ಒಟಿಟಿಗೆ ಬಂತು ಕನ್ನಡದ ಹಿಟ್ ಚಿತ್ರ ‘ಎಕ್ಕ’; ಎಲ್ಲಿ ವೀಕ್ಷಿಸಬಹುದು?
ಯುವ ರಾಜ್ಕುಮಾರ್ ನಟನೆಯ 'ಎಕ್ಕ' ಕನ್ನಡ ಸಿನಿಮಾ ಈಗ ಸನ್ NXT ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಥಿಯೇಟರ್ ಬಿಡುಗಡೆಯಾದ ನಾಲ್ಕು ತಿಂಗಳ ನಂತರ 'ಎಕ್ಕ' ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕನ್ನಡ ಸಿನಿಮಾ ಒಟಿಟಿಗೆ ಬರುವುದು ಕಡಿಮೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಒಟಿಟಿಗೆ ಬಂದಿದ್ದು ಖುಷಿ ಕೊಟ್ಟಿದೆ.

ವೀಕೆಂಡ್ ಬಂತು ಎಂದರೆ ಒಟಿಟಿಯಲ್ಲಿ ಯಾವುದಾದರೂ ಒಳ್ಳೆಯ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಸಿಗಬಹುದೇ ಎಂದು ನೋಡುತ್ತಾರೆ. ಪ್ರತಿ ವಾರ ಸಾಕಷ್ಟು ಸಿನಿಮಾಗಳು ಹಾಗು ವೆಬ್ ಸೀರಿಸ್ಗಳು ಬಿಡುಗಡೆ ಆಗುತ್ತವೆ ನಿಜ. ಆದರೆ, ಕನ್ನಡ ಭಾಷೆಯ ಸಿನಿಮಾಗಳು ಒಟಿಟಿಗೆ ಬರೋದು ತುಂಬಾನೇ ಕಡಿಮೆ. ಈ ವಾರ ಕನ್ನಡದ್ದೇ ಸಿನಿಮಾ ರಿಲೀಸ್ ಆಗಿದೆ. ಅದು ಬೇರೆ ಯಾವುದೂ ಅಲ್ಲ ಯುವ ರಾಜ್ಕುಮಾರ್ ನಟನೆಯ ‘ಎಕ್ಕ’.
‘ಎಕ್ಕ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಿದ್ದು ಜುಲೈ 18ರಂದು. ಈ ಸಿನಿಮಾಗೆ ಯುವ ರಾಜ್ಕುಮಾರ್ ಹೀರೋ ಆದರೆ, ಸಂಜನಾ ಆನಂದ್ ನಾಯಕಿ. ರೋಹಿತ್ ಪದಕಿ ಅವರು ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಿತು. ಈ ಸಿನಿಮಾ ಒಟಿಟಿಗೆ ಇನ್ನೂ ಕಾಲಿಟ್ಟಿರಲಿಲ್ಲ. ಈಗ ಸಿನಿಮಾ ರಿಲೀಸ್ ಆದ ಸುಮಾರು ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂದಿದೆ.
Power moves. Raw rage.Relive Mutthu’s wildest rides.
Catch the blockbuster hit #Ekka streaming on Sun NXT, Nov 13 onwards!@PRK_Productions @JayannaFilms @KRG_Studios #RohitPadaki @yuva_rajkumar @itssanjanaanand #Sampaada @Ashwini_PRK #Jayanna #Bhogendra @Karthik1423 @yogigraj… pic.twitter.com/5Ni0ZUYAIg
— SUN NXT (@sunnxt) November 11, 2025
‘ಎಕ್ಕ’ ಸಿನಿಮಾ ಸನ್ NXT ಒಟಿಟಿ ಮೂಲಕ ಪ್ರಸಾರ ಆರಂಭಿಸಿದೆ. ಸಾಮಾನ್ಯವಾಗಿ ಜೀ5, ಅಮೇಜಾನ್ ಪ್ರೈಮ್ ವಿಡಿಯೋ ಸಬ್ಸ್ಕ್ರಿಪ್ಶನ್ ಅನೇಕರ ಬಳಿ ಇರುತ್ತವೆ. ಆದರೆ, ಸನ್ NXT ಸಬ್ಸ್ಕ್ರಿಪ್ಶನ್ ಹೊಂದಿರುವವರು ಕಡಿಮೆ. ಹೀಗಾಗಿ, ‘ಎಕ್ಕ’ ಸಿನಿಮಾನ ಈ ಒಟಿಟಿ ಮೂಲಕ ಪ್ರಸಾರ ಮಾಡಿದ್ದು ಅನೇಕರಿಗೆ ಬೇಸರ ಇದೆ. ಈ ಮೊದಲು ‘ಎಕ್ಕ’ ಸಿನಿಮಾ ಜೀ5 ಅಲ್ಲಿ ಬರುತ್ತದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ‘ಎಕ್ಕ’ ಸಿನಿಮಾದ ಗೆಲುವಿನಲ್ಲಿ ಅಣ್ಣಾವ್ರ ನೆನಪಿಸಿಕೊಂಡ ಯುವ ರಾಜ್ಕುಮಾರ್
‘ಎಕ್ಕ’ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್, ಜಯಣ್ಣ-ಭೋಗೇಂದ್ರ, ಕಾರ್ತಿ ಗೌಡ ಹಾಗೂ ಯೋಗಿ ರಾಜ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಥೀಮ್ ಪುನೀತ್ ಅವರ ‘ಜಾಕಿ’ ಸಿನಿಮಾಗೆ ಅನೇಕರು ಹೋಲಿಕೆ ಮಾಡಿದ್ದರು. ಈ ಚಿತ್ರದ ಮೂಲಕ ಯುವ ಸಾಕಷ್ಟು ಜನಪ್ರಿಯತೆ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




