‘ಖ್ಯಾತ ನಿರ್ಮಾಪಕರು ನನ್ನನ್ನು ಹೊರಗಿಟ್ಟಿದ್ದಾರೆ’: ಅನುಪಮ್ ಖೇರ್ ಮಾಡಿದ ತಪ್ಪೇನು?

ಒಂದು ಕಾಲದಲ್ಲಿ ನನ್ನ ಗೆಳೆಯರಾಗಿದ್ದವರು ಈಗ ವಿನಾ ಕಾರಣ ನನ್ನನ್ನು ಕಡೆಗಣಿಸುತ್ತಿದ್ದಾರೆ. ಸಿನಿಮಾ ಆಫರ್ ನೀಡುತ್ತಿಲ್ಲ. ಇದರಿಂದ ಬೇಸರ ಆಗುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ ಅನುಪಮ್ ಖೇರ್.

‘ಖ್ಯಾತ ನಿರ್ಮಾಪಕರು ನನ್ನನ್ನು ಹೊರಗಿಟ್ಟಿದ್ದಾರೆ’: ಅನುಪಮ್ ಖೇರ್ ಮಾಡಿದ ತಪ್ಪೇನು?
ಸಾಜಿದ್-ಅನುಪಮ್-ಕರಣ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 27, 2022 | 6:57 PM

ನಟ ಅನುಪಮ್ ಖೇರ್ (Anupam Kher) ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ಹಲವು ರೀತಿಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ವಯಸ್ಸಿಗೆ ತಕ್ಕಂತಹ ಪಾತ್ರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಬಲಪಂಥೀಯ ಆಲೋಚನೆಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿ ಆಗುವ ಅನುಪಮ್​, ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಕಂಡರು. ಆದರೆ, ಈಗ ಹಲವು ಖ್ಯಾತ ನಿರ್ಮಾಪಕರಿಂದ ಆಫರ್ ಬರುತ್ತಿಲ್ಲ ಎಂಬ ನೋವನ್ನು ಅನುಪಮ್ ಹಂಚಿಕೊಂಡಿದ್ದಾರೆ.

ಬಾಲಿವುಡ್​ನ ಖ್ಯಾತ ನಿರ್ಮಾಪಕರಾದ ಕರಣ್ ಜೋಹರ್, ಆದಿತ್ಯ ಚೋಪ್ರಾ, ಸಾಜಿದ್ ನಾಡಿಯಾದ್ವಾಲಾ ತಮಗೆ ಆಫರ್ ನೀಡುತ್ತಿಲ್ಲ ಎಂಬುದು ಅನುಪಮ್ ಆರೋಪ. ಕರಣ್-ಆದಿತ್ಯ ನಿರ್ಮಾಣದ ‘ಕುಚ್​ ಕುಚ್​ ಹೋತಾ ಹೈ’ ‘ಡಿಡಿಎಲ್​ಜೆ’, ‘ವೀರ್ ಜರಾ’ ಸಿನಿಮಾಗಳಲ್ಲಿ ಅನುಪಮ್ ನಟಿಸಿದ್ದರು. ಅವರ ಜತೆ ಅನುಪಮ್​​ಗೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಈಗ ಅವರು ದೂರ ಆಗಿದ್ದಾರಂತೆ. ಇದಕ್ಕೆ ಕಾರಣವೂ ಅನುಪಮ್​ಗೆ ತಿಳಿದಿಲ್ಲ.

‘ಇತ್ತೀಚೆಗೆ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ನಾನು ನಟಿಸುತ್ತಿಲ್ಲ. ಕರಣ್ ಜೋಹರ್, ಸಾಜಿದ್, ಆದಿತ್ಯ ಚೋಪ್ರಾ ಅಂತಹ ನಿರ್ಮಾಪಕರು ನನಗೆ ಆಫರ್ ನೀಡುತ್ತಿಲ್ಲ. ಅವರ ಜತೆ ನನಗೆ ಒಳ್ಳೆಯ ಗೆಳೆತನ ಇತ್ತು. ಎಲ್ಲರ ಸಿನಿಮಾಗಳಲ್ಲೂ ಕೆಲಸ ಮಾಡಿದ್ದೇನೆ. ಈ ನಿರ್ಮಾಪಕರ ಸಿನಿಮಾದಲ್ಲಿ ನಟಿಸಲು ನನಗೆ ಅವಕಾಶ ಸಿಗುತ್ತಿಲ್ಲ ಎಂದು ನಾನು ದೂರುತ್ತಿಲ್ಲ’ ಎಂದಿರುವ ಅವರು ‘ಇಲ್ಲಿ ಆಫರ್ ಸಿಗದ ಕಾರಣ ‘ಕನೆಕ್ಟ್’ ಹೆಸರಿನ ತಮಿಳು ಸಿನಿಮಾ ಮಾಡಿದೆ. ತೆಲುಗಿನ ‘ಟೈಗರ್ ನಾಗೇಶ್ವರ್ ರಾವ್’ ಚಿತ್ರದಲ್ಲಿ ನಟಿಸಿದೆ. ಈಗ ‘ಉಂಚಾಯಿ’ ಹೆಸರಿನ ಚಿತ್ರ ಮಾಡುತ್ತಿದ್ದೇನೆ’ ಎಂಬುದು ಅನುಪಮ್ ಮಾತು.

ಇದನ್ನೂ ಓದಿ
Image
ನಿರ್ದೇಶಕ ರಾಜಮೌಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್​’ ನಟ ಅನುಪಮ್ ಖೇರ್
Image
Emergency: ನಟ ಅನುಪಮ್​ ಖೇರ್​ಗೆ ‘ಎಮರ್ಜೆನ್ಸಿ’ ಚಿತ್ರದಲ್ಲೊಂದು ಮುಖ್ಯ ಪಾತ್ರ; ಇಲ್ಲಿದೆ ಫಸ್ಟ್​ ಲುಕ್​
Image
ವಿವಾದ ಸೃಷ್ಟಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಶಶಿ ತರೂರ್ ಟ್ವೀಟ್; ಸುನಂದಾ ಪುಷ್ಕರ್ ಹೆಸರು ಉಲ್ಲೇಖಿಸಿದ ಅನುಪಮ್ ಖೇರ್
Image
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ತಮ್ಮ ತಾಯಿ ಕಳಿಸಿಕೊಟ್ಟ ರುದ್ರಾಕ್ಷಿ ಹಾರ ನೀಡಿದ ನಟ ಅನುಪಮ್ ಖೇರ್​

‘ಒಂದು ಕಾಲದಲ್ಲಿ ನನ್ನ ಗೆಳೆಯರಾಗಿದ್ದವರು ಈಗ ವಿನಾ ಕಾರಣ ನನ್ನನ್ನು ಕಡೆಗಣಿಸುತ್ತಿದ್ದಾರೆ. ಸಿನಿಮಾ ಆಫರ್ ನೀಡುತ್ತಿಲ್ಲ. ಇದರಿಂದ ಬೇಸರ ಆಗುತ್ತದೆ. ಇದು ನನ್ನ ದೂರಲ್ಲ ಅಥವಾ ಅವರ ವಿರುದ್ಧ ಮಾಡುತ್ತಿರುವ ಆರೋಪ ಅಲ್ಲ. ಒಂದು ಬಾಗಿಲು ಮುಚ್ಚಿದರೆ ಹಲವು ಕಿಟಕಿ ಹಾಗೂ ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂಬುದನ್ನು ನಾನು ಹೇಳುತ್ತಿದ್ದೇನೆ’ ಎಂದಿದ್ದಾರೆ ಅನುಪಮ್.

ಇದನ್ನೂ ಓದಿ: ನಿರ್ದೇಶಕ ರಾಜಮೌಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್​’ ನಟ ಅನುಪಮ್ ಖೇರ್ 

ಕಂಗನಾ ರಣಾವತ್ ನಟಸಿ, ನಿರ್ದೇಶಿಸುತ್ತಿರುವ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಅವರು ಜಯ ಪ್ರಕಾಶ್ ನಾರಾಯಣ್ ಪಾತ್ರವನ್ನು ಮಾಡಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ