
ಅನಿರುದ್ಧ್ ರವಿಚಂದರ್ (Anirudh Ravichander), ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಬೇಡಿಕೆಯ ಸಂಗೀತ ನಿರ್ದೇಶಕ. ‘ವಿಕ್ರಂ’, ‘ಜೈಲರ್’, ‘ಲಿಯೋ’, ‘ಜವಾನ್’ ಇನ್ನೂ ಹಲವಾರು ಸಿನಿಮಾಗಳಿಗೆ ಅನಿರುದ್ಧ್ ನೀಡಿರುವ ಸಂಗೀತ ಭಾರಿ ವೈರಲ್ ಆಗಿದೆ. ಅವರನ್ನು ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಅನ್ನಾಗಿಸಿದೆ. ಅನಿರುದ್ಧ್ ಸಂಗೀತದ ಜೊತೆಗೆ ಅವರ ಲವ್ ಲೈಫ್ ಬಗ್ಗೆಯೂ ಆಗಾಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ಅನಿರುದ್ಧ್ ರವಿಚಂದರ್ ಹೆಸರು ಇತ್ತೀಚೆಗೆ ಸನ್ರೈಸಸ್ ಹೈದರಾಬಾದ್ ಐಪಿಎಲ್ ತಂಡದ ಮಾಲಕಿ ಕಾವ್ಯಾ ಮಾರನ್ ಜೊತೆ ಕೇಳಿ ಬಂದಿತ್ತು. ಇದೀಗ ಈ ಇಬ್ಬರು ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.
ಭಾರತದ ಟಾಪ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್. ಸನ್ರೈಸಸ್ ಹೈದರಾಬಾದ್ ತಂಡದ ಮಾಲಕಿ ಆಗಿರುವ ಜೊತೆಗೆ ಇನ್ನೂ ಹಲವಾರು ಉದ್ಯಮಗಳನ್ನು ಅವರು ನಿಭಾಯಿಸುತ್ತಿದ್ದಾರೆ. 33 ವರ್ಷದ ಕಾವ್ಯಾ ಮಾರನ್ ಆಸ್ತಿ ಮೌಲ್ಯ ಸುಮಾರು 410 ಕೋಟಿಗೂ ಹೆಚ್ಚು. ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಕಾವ್ಯಾ ಹಾಗೂ ಅನಿರುದ್ಧ್ ಪರಸ್ಪರ ವಿವಾಹ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಅದನ್ನು ನಿರಾಕರಿಸಿದ್ದರು ಅನಿರುದ್ಧ್. ಆದರೆ ಇದೀಗ ಈ ಇಬ್ಬರು ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.
ಇದೇ ವರ್ಷ ಜೂನ್ ತಿಂಗಳಲ್ಲಿ ಇವರಿಬ್ಬರ ಮದುವೆ ಸುದ್ದಿ ಹರಿದಾಡಿತ್ತು. ಆಗ ಟ್ವೀಟ್ ಮಾಡಿದ್ದ ಅನಿರುದ್ಧ್ ಅದೆಲ್ಲ ಸುಳ್ಳು ಎಂದಿದ್ದರು. ಇದೀಗ ನ್ಯೂಯಾರ್ಕ್ನಲ್ಲಿ ಅನಿರುದ್ಧ್ ರವಿಚಂದ್ರನ್ ಮತ್ತು ಕಾವ್ಯಾ ಮಾರನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ನ್ಯೂಯಾರ್ಕ್ನ ಬೀದಿಯಲ್ಲಿ ಸುತ್ತಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಭಾರತದ ಯೂಟ್ಯೂಬ್ ವ್ಲಾಗರ್ ಒಬ್ಬಾತ ನ್ಯೂಯಾರ್ಕ್ನಲ್ಲಿ ಅನಿರುದ್ಧ್ ಹಾಗೂ ಕಾವ್ಯಾ ಒಟ್ಟಿಗೆ ಹೋಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಇದನ್ನೂ ಓದಿ:IPL 2026: ಮೊಹಮ್ಮದ್ ಶಮಿಗಾಗಿ ಕಾವ್ಯಾ ಮಾರನ್ ಹಿಂದೆ ಬಿದ್ದ 2 ತಂಡಗಳು
ಅನಿರುದ್ಧ್ ರವಿಚಂದರ್ ಒಳ್ಳೆಯ ಹುಡುಗಿಯನ್ನೇ ಹುಡುಕಿಕೊಂಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಹಾಕುತ್ತಿದ್ದು, ಅನಿರುದ್ಧ್ ರವಿಚಂದರ್ ಮನೆ ಅಳಿಯ ಆಗುವ ತಯಾರಿಯಲ್ಲಿದ್ದಾರೆ ಎಂದೆಲ್ಲ ಕಮೆಂಟ್ಗಳನ್ನು ಮಾಡಿದ್ದಾರೆ. ಅನಿರುದ್ಧ್ ರವಿಚಂದರ್, ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದ ‘ಜೈಲರ್’ ಸಿನಿಮಾಕ್ಕೆ ಸಂಗೀತ ನೀಡಿದ್ದರು. ಅನಿರುದ್ಧ್ ಅವರ ಸಂಗೀತದಿಂದಲೇ ಆ ಸಿನಿಮಾ ಗಮನ ಸೆಳೆದಿತ್ತು. ಸಿನಿಮಾ ಹಿಟ್ ಆದ ಬಳಿಕ ಅನಿರುದ್ಧ್ಗೆ ಐಶಾರಾಮಿ ಕಾರನ್ನು ಕಲಾನಿಧಿ ಮಾರನ್ ಉಡುಗೊರೆಯಾಗಿ ನೀಡಿದ್ದರು.
ಅನಿರುದ್ಧ್ ರವಿಚಂದರ್ ಪ್ರಸ್ತುತ ‘ಜೈಲರ್ 2’, ಶಾರುಖ್ ಖಾನ್ ನಟನೆಯ ‘ಕಿಂಗ್’, ‘ಲವ್ ಇನ್ಶುರೆನ್ಸ್ ಕಂಪೆನಿ’, ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’, ತೆಲುಗಿನ ‘ದಿ ಪ್ಯಾರಡೈಸ್’, ‘ಮ್ಯಾಜಿಕ್’, ‘ಡಿಸಿ’ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ