‘ನೇರ ಮರವನ್ನೇ ಮೊದಲು ಕತ್ತರಿಸೋದು’; ಫಲಿತಾಂಶದ ಬಳಿಕ ನಿಗೂಢಾರ್ಥದಲ್ಲಿ ಅನುಪಮ್ ಖೇರ್ ಪೋಸ್ಟ್  

|

Updated on: Jun 05, 2024 | 12:26 PM

ಅಯೋಧ್ಯೆಯಲ್ಲಿ ಬಿಜೆಪಿ ಪಕ್ಷ ಸೋತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಮುಖ ಕಡೆಗಳಲ್ಲಿ ಸೋತಿದೆ. ಇದಾದ ಬಳಿಕ ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ‘ಪ್ರಾಮಾಣಿಕ ವ್ಯಕ್ತಿಗೆ ಯಾವಾಗಲೂ ನೋವು ಸಿಗುತ್ತದೆ’ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. 

‘ನೇರ ಮರವನ್ನೇ ಮೊದಲು ಕತ್ತರಿಸೋದು’; ಫಲಿತಾಂಶದ ಬಳಿಕ ನಿಗೂಢಾರ್ಥದಲ್ಲಿ ಅನುಪಮ್ ಖೇರ್ ಪೋಸ್ಟ್  
ಅನುಪಮ್ ಖೇರ್-ಮೋದಿ
Follow us on

ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿ ಪಾಲಿಗೆ ಶಾಕಿಂಗ್ ಎನಿಸಿದೆ. ಪ್ರಮುಖ ಕ್ಷೇತ್ರಗಳಲ್ಲಿ ಪಕ್ಷ ಸೋತಿದೆ. ಎನ್​ಡಿಎ ಬಹುಮತ ಸಾಧಿಸಿದೆಯಾದರೂ ಬಿಜೆಪಿ ಪಕ್ಷಕ್ಕೆ ಬಹುಮತ ಸಾಧಿಸಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಯೋಧ್ಯೆಯಲ್ಲಿ ಬಿಜೆಪಿ ಸೋತಿದೆ. ಈ ಫಲಿತಾಂಶದ ಬಳಿಕ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅವರು ನಿಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅನುಪಮ್ ಅವರು ಬಿಜೆಪಿ ತತ್ವಗಳನ್ನು ಒಪ್ಪಿದವರು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಹೀಗಾಗಿ ಅವರು ಹೇಳಿರೋದು ಮೋದಿ ಬಗ್ಗೆ ಎನ್ನಲಾಗುತ್ತಿದೆ.

ರಾಮ ಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಸಾಕಷ್ಟು ಆಸಕ್ತಿ ತೋರಿಸಿತ್ತು. ಅವರ ಆಡಳಿತಾವಧಿಯಲ್ಲೇ ರಾಮ ಮಂದಿರ ನಿರ್ಮಾಣ ಕೂಡ ಆಯಿತು. ಆದಾಗ್ಯೂ ಅಯೋಧ್ಯೆಯಲ್ಲಿ ಬಿಜೆಪಿ ಪಕ್ಷ ಸೋತಿದೆ. ಇದಾದ ಬಳಿಕ ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ‘ಪ್ರಾಮಾಣಿಕ ವ್ಯಕ್ತಿಗೆ ಯಾವಾಗಲೂ ನೋವು ಸಿಗುತ್ತದೆ’ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಖ್ಯಾತ ನಿರ್ಮಾಪಕರು ನನ್ನನ್ನು ಹೊರಗಿಟ್ಟಿದ್ದಾರೆ’: ಅನುಪಮ್ ಖೇರ್ ಮಾಡಿದ ತಪ್ಪೇನು?

‘ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಪ್ರಾಮಾಣಿಕನಾಗಿರಬಾರದು ಎಂದು ನಾನು ಆಗಾಗ ಯೋಚಿಸುತ್ತೇನೆ. ಯಾವಾಗಲೂ ನೇರವಾಗಿರುವ ಮರವನ್ನೇ ಮೊದಲು ಕತ್ತರಿಸುತ್ತಾರೆ. ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಾರೆ. ಎಷ್ಟೇ ಅಡೆತಡೆ ಬಂದರೂ ಅವರು ಪ್ರಾಮಾಣಿಕತೆಯನ್ನು ಬಿಟ್ಟುಕೊಡುವುದಿಲ್ಲ. ಈ ಕಾರಣದಿಂದಲೇ ಅವರು ಕೋಟಿ ಕೋಟಿ ಜನರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದಿದ್ದಾರೆ ಅನುಪಮ್ ಖೇರ್.


ಇನ್ನು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಂಗನಾ ರಣಾವತ್ ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಅನುಪಮ್ ಖೇರ್ ಅಭಿನಂದನೆ ತಿಳಿಸಿದ್ದಾರೆ. ಹೊಸ ಪ್ರಯಾಣಕ್ಕೆ ಅವರು ಶುಭ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.