
ಮನೋಜ್ ಬಾಜಪೇಯಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಅಮೇಜಾನ್ ಪ್ರೈಮ್ನಲ್ಲಿ ಈ ವೆಬ್ ಸೀರಿಸ್ ರಿಲೀಸ್ ಆಗಿ ಒಂದು ವಾರ ಕಳೆದರೂ ಇದರ ಬಗ್ಗೆ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಹೀಗಿರುವಾಗಲೇ ಮನೋಜ್ ಬಾಜಪೇಯಿ ವಿಚಾರದಲ್ಲಿ ಅಮೇಜಾನ್ ಮತ್ತು ನೆಟ್ಫ್ಲಿಕ್ಸ್ ಓಪನ್ ಆಗಿಯೇ ಒಬ್ಬರಿಗೊಬ್ಬರು ಟಾಂಗ್ ನೀಡಿವೆ.
ದಿ ಫ್ಯಾಮಿಲಿ ಮ್ಯಾನ್ ಸರಣಿ ಹಿಟ್ ಆದ ನಂತರದಲ್ಲಿ ಮನೋಜ್ ಬಾಜಪೇಯಿ ಅವರಿಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ನಿರ್ದೇಶಕರು ಅವರ ಕಾಲ್ಶೀಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ನೆಟ್ಫ್ಲಿಕ್ಸ್ನ ವೆಬ್ ಸೀರಿಸ್ ಒಂದರಲ್ಲಿ ನಟಿಸೋಕೆ ಮನೋಜ್ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಅಮೇಜಾನ್ಗೆ ಕೌಂಟರ್ ನೀಡುವ ರೀತಿಯಲ್ಲಿ ನೆಟ್ಫ್ಲಿಕ್ಸ್ ಟ್ವೀಟ್ ಮಾಡಿದೆ.
‘ಮನೋಜ್ ನೆಟ್ಫ್ಲಿಕ್ಸ್ ಸೀರಿಸ್ಗೆ ಬರುತ್ತಿದ್ದಾರೆ. ಮ್ಯಾನ್, ನೀವು ನಮ್ಮ ಫ್ಯಾಮಿಲಿಯ ಭಾಗವಾಗುತ್ತಿರುವುದನ್ನು ನಾವು ಇಷ್ಟಪಡುತ್ತಿದ್ದೇವೆ’ ಎಂದು ನೆಟ್ಫ್ಲಿಕ್ಸ್ ಟ್ವೀಟ್ ಮಾಡಿದೆ.
ನೆಟ್ಫ್ಲಿಕ್ಸ್ ಮಾಡಿರುವ ಟ್ವೀಟ್ ಅನ್ನು ಅಮೇಜಾನ್ ಪ್ರೈಮ್ ವಿಡಿಯೋ ರಿಟ್ವೀಟ್ ಮಾಡಿ ಉತ್ತರಿಸಿದೆ. ‘ಶ್ರೀಕಾಂತ್, ಉದ್ಯೋಗ ಬದಲಾಯಿಸಿದ್ದರಿಂದ ದೊಡ್ಡ ಬದಲಾವಣೆಯಾಗಿರಬೇಕು, ಅಲ್ಲವೇ?’ ಎಂದು ಪ್ರಶ್ನಿಸಿದೆ.
‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ನಲ್ಲಿ ಶ್ರೀಕಾಂತ್ (ಮನೋಜ್ ಬಾಜಪೇಯಿ) ಕೆಲಸ ಬದಲಿಸುತ್ತಾನೆ. ಆದರೆ, ಅವನಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ. ಹಳೆಯ ಕೆಲಸಕ್ಕೆ ಮರಳಬೇಕೆಂದು ಹಾತೊರೆಯುತ್ತಿರುತ್ತಾನೆ. ಈ ವೇಳೆ ಆತನಿಗೆ ‘ಶ್ರೀಕಾಂತ್, ಉದ್ಯೋಗ ಬದಲಾಯಿಸಿದ್ದರಿಂದ ದೊಡ್ಡ ಬದಲಾವಣೆಯಾಗಿರಬೇಕು, ಅಲ್ಲವೇ?’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದೇ ಘಟನೆಯನ್ನು ಇಟ್ಟುಕೊಂಡು ನೆಟ್ಫ್ಲಿಕ್ಸ್ ಅಮೇಜಾನ್ ಟಾಂಗ್ ಕೊಟ್ಟಿದೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ, ಹೆಂಡತಿ ಬಿಟ್ಟುಹೋದ ನೋವು; ಇದು ಮನೋಜ್ ಬಾಜಪೇಯಿ ಜೀವನದ ಕಥೆ
Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?
Published On - 3:44 pm, Wed, 9 June 21