Butta Bomma Song: ‘ಬುಟ್ಟ ಬೊಮ್ಮ..’ ಹಾಡಿಗೆ ಮತ್ತೊಂದು ದಾಖಲೆ; ಹಿರಿಹಿರಿ ಹಿಗ್ಗಿದ ಅಲ್ಲು ಅರ್ಜುನ್​ ಫ್ಯಾನ್ಸ್​​

Allu Arjun | Pooja Hegde: 2020ರ ಫೆ.25ರಂದು ಬಿಡುಗಡೆಯಾದ ಈ ಹಾಡನ್ನು ಯೂಟ್ಯೂಬ್​ನಲ್ಲಿ ಜನರು ಮುಗಿಬಿದ್ದು ನೋಡಿದ್ದರು. 615 ಮಿಲಿಯನ್​ (61.5 ಕೋಟಿ) ಬಾರಿ ಈ ಹಾಡನ್ನು ಜನರು ಕಣ್ತುಂಬಿಕೊಂಡಿದ್ದರು. ಈಗ ಅದರ ಜೊತೆ ಇನ್ನೊಂದು ದಾಖಲೆ ಸೇರಿಕೊಂಡಿದೆ.

Butta Bomma Song: ‘ಬುಟ್ಟ ಬೊಮ್ಮ..’ ಹಾಡಿಗೆ ಮತ್ತೊಂದು ದಾಖಲೆ; ಹಿರಿಹಿರಿ ಹಿಗ್ಗಿದ ಅಲ್ಲು ಅರ್ಜುನ್​ ಫ್ಯಾನ್ಸ್​​
ಅಲ್ಲು ಅರ್ಜುನ್​ - ಪೂಜಾ ಹೆಗ್ಡೆ

Updated on: May 23, 2021 | 11:49 AM

ಟಾಲಿವುಡ್​ನ ಸ್ಟಾರ್​ ನಟ ಅಲ್ಲು ಅರ್ಜುನ್​ ಡ್ಯಾನ್ಸ್​ ಮಾಡೋದರಲ್ಲಿ ಸಿಕ್ಕಾಪಟ್ಟೆ ಫೇಮಸ್​. ಅವರ ಡ್ಯಾನ್ಸ್​ ಶೈಲಿಗೆ ಬಾಲಿವುಡ್​ ಮಂದಿ ಕೂಡ ಬೆರಗಾಗಿದ್ದುಂಟು. ಅಭಿಮಾನಿಗಳಂತೂ ಅಲ್ಲು ಅರ್ಜುನ್​ ಅವರ ಹಾಡುಗಳನ್ನು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿರುತ್ತಾರೆ. ಅಷ್ಟರಮಟ್ಟಿಗೆ ಅವರು ತಮ್ಮ ಡ್ಯಾನ್ಸ್​ ಮೂಲಕ ಮೋಡಿ ಮಾಡಿದ್ದಾರೆ. 2020ರ ಆರಂಭದಲ್ಲಿ ತೆರೆಕಂಡ ‘ಅಲಾ ವೈಕುಂಟಪುರಮುಲೋ’ ಸಿನಿಮಾ ಕೂಡ ಹಾಡುಗಳ ಕಾರಣಕ್ಕೆ ಸಖತ್​ ಸೌಂಡು ಮಾಡಿತ್ತು. ಅದರಲ್ಲೂ, ‘ಬುಟ್ಟ ಮೊಮ್ಮ..’ ಸಾಂಗ್​ ಮಾಡಿದ ಮೋಡಿ ಸಾಮಾನ್ಯವಾದದ್ದಲ್ಲ. ಈಗ ಆ ಹಾಡು ಹೊಸ ದಾಖಲೆ ಬರೆದಿದೆ.

ಬಹುಭಾಷಾ ನಟಿ, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮತ್ತು ಅಲ್ಲು ಅರ್ಜುನ್​ ಜೊತೆಯಾಗಿ ಹೆಜ್ಜೆ ಹಾಕಿರುವ ‘ಬುಟ್ಟ ಬೊಮ್ಮ..’ ಹಾಡು ಸೂಪರ್​ ಹಿಟ್​ ಆಯಿತು. ಎಲ್ಲ ವಯೋಮಾನದ ಪ್ರೇಕ್ಷಕರು ಕೂಡ ಈ ಸಾಂಗ್​ಗೆ ಮರಳಾದರು. ಟಿಕ್​ಟಾಕ್​, ಇನ್ಸ್​ಗ್ರಾಮ್​ ರೀಲ್ಸ್​, ವಾಟ್ಸ್​ಆ್ಯಪ್​ ಸ್ಟೇಟಸ್​ ಮುಂತಾದ ಕಡೆಗಳಲ್ಲಿ ಬುಟ್ಟು ಬೊಮ್ಮ ಧೂಳೆಬ್ಬಿಸಿತ್ತು. ಯೂಟ್ಯೂಬ್​ನಲ್ಲಿ ಈ ಹಾಡನ್ನು ಜನರು ಮುಗಿಬಿದ್ದು ನೋಡಿದರು. ಯೂಟ್ಯೂಬ್​ನಲ್ಲಿ 615 ಮಿಲಿಯನ್​ (61.5 ಕೋಟಿ) ಬಾರಿ ಈ ಹಾಡನ್ನು ಜನರು ಕಣ್ತುಂಬಿಕೊಂಡಿದ್ದರು. ಈಗ ಅದರ ಜೊತೆ ಇನ್ನೊಂದು ದಾಖಲೆ ಸೇರಿಕೊಂಡಿದೆ.

2020ರ ಫೆ.25ರಂದು ಯೂಟ್ಯೂಬ್​ನಲ್ಲಿ ‘ಬುಟ್ಟ ಬೊಮ್ಮ..’ ಹಾಡು ಬಿಡುಗಡೆ ಆಯಿತು. ಅಲ್ಲಿಂದ ಇಲ್ಲಿಯವರೆಗೆ ಯೂಟ್ಯೂಬ್​ನಲ್ಲಿ ಈ ಗೀತೆಯನ್ನು ಬರೋಬ್ಬರಿ 4 ಮಿಲಿಯನ್ (40 ಲಕ್ಷ) ಜನರು ಲೈಕ್​ ಮಾಡಿದ್ದಾರೆ. ಆ ಮೂಲಕ ಅತಿ ಹೆಚ್ಚು ಲೈಕ್​ ಪಡೆದ ತೆಲುಗು ಹಾಡು ಎಂಬ ದಾಖಲೆಯನ್ನು ‘ಬುಟ್ಟ ಬೊಮ್ಮ..’  ಬರೆದಿದೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್​ ಮತ್ತು ಪೂಜಾ ಹೆಗ್ಡೆ ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ದಾರೆ. ಸಿನಿಮಾ ಕೂಡ ಕಳೆದ ವರ್ಷ ಬಾಕ್ಸ್​ ಆಫೀಸ್​ನಲ್ಲಿ ಸೂಪರ್​ ಹಿಟ್​ ಆಗಿತ್ತು. ಅಲ್ಲು ಅರ್ಜುನ್​ ವೃತ್ತಿಜೀವನಕ್ಕೆ ಮತ್ತಷ್ಟು ಮೈಲೇಜ್​ ನೀಡಿತ್ತು. ಸದ್ಯ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ.

YouTube video player

(‘ಅಲಾ ವೈಕುಂಟಪುರಮುಲೋ’ ಸಿನಿಮಾದ ಬುಟ್ಟ ಬೊಮ್ಮ ಹಾಡು)

ಇಡೀ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ವೀವ್ಸ್​ ಪಡೆದ ಹಾಡು ಎಂಬ ಖ್ಯಾತಿಯನ್ನು ‘ಮಾರಿ 2’ ಚಿತ್ರ ‘ರೌಡಿ ಬೇಡಿ..’ ಗೀತೆ ಹೊಂದಿದೆ. 100 ಕೋಟಿಗೂ ಅಧಿಕ ಬಾರಿ ಆ ಹಾಡು ವೀಕ್ಷಣೆ ಕಂಡಿದೆ. 47 ಲಕ್ಷ​ ಲೈಕ್ಸ್​ ಪಡೆದುಕೊಂಡಿದೆ. 7 ಲಕ್ಷ ಮಂದಿ ಡಿಸ್ಲೈಕ್​ ಮಾಡಿದ್ದಾರೆ. ‘ಬುಟ್ಟ ಬೊಮ್ಮ..’ ಹಾಡನ್ನು 4.7 ಲಕ್ಷ ಜನರು ಡಿಸ್ಲೈಕ್​ ಮಾಡಿದ್ದಾರೆ.

ಇದನ್ನೂ ಓದಿ:

ಒಂದೇ ಒಂದು ಹಾಡು ನೋಡಿ ಅಲ್ಲು ಅರ್ಜುನ್​ ಪ್ರತಿಭೆಗೆ ಸಲಾಂ ಎಂದ ಸಲ್ಮಾನ್​ ಖಾನ್​

ಯಶ್​ ಹಾದಿ ಅನುಸರಿಸಿದ ಅಲ್ಲು ಅರ್ಜುನ್​; ಪುಷ್ಪ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್​

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us