
ಇಂದು (ಏಪ್ರಿಲ್ 8) ಅಲ್ಲು ಅರ್ಜುನ್ (Allu Arjun) ಬರ್ತ್ಡೇ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾ ‘ಪುಷ್ಪ 2’ ಚಿತ್ರದ ಟೀಸರ್ನ ತಂಡ ಫ್ಯಾನ್ಸ್ಗೆ ಗಿಫ್ಟ್ ಆಗಿ ಕೊಟ್ಟಿದೆ. ಪೋಸ್ಟರ್ಗಳ ಮೂಲಕ ಟೀಸರ್ ಯಾವ ರೀತಿಯಲ್ಲಿ ಇರಬಹುದು ಎಂಬ ಬಗ್ಗೆ ತಂಡ ಸೂಚನೆ ಕೊಟ್ಟಿತ್ತು. ಅದೇ ರೀತಿಯಲ್ಲಿ ಈ ಟೀಸರ್ ಮೂಡಿ ಬಂದಿದೆ. ಅಲ್ಲು ಅರ್ಜುನ್ ಅವರು ಸಖತ್ ರಗಡ್ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ.
ಈ ಮೊದಲು ಅಲ್ಲು ಅರ್ಜುನ್ ಅವರು ಮುಖಕ್ಕೆ ಬಣ್ಣ ಬಳಿದುಕೊಂಡು, ಸೀರೆ ಉಟ್ಟ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಇದರ ಪೋಸ್ಟರ್ ವೈರಲ್ ಆಗಿತ್ತು. ಈಗ ರಿಲೀಸ್ ಆಗಿರೋ ಟೀಸರ್ನಲ್ಲಿ ಅಲ್ಲು ಅರ್ಜುನ್ ಅವರು ಇದೇ ಅವತಾರದಲ್ಲಿ ಫೈಟ್ ಮಾಡಿದ್ದಾರೆ. ಇದಕ್ಕಾಗಿ ಹಾಕಲಾದ ಬೃಹತ್ ಸೆಟ್ಗಳು ಗಮನ ಸೆಳೆದಿವೆ.
ಒಂದು ನಿಮಿಷದ ಎಂಟು ಸೆಕೆಂಡ್ ಈ ಟೀಸರ್ ಇದೆ. ಇದರಲ್ಲಿ ಹೆಚ್ಚು ಭಾಗ ಅಲ್ಲು ಅರ್ಜುನ್ ಅವರ ಎಂಟ್ರಿಯನ್ನೇ ತೋರಿಸಲಾಗಿದೆ. ನಂತರ ಒಂದೆರಡು ಫೈಟಿಂಗ್ ದೃಶ್ಯ ಇದೆ. ಅಲ್ಲಿಗೆ ಇಡೀ ಟೀಸರ್ ಪೂರ್ಣಗೊಂಡಿದೆ. ಇದು ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಇನ್ನೂ ಏನಾದರೂ ಹೆಚ್ಚಿನದ್ದನ್ನು ತೋರಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಪವರ್ಫುಲ್ ಪೋಸ್ಟರ್ ರಿಲೀಸ್ ಮಾಡಿದ ‘ಪುಷ್ಪ 2’ ತಂಡ; ಟೀಸರ್ಗೆ ಕೌಂಟ್ಡೌನ್
‘ಪುಷ್ಪ 2’ ಚಿತ್ರವನ್ನು ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಪಾರ್ಟ್ಗೆ ಹೋಲಿಕೆ ಮಾಡಿದರೆ ಎರಡನೇ ಪಾರ್ಟ್ನಲ್ಲಿ ಅವರು ಮತ್ತಷ್ಟು ಪಳಗಿದಂತೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಮೊದಲಾದವರು ‘ಪುಷ್ಪ 2’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ಬಗ್ಗೆ ಇರೋ ನಿರೀಕ್ಷೆ ದುಪ್ಪಟ್ಟಾಗಿದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Mon, 8 April 24