AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love OTP Movie Review: ಪ್ರೇಮಿಗಳಿಗೂ, ಪೋಷಕರಿಗೂ ಇಷ್ಟವಾಗುವ ಸಿನಿಮಾ ಲವ್ ಒಟಿಪಿ

Love OTP Movie Review: ಪ್ರೇಮಿಗಳಿಗೂ, ಪೋಷಕರಿಗೂ ಇಷ್ಟವಾಗುವ ಸಿನಿಮಾ ಲವ್ ಒಟಿಪಿ
Love Otp Movie Review
ಲವ್ ಒಟಿಪಿ
UA
  • Time - 141 Minutes
  • Released - November 14, 2025
  • Language - Kannada
  • Genre - Comedy, Romantic
Cast - ಅನೀಶ್ ತೇಜೇಶ್ವರ್, ರಾಜೀವ್ ಕನಕಾಲ, ಸ್ವರೂಪಿಣಿ, ಜಾಹ್ನವಿಕಾ ಕಲಕೇರಿ, ತುಳಸಿ ಶಿವಮಣಿ, ಚೇತನ್ ಗಂಧರ್ವ, ನಾಟ್ಯ ರಂಗ ಮುಂತಾದವರು.
Director - ಅನೀಶ್ ತೇಜೇಶ್ವರ್
3.5
Critic's Rating
ಮದನ್​ ಕುಮಾರ್​
|

Updated on: Nov 14, 2025 | 2:38 PM

Share

ನಟ ಅನೀಶ್ ತೇಜೇಶ್ವರ್ (Anish Tejeshwar) ಅವರು ‘ಲವ್ ಒಟಿಪಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲೂ ಅವರೇ ನಟಿಸಿದ್ದಾರೆ. ಸ್ವರೂಪಿಣಿ ಮತ್ತು ಜಾಹ್ನವಿ ಕಲಕೇರಿ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ನಾಟ್ಯ ರಂಗ, ರಾಜೀವ್ ಕನಕಾಲ, ಪ್ರಮೋದಿನಿ, ಚೇತನ್ ಗಂಧರ್ವ, ತುಳಸಿ ಶಿವಮಣಿ ಮುಂತಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಎಂ. ರೆಡ್ಡಿ ನಿರ್ಮಾಣದ ಈ ಸಿನಿಮಾ ನವೆಂಬರ್ 14ರಂದು ಬಿಡುಗಡೆ ಆಗಿದೆ. ‘ಲವ್ ಒಟಿಪಿ’ (Love OTP) ಎಂಬ ಶೀರ್ಷಿಕೆಯೇ ಸೂಚಿಸುವಂತೆ ಇದು ಪಕ್ಕಾ ಲವ್ ಸ್ಟೋರಿ ಇರುವ ಸಿನಿಮಾ. ಚಿತ್ರದ ವಿಮರ್ಶೆ ಇಲ್ಲಿದೆ..

ಲವ್ ಸ್ಟೋರಿ ಸಿನಿಮಾ ಎಂದ ತಕ್ಷಣ ಇದು ಮಾಮೂಲಿ ಕಹಾನಿ ಇರುವ ಸಿನಿಮಾವಲ್ಲ. ನಟ, ನಿರ್ದೇಶಕ ಅನೀಶ್ ತೇಜೇಶ್ವರ್ ಅವರು ತುಸು ಭಿನ್ನವಾದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ‘ಲವ್ ಒಟಿಪಿ’ ಶೀರ್ಷಿಕೆಯಲ್ಲಿ ಒಟಿಪಿ ಎಂದರೆ ಓವರ್, ಟಾರ್ಚರ್, ಪ್ರೆಷರ್ ಎಂದರ್ಥ! ಪ್ರೀತಿಯಲ್ಲಿ ಬಿದ್ದ ಹೀರೋ ಎಷ್ಟೆಲ್ಲ ಕಷ್ಟಗಳನ್ನು ಅನುಭವಿಸುತ್ತಾನೆ ಎಂಬುದೇ ಈ ಸಿನಿಮಾದ ಸಾರಾಂಶ.

ಕಥಾನಾಯಕ ಅಕ್ಷಯ್ ಒಬ್ಬ ಪೊಲೀಸ್ ಅಧಿಕಾರಿಯ ಮಗ. ಅವನ ಮನೆಯಲ್ಲಿ ಲವ್ ನಿಷಿದ್ಧ. ಪ್ರತಿ ದಿನ ಮಗನ ಫೋನ್ ಚೆಕ್ ಮಾಡದೇ ಇದ್ದರೇ ಅಪ್ಪನಿಗೆ ಸಮಾಧಾನವೇ ಇಲ್ಲ. ಅಪ್ಪಿತಪ್ಪಿಯೂ ಮಗ ಲವ್​​ನಲ್ಲಿ ಬೀಳಬಾರದು ಎಂಬುದು ಅಪ್ಪನ ಕಾಳಜಿ. ಆದರೆ ಆಕಸ್ಮಿಕವಾಗಿ ಅಕ್ಷಯ್ ಇಬ್ಬರು ಹುಡುಗಿಯರನ್ನು ಏಕಕಾಲಕ್ಕೆ ಪ್ರೀತಿಸುತ್ತಾನೆ! ಈ ವಿಷಯ ಬಹಿರಂಗ ಆಗದಂತೆ ನೋಡಿಕೊಳ್ಳಲು ಸಿಕ್ಕಾಪಟ್ಟೆ ಕಷ್ಟಪಡುತ್ತಾನೆ. ಅಪ್ಪನ ಭೀತಿ ಮತ್ತು ತ್ರಿಕೋನ ಪ್ರೀತಿ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಓವರ್, ಟಾರ್ಚರ್, ಪ್ರೆಷರ್ ಎಂಬುದು ಈ ಸಿನಿಮಾದ ಶೀರ್ಷಿಕೆಯಲ್ಲಿ ಇದೆ. ಆದರೆ ಪ್ರೇಕ್ಷಕರಿಗೆ ಸಿಗುವುದು ಮಾತ್ರ ಫುಲ್ ಮಜಾ. ಕಥಾನಾಯಕನ ಕಷ್ಟಗಳನ್ನೆಲ್ಲ ಬಹಳ ಫನ್ನಿ ಆದ ರೀತಿಯಲ್ಲಿ ತೋರಿಸಲಾಗಿದೆ. ನಗುವಿಗೆ ಹೆಚ್ಚು ಒತ್ತು ನೀಡಲಾಗಿದೆ. ಅನೀಶ್ ತೇಜೇಶ್ವರ್ ಅವರ ಸ್ನೇಹಿತನ ಪಾತ್ರದಲ್ಲಿ ಹಾಸ್ಯ ಕಲಾವಿದ ನಾಟ್ಯ ರಂಗ ಅವರು ಅಭಿನಯಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ.

‘ಲವ್ ಒಟಿಪಿ’ ಸಿನಿಮಾದಲ್ಲಿ ಅಪ್ಪ-ಮಗನ ಬಾಂಧವ್ಯದ ಕಥೆ ಕೂಡ ಹೈಲೈಟ್ ಆಗಿದೆ. ತನೀಶ್ ತೇಜೇಶ್ವರ್ ಹಾಗೂ ರಾಜೀವ್ ಕನಕಾಲ ಅವರು ಈ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪೊಲೀಸ್ ಅಧಿಕಾರಿಯಾಗಿ, ಅಪ್ಪನಾಗಿ ರಾಜೀವ್ ಅವರು ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಇಡೀ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಮಹತ್ವ ಸಿಕ್ಕಿದೆ. ಅಪ್ಪ-ಮನಗ ಕಥೆಯಿಂದಾಗಿ ಫ್ಯಾಮಿಲಿ ಪ್ರೇಕ್ಷಕರು ಕೂಡ ‘ಲವ್ ಒಟಿಪಿ’ ಎಂಜಾಯ್ ಮಾಡಬಹುದು.

ಇದನ್ನೂ ಓದಿ: ಟಾಕ್ಸಿಕ್ ಸಂಬಂಧದಲ್ಲಿ ಇದ್ದೆ ಎಂದ ರಶ್ಮಿಕಾ; ಸುಳ್ಳು ಎನ್ನಲು ಸಾಕ್ಷಿ ಸಮೇತ ಬಂದ ರಕ್ಷಿತ್ ಫ್ಯಾನ್ಸ್

ಬಾಯ್​ ಫ್ರೆಂಡ್ ಮೇಲೆ ಸಿಕ್ಕಾಪಟ್ಟೆ ಅನುಮಾನ ಪಡುವ ಪ್ರೇಯಸಿಯ ಪಾತ್ರದಲ್ಲಿ ಸ್ವರೂಪಿಣಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಇನ್ನು, ಜಾಹ್ನವಿಕಾ ಕಲಕೇರಿ ನಟಿಸಿರುವ ಇನ್ನೋರ್ವ ಪ್ರೇಯಸಿಯ ಪಾತ್ರ ಕೂಡ ಗಮನ ಸೆಳೆಯುತ್ತದೆ. ಈ ಇಬ್ಬರಲ್ಲಿ ಯಾರಿಗೆ ಕ್ಲೈಮ್ಯಾಕ್ಸ್​​ನಲ್ಲಿ ಕಥನಾಯಕನ ಪ್ರೀತಿ ಸಿಗುತ್ತದೆ ಎಂಬ ಕೌತುಕ ಪ್ರೇಕ್ಷಕರಿಗೆ ಮೂಡುತ್ತದೆ. ಅದರಿಂದಾಗಿ ಕೊನೆವರೆಗೂ ನೋಡಿಸಿಕೊಂಡು ಸಾಗುವ ಗುಣ ಈ ಸಿನಿಮಾಗಿದೆ.

ಆನಂದ್ ರಾಜಾವಿಕ್ರಮ್ ಅವರ ಸಂಗೀತ ನಿರ್ದೇಶನ, ಹರ್ಷವರ್ಧನ್ ಕೆ. ಅವರ ಛಾಯಾಗ್ರಹಣದಿಂದ ಸಿನಿಮಾದ ಅಂದ ಹೆಚ್ಚಿದೆ. ಅನೀಶ್ ತೇಜೇಶ್ವರ್ ಅವರು ನಿರ್ದೇಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಬ್ಬರು ಪ್ರೇಯಸಿಯರ ನಡುವೆ ಹೀರೋ ಪೇಚಿಗೆ ಸಿಕ್ಕಿಕೊಳ್ಳುವ ಇತರೆ ಸಿನಿಮಾಗಳನ್ನು ‘ಲವ್ ಒಟಿಪಿ’ ನೆನಪಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ