ಮುಟ್ಟಿದರೆ ಜನ ದಂಗೆಯೇಳುತ್ತಾರೆ ಅನ್ನಲು ಸಿದ್ದರಾಮಯ್ಯರೇನು ಪರಮಾತ್ಮನ ಅಪರಾವತಾರವೇ? ಆರ್ ಅಶೋಕ
ಸಂವಿಧಾನಬದ್ಧ ನ್ಯಾಯಾಂಗದ ಬಗ್ಗೆ ಕೇವಲವಾಗಿ ಮಾತಾಡುವ ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ, ಹೈಕೋರ್ಟ್ ತೀರ್ಪು ಸಿದ್ದರಾಮಯ್ಯ ವಿರುದ್ಧ ಬಂದಾಗ ಅವರು ಕೋರ್ಟ್ ಗಳೆಲ್ಲ ಬಿಜೆಪಿಯ ಪರವಾಗಿವೆ ಎನ್ನುತ್ತಾರೆ, ಹಾಗಾದರೆ ಶಿವಕುಮಾರ್ ಪ್ರಕರಣದಲ್ಲಿ ಅದೇ ಮಾತು ಯಾಕೆ ಅನ್ವಯಿಸುವುದಿಲ್ಲ ಎಂದು ಅಶೋಕ ಕೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು. ನನ್ನನ್ನು ಮುಟ್ಟಿದರೆ ಜನ ದಂಗೆಯೇಳುತ್ತಾರೆ ಅಂತ ಸಿಎಂ ಹೇಳುತ್ತಾರೆ, ಇವರೇನು ಪರಮಾತ್ಮನ ಅಪರಾವತಾರವೇ? ಹಿಂದೆ ಜನಾರ್ಧನ ರೆಡ್ಡಿ ಮತ್ತು ಡಿಕೆ ಶಿವಕುಮಾರ್ ಬಂಧನವಾದಾಗಲೂ ಹಾಗೆಯೇ ಹೇಳಲಾಗಿತ್ತು, ಆಗ ಯಾರಾದರೂ ದಂಗೆಯೆದ್ರಾ? ಅವರನ್ನು ಬಂಧಿಸಿದರೆ ತನಿಖಾಧಿಕಾರಿಗಳು ಬಂಧಿಸುತ್ತಾರೆ, ವಿರೋಧ ಪಕ್ಷದವರಲ್ಲ, ತಮ್ಮ ಅವ್ಯವಹಾರಗಳಿಂದ ಜನರ ಗಮನ ಡೈವರ್ಟ್ ಮಾಡಲು ಸಿದ್ದರಾಮಯ್ಯ ಹೀಗೆಲ್ಲ ಮಾತಾಡುತ್ತಾರೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಬಿಟ್ಟರೆ ತಾನೇ ಮುಖ್ಯಮಂತ್ರಿ ಅಂತ ಹಿಂದೆ ರಾಜ್ಯದಲ್ಲಿ ಯಾರೂ ಹೇಳಿಲ್ಲ: ಆರ್ ಅಶೋಕ