ಮತ್ತೆ ವಿವಾದ ಮಾಡಿಕೊಳ್ಳಲಿದೆಯೇ ಅಮೇಜಾನ್​ ಪ್ರೈಮ್​? ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ಗೆ ವಿಘ್ನ

The Family Man 2: ಸೈಫ್​ ಅಲಿ ಖಾನ್​ ನಟನೆಯ ‘ತಾಂಡವ್​’, ಅನುಷ್ಕಾ ಶರ್ಮಾ ನಿರ್ಮಾಣದ ‘ಪಾತಾಳ್​ ಲೋಕ್’​ ವೆಬ್​ ಸರಣಿಗಳಿಗೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ಈಗ ‘ದಿ ಫ್ಯಾಮಿಲಿ ಮ್ಯಾನ್ 2’ ಕೂಡ ಕಿರಿಕ್ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಮತ್ತೆ ವಿವಾದ ಮಾಡಿಕೊಳ್ಳಲಿದೆಯೇ ಅಮೇಜಾನ್​ ಪ್ರೈಮ್​? ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ಗೆ ವಿಘ್ನ
ದಿ ಫ್ಯಾಮಿಲಿ ಮ್ಯಾನ್ 2 - ಸಮಂತಾ ಅಕ್ಕಿನೇನಿ
Edited By:

Updated on: May 21, 2021 | 5:05 PM

ಕಳೆದ ವರ್ಷ ಲಾಕ್​ಡೌನ್​ ಆದಾಗಿನಿಂದ ಜನರು ಓಟಿಟಿ ಪ್ಲಾಟ್​ಫಾರ್ಮ್​ ಕಡೆಗೆ ಹೆಚ್ಚು ಒಲವು ತೋರಿಸಲು ಆರಂಭಿಸಿದರು. ಚಿತ್ರಮಂದಿರಗಳ ಬದಲಿಗೆ ಮನೆಯಲ್ಲೇ ಕುಳಿತು ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಒಗ್ಗಿಕೊಂಡರು. ಅಮೇಜಾನ್​ ಪ್ರೈಂ ವಿಡಿಯೋ, ನೆಟ್​ಫ್ಲಿಕ್ಸ್​ ಮುಂತಾದ ಓಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಚಂದದಾರರ ಸಂಖ್ಯೆ ಹೆಚ್ಚಿತು. ಚಿತ್ರಮಂದಿರಗಳು ಮುಚ್ಚಿದ್ದರಿಂದ ಅನೇಕ ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಲು ಆರಂಭಿಸಿದವು. ಅದರ ಜೊತೆಗೆ ವೆಬ್​ ಸರಣಿಗಳ ಕ್ರೇಜ್​ ಕೂಡ ಹೆಚ್ಚಾಯಿತು. ಆದರೆ ಈ ವೆಬ್​ ಸಿರೀಸ್​ಗಳು ಆಗಾಗ ವಿವಾದ ಮಾಡಿಕೊಳ್ಳುತ್ತವೆ. ಈಗ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ರಾಜ್​ ಮತ್ತು ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಅಮೇಜಾನ್​ ಪ್ರೈಂ ವಿಡಿಯೋನಲ್ಲಿ ಪ್ರಸಾರ ಆಗಲಿದೆ. ಜೂನ್​ 4ರಿಂದ ವೀಕ್ಷಣೆಗೆ ಲಭ್ಯವಾಗಲಿದ್ದು ಇದರಲ್ಲಿ ಸಮಂತಾ ಅಕ್ಕಿನೇನಿ, ಮನೋಜ್​ ಬಾಜಪೇಯ್​, ಪ್ರಿಯಾಮಣಿ ಮುಂತಾದವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಆದರೆ ಟ್ರೇಲರ್​ ಬಿಡುಗಡೆ ಆದಾಗಿನಿಂದ ಈ ಸಿರೀಸ್​ಗೆ ತಮಿಳರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ನಟಿ ಸಮಂತಾ ಅವರು ತಮಿಳು ಉಗ್ರಗಾಮಿ ರೀತಿಯ ಪಾತ್ರ ಮಾಡಿದ್ದಾರೆ. ತಮಿಳಿಗರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಿರುವುದಕ್ಕೆ ತಮಿಳು ಪ್ರೇಕ್ಷಕರು ಸಿಡಿಮಿಡಿಗೊಂಡಿದ್ದಾರೆ.

ವಿವಾದ ಭುಗಿಲೇಳುತ್ತಿದ್ದಂತೆಯೇ ಅಮೇಜಾನ್​ ಪ್ರೈಂ ಎಚ್ಚೆತ್ತುಕೊಂಡಿದೆ. ಟ್ರೇಲರ್​ನಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಿದೆ. ತಮಿಳು ರೆಬೆಲ್ಸ್​ ಎಂಬ ಪದವನ್ನು ಎಡಿಟ್​ ಮಾಡಿ ಬರೀ ರೆಬಲ್ಸ್​ ಎಂದು ಬಳಸಲಾಗಿದೆ. ಟ್ರೇಲರ್​​ನಲ್ಲೇನೂ ಇಷ್ಟು ಬದಲಾವಣೆ ಮಾಡಲಾಗಿದೆ. ಆದರೆ ಇಡೀ ಸಿರೀಸ್​ನಲ್ಲಿ ಹೆಚ್ಚು ಬದಲಾವಣೆ ಮಾಡುವುದು ಕಷ್ಟ. ಹಾಗಾಗಿ, ಬಿಡುಗಡೆ ಆದ ಬಳಿಕ ‘ದಿ ಫ್ಯಾಮಿಲಿ ಮ್ಯಾನ್​ 2’ ನೋಡಿದ ತಮಿಳರು ಮತ್ತಷ್ಟು ತಕರಾರು ತೆಗೆಯುವ ಸಾಧ್ಯತೆ ಇದೆ. ಆ ಮೂಲಕ ಅಮೇಜಾನ್​ ಪ್ರೈಂ ವಿವಾದಕ್ಕೆ ಒಳಗಾಗಬಹುದು.

YouTube video player

ಈ ಹಿಂದೆ ಅಮೇಜಾನ್​ ಪ್ರೈಂನಲ್ಲಿ ಬಿಡುಗಡೆಯಾದ ಕೆಲವು ವೆಬ್​ ಸಿರೀಸ್​ಗಳು ಇದೇ ರೀತಿ ವಿವಾದ ಮಾಡಿಕೊಂಡಿದ್ದವು. ಸೈಫ್​ ಅಲಿ ಖಾನ್​ ನಟನೆಯ ‘ತಾಂಡವ್​’, ಅನುಷ್ಕಾ ಶರ್ಮಾ ನಿರ್ಮಾಣದ ‘ಪಾತಾಳ್​ ಲೋಕ್’​ ವೆಬ್​ ಸರಣಿಗಳಿಗೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ಈಗ ‘ದಿ ಫ್ಯಾಮಿಲಿ ಮ್ಯಾನ್ 2’ ಕೂಡ ಕಿರಿಕ್ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. #FamilyMan2_against_Tamils ಎಂಬ ಹ್ಯಾಷ್​ಟ್ಯಾಗ್​ ಮೂಲಕ ತಮಿಳುನಾಡಿನ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:

ತಮಿಳರ ಕೋಪಕ್ಕೆ ಕಾರಣವಾದ ಸಮಂತಾ; ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ನಲ್ಲಿ ಅವರು ಮಾಡಿದ ತಪ್ಪೇನು?

‘ದಿ ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜೊತೆ ಮಹೇಶ್​ ಬಾಬು ಅಥವಾ ದೇವರಕೊಂಡ ಸಿನಿಮಾ; ಹೊರಬಿತ್ತು ಹೊಸ ಸುದ್ದಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us