ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಸರ್ಪ್ರೈಸ್? ಹೊಸ ಸಿನಿಮಾ ಟೈಟಲ್ ಮೇಲೆ ಕಣ್ಣು

ಅಟ್ಲಿ ಮತ್ತು ಅರ್ಜುನ್ ಅರ್ಜುನ್ ಜೋಡಿಯ ಸಿನಿಮಾದ ಟೈಟಲ್ ಏನೆಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಈ ಸಿನಿಮಾವನ್ನು AA22xA6 ಎಂದು ಕರೆಯಲಾಗುತ್ತಿದೆ. ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಶೀರ್ಷಿಕೆ ಘೋಷಣೆ ಆಗಲಿದೆ ಎಂದು ಅರ್ಜುನ್ ಅರ್ಜುನ್ ಫ್ಯಾನ್ಸ್ ನಿರೀಕ್ಷಿಸಿದ್ದಾರೆ.

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಸರ್ಪ್ರೈಸ್? ಹೊಸ ಸಿನಿಮಾ ಟೈಟಲ್ ಮೇಲೆ ಕಣ್ಣು
Allu Arjun, Atlee
Image Credit source: Sun Pictures

Updated on: Mar 29, 2026 | 8:08 AM

ಟಾಲಿವುಡ್‌ನ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ (Allu Arjun) ಅವರ ಅಭಿಮಾನಿಗಳು ಸದ್ಯ ಏಪ್ರಿಲ್ 8ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಂದು ಅಲ್ಲು ಅರ್ಜುನ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ನಿರ್ದೇಶಕ ಅಟ್ಲೀ (Atlee) ಸಜ್ಜಾಗುತ್ತಿದ್ದಾರೆ ಎಂಬ ವದಂತಿಗಳು ಜೋರಾಗಿ ಕೇಳಿಬರುತ್ತಿವೆ. ಅಲ್ಲು ಅರ್ಜುನ್ ಮತ್ತು ಅಟ್ಲೀ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಏಪ್ರಿಲ್ 8ರಂದು ಅಧಿಕೃತವಾಗಿ ಶೀರ್ಷಿಕೆಯನ್ನು ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಕೇವಲ ಒಂದು ಪೋಸ್ಟರ್ ಮೂಲಕ ಹೆಸರು ಪ್ರಕಟಿಸುತ್ತಾರೋ ಅಥವಾ ಒಂದು ಭರ್ಜರಿ ವೀಡಿಯೊ ಝಲಕ್ ತೋರಿಸುತ್ತಾರೋ ಎಂಬುದು ಸದ್ಯದ ಸಸ್ಪೆನ್ಸ್. ಅಭಿಮಾನಿಗಳ ನಿರೀಕ್ಷೆಯಂತೆ ಏನಾದರೂ ಕಂಟೆಂಟ್ ನೀಡಲೇಬೇಕು ಎಂದು ಅಟ್ಲೀ ಶ್ರಮಿಸುತ್ತಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ವಿಶೇಷ ವೀಡಿಯೊ ಅಥವಾ ಟೈಟಲ್ ಟೀಸರ್ ಸಿದ್ಧಪಡಿಸಲು ಬೇಕಾದ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ.

ಹುಟ್ಟುಹಬ್ಬದ ವೇಳೆಗೆ ಕಂಟೆಂಟ್ ಸಂಪೂರ್ಣವಾಗಿ ರೆಡಿಯಾಗುತ್ತದೆಯೇ ಎಂಬ ಬಗ್ಗೆ ಅಟ್ಲೀ ಅವರಿಗೆ ಇನ್ನೂ ಪೂರ್ಣ ಪ್ರಮಾಣದ ಖಾತ್ರಿ ಇಲ್ಲ ಎನ್ನಲಾಗಿದೆ. ಒಂದು ವೇಳೆ ತಾಂತ್ರಿಕ ಕೆಲಸಗಳು ವಿಳಂಬವಾದರೆ ಕೇವಲ ಅಧಿಕೃತ ಘೋಷಣೆಯಷ್ಟೇ ಹೊರಬೀಳಬಹುದು. ಭಾರಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ‘ಪುಷ್ಪ 2’ ಬಳಿಕ ಬರುತ್ತಿರುವ ಸಿನಿಮಾ ಆದ್ದರಿಂದ ನಿರೀಕ್ಷೆ ಹೆಚ್ಚಿದೆ.

ಈ ಚಿತ್ರವನ್ನು ಸುಮಾರು 800 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಮತ್ತು ಜಾನ್ವಿ ಕಪೂರ್ ಅವರಂತಹ ಸ್ಟಾರ್ ನಟಿಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಅಟ್ಲೀ ಅವರು ಈ ಚಿತ್ರಕ್ಕಾಗಿ ಪ್ಯಾರಲಲ್ ಯೂನಿವರ್ಸ್ ಎಂಬ ವಿಭಿನ್ನ ಕಾನ್ಸೆಪ್ಟ್ ಆಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ಅಲ್ಲು ಅರ್ಜುನ್ ಅವರು ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಇದು ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಭಾರತ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. 23 ವರ್ಷ ಪೂರೈಸಿದ ಈ ವಿಶೇಷ ಸಂದರ್ಭದಲ್ಲಿ, ಅವರ ತಂಡವು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆಯ ಪೋಸ್ಟ್ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us