Karnataka Govt Holidays 2025: 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ

Karnataka Public Holidays 2025: 2024ನೇ ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. 2025ನೇ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧರಾಗಿದ್ದಾರೆ. ಇನ್ನು ಮುಂದಿನ ವರ್ಷ ಅಂದರೆ 2025ರಲ್ಲಿ ಕರ್ನಾಟಕದಲ್ಲಿ ಸಿಗುವ ಸರ್ಕಾರಿ ರಜೆಗಳು ಎಷ್ಟು? 2025ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಇಲ್ಲಿದೆ ನೋಡಿ.

Karnataka Govt Holidays 2025: 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ
2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿ
Follow us
ರಮೇಶ್ ಬಿ. ಜವಳಗೇರಾ
|

Updated on:Nov 14, 2024 | 11:48 PM

ಬೆಂಗಳೂರು, (ನವೆಂಬರ್ 14): ಕರ್ನಾಟಕ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ನಾನಾ ಹಬ್ಬಗಳು ಸೇರಿದಂತೆ 2025ರಲ್ಲಿ ಒಟ್ಟು 19 ದಿನ ರಜೆ ಘೋಷಿಸಲಾಗಿದೆ. ಇನ್ನು ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ.

ಭಾನುವಾರಗಳಂದು ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ.

ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.

ಇನ್ನು ದಿನಾಂಕ 03/09/2025 (ಬುಧವಾರ) ಕೈಲ್ ಮೂಹರ್ತ, ದಿನಾಂಕ 18/10/2025 (ಶನಿವಾರ) ತುಲ ಸಂಕ್ರಮಣ ಹಾಗೂ ದಿನಾಂಕ 05/12/2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು

  • 14.01.2025, ಮಂಗಳವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
  •  26.02.2025, ಬುಧವಾರ. ಮಹಾಶಿವರಾತ್ರಿ
  •  31.03.2025, ಸೋಮವಾರ. ಖುತುಬ್-ಎ-ರಂಜಾನ್
  • 10.04.2025, ಗುರುವಾರ. ಮಹಾವೀರ ಜಯಂತಿ
  •  14.04.2025, ಸೋಮವಾರ. ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
  •  18.04.2025, ಶುಕ್ರವಾರ. ಗುಡ್‌ ಫ್ರೈಡೆ
  • 30.04.2025, ಬುಧವಾರ. ಬಸವ ಜಯಂತಿ, ಅಕ್ಷಯ ತೃತೀಯ
  • 1.05.2025, ಗುರುವಾರ. ಕಾರ್ಮಿಕ ದಿನಾಚರಣೆ
  • 7.06.2025, ಶನಿವಾರ. ಬಕ್ರೀದ್
  • 15.08.2025, ಶುಕ್ರವಾರ. ಸ್ವಾತಂತ್ರ್ಯ ದಿನಾಚರಣೆ
  • 27.08.2025, ಬುಧವಾರ. ವರಸಿದ್ಧಿ ವಿನಾಯಕ ವ್ರತ
  • 5.09.2025, ಶುಕ್ರವಾರ. ಈದ್-ಮಿಲಾದ್
  • 1.10.2025, ಬುಧವಾರ. ಮಹಾನವಮಿ, ಆಯುಧಪೂಜೆ, ವಿಜಯದಶಮಿ
  • 2.10.2025, ಗುರುವಾರ. ಗಾಂಧಿ ಜಯಂತಿ
  • 7.10.2025, ಮಂಗಳವಾರ. ವಾಲ್ಮೀಕಿ ಜಯಂತಿ
  • 20.10.2025, ಸೋಮವಾರ. ನರಕ ಚತುದರ್ಶಿ
  • 22.10.2025, ಬುಧವಾರ. ಬಲಿಪಾಡ್ಯಮಿ, ದೀಪಾವಳಿ
  • 01.11.2025, ಶನಿವಾರ. ಕನ್ನಡ ರಾಜೋತ್ಸವ
  • 25.12.2025, ಗುರುವಾರ. ಕ್ರಿಸ್‌ಮಸ್

Published On - 11:13 pm, Thu, 14 November 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ