ಆಮಿರ್ ಖಾನ್ ಭೇಟಿಯಾದ ಅಲ್ಲು ಅರ್ಜುನ್, ಒಟ್ಟಿಗೆ ಸಿನಿಮಾ?

Allu Arjun-Aamir Khan: ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದ ನಡುವೆ ಅಂತರ ಕಡಿಮೆ ಆಗಿದೆ. ಇದೀಗ ಅಲ್ಲು ಅರ್ಜುನ್, ಆಮಿರ್ ಖಾನ್ ಅವರನ್ನು ಮುಂಬೈನಲ್ಲಿ ಭೇಟಿ ಆಗಿದ್ದು, ಈ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆಮಿರ್ ಖಾನ್ ಭೇಟಿಯಾದ ಅಲ್ಲು ಅರ್ಜುನ್, ಒಟ್ಟಿಗೆ ಸಿನಿಮಾ?
Aamir Khan Allu Arjun

Updated on: May 07, 2025 | 12:56 PM

ಪ್ಯಾನ್ ಇಂಡಿಯಾ (Pan India) ಸಿನಿಮಾ ಸಂಸ್ಕೃತಿ ಹೆಚ್ಚಾದಂತೆ ಬಾಲಿವುಡ್ (Bollywood) ಮತ್ತು ದಕ್ಷಿಣ ಭಾರತ ಚಿತ್ರರಂಗದ ನಡುವೆ ಗೆರೆ ತೆಳುವಾಗುತ್ತಾ ಸಾಗುತ್ತಿದೆ. ದಶಕಗಳಿಂದಲೂ ದಕ್ಷಿಣ ಭಾರತದ ಕಡೆ ಮುಖ ಸಹ ಮಾಡದಿದ್ದ ಹಲವಾರು ಬಾಲಿವುಡ್ ಸ್ಟಾರ್ ನಟರು ಈಗ ನಾ ಮುಂದು-ತಾ ಮುಂದು ಎಂದು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ನಿರ್ದೇಶಕರನ್ನು ಅಂಗಲಾಚಿ ಸಿನಿಮಾ ಮಾಡಿಸಿಕೊಳ್ಳುತ್ತಿದ್ದಾರೆ. ಯಾರ ಸಿನಿಮಾದಲ್ಲೂ ಅತಿಥಿ ಪಾತ್ರ ಸಹ ಮಾಡದಿದ್ದ ಆಮಿರ್ ಖಾನ್ ಪ್ರಸ್ತುತ ರಜನೀಕಾಂತ್​ರ ‘ಕೂಲಿ’ ಸಿನಿಮಾನಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದೀಗ ಮತ್ತೊಬ್ಬ ದಕ್ಷಿಣ ಭಾರತದ ಸ್ಟಾರ್ ನಟನ ಜೊತೆಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

ನಟ ಅಲ್ಲು ಅರ್ಜುನ್ ಇತ್ತೀಚೆಗಷ್ಟೆ ಮುಂಬೈನಲ್ಲಿ ಆಮಿರ್ ಖಾನ್ ಅನ್ನು ಭೇಟಿ ಆಗಿದ್ದಾರೆ. ಆಮಿರ್ ಖಾನ್ ನಿವಾಸಕ್ಕೆ ತೆರಳಿದ್ದ ನಟ ಅಲ್ಲು ಅರ್ಜುನ್, ಹಲವು ಸಮಯ ನಟನೊಟ್ಟಿಗೆ ಚರ್ಚೆ ನಡೆಸಿದ್ದಾರೆ. ಅಲ್ಲು ಅರ್ಜುನ್ ಹಾಗೂ ಆಮಿರ್ ಖಾನ್ ಒಟ್ಟಿಗೆ ಫೋಟೊಕ್ಕೆ ಫೋಸು ನೀಡಿದ್ದು, ಚಿತ್ರ ಇದೀಗ ವೈರಲ್ ಆಗಿದೆ. ಅಲ್ಲು ಅರ್ಜುನ್-ಆಮಿರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ. ಈ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡಲು ಆರಂಭವಾಗಿದೆ.

ಇದನ್ನೂ ಓದಿ:ಆಮಿರ್ ಖಾನ್​ಗೆ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಹೆಸರು ಕೊಟ್ಟಿದ್ದು ಇದೇ ವ್ಯಕ್ತಿ

ಅಸಲಿಗೆ ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಫ್ಯಾಂಟಸಿ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಿನಿಮಾಕ್ಕಾಗಿ ತಯಾರಿಯನ್ನು ಈಗಾಗಲೇ ಆರಂಭಿಸಿದ್ದಾರೆ. ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ರೀತಿಯಲ್ಲಿ ಬೇರೊಂದು ಗ್ರಹದಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಚಿತ್ರ ವಿಚಿತ್ರ ಜೀವಿಗಳು, ಅತ್ಯಾಧುನಿಕ ಶಸ್ತ್ರಾಸ್ತ್ರ, ವಾಹನಗಳು ಇರಲಿವೆ. ಇದೇ ಸಿನಿಮಾದ ವಿಶೇಷ ಪಾತ್ರದಲ್ಲಿ ಆಮಿರ್ ಖಾನ್ ಸಹ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಆಮಿರ್ ಖಾನ್ ಪ್ರಸ್ತುತ ‘ಸಿತಾರೆ ಜಮೀನ್ ಪರ್’ ಸಿನಿಮಾನಲ್ಲಿ ಬ್ಯುಸಿಯಾಗಿದ್ದಾರೆ. ರಜನೀಕಾಂತ್ ನಟಿಸಿ, ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾನಲ್ಲಿ ಆಮಿರ್ ಖಾನ್ ಈಗಾಗಲೇ ನಟಿಸಿದ್ದಾರೆ. ಆಮಿರ್ ತಮ್ಮ ಮುಂದಿನ ಸಿನಿಮಾವನ್ನು ಲೋಕೇಶ್ ಕನಗರಾಜ್ ಜೊತೆಗೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸೂರ್ಯಗಾಗಿ ಲೋಕೇಶ್ ತಯಾರಿಟ್ಟುಕೊಂಡಿದ್ದ ‘ಇರುಂಬು ಕೈ ಮಾಯಾವಿ’ ಕತೆಯನ್ನು ಆಮಿರ್ ಖಾನ್​ಗಾಗಿ ಸಿನಿಮಾ ಮಾಡಲಿದ್ದಾರಂತೆ ಲೋಕೇಶ್ ಕನಗರಾಜ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us