Provider to Add TV9 Kannada