ವಿವಾದ ಸೃಷ್ಟಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಶಶಿ ತರೂರ್ ಟ್ವೀಟ್; ಸುನಂದಾ ಪುಷ್ಕರ್ ಹೆಸರು ಉಲ್ಲೇಖಿಸಿದ ಅನುಪಮ್ ಖೇರ್

Vivek Agnihotri | The Kashmir Files: ‘ದಿ ಕಾಶ್ಮೀರ ಫೈಲ್ಸ್’ ಚಿತ್ರದಲ್ಲಿ ಅಭಿನಯಿಸಿರುವ ನಟ ಅನುಪಮ್ ಖೇರ್ ಅವರು ತರೂರ್ ಅವರ ಟ್ವೀಟ್ ಗೆ ತೀವ್ರ ಸ್ವರೂಪದ ಆಕ್ಷೇಪಣೆ ವ್ಯಕ್ಯಪಡಿಸಿ ಅವರದ್ದು ನಿರ್ಭಾವುಕ ಮತ್ತು ನಿರ್ಲಿಪ್ತ ಧೋರಣೆ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿವಾದ ಸೃಷ್ಟಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಕುರಿತ ಶಶಿ ತರೂರ್ ಟ್ವೀಟ್; ಸುನಂದಾ ಪುಷ್ಕರ್ ಹೆಸರು ಉಲ್ಲೇಖಿಸಿದ ಅನುಪಮ್ ಖೇರ್
ಅನುಪಮ್ ಖೇರ್ ಮತ್ತು ಶಶಿ ತರೂರ್
Follow us
| Updated By: shivaprasad.hs

Updated on: May 11, 2022 | 6:37 AM

‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಕುರಿತು ಕಾಂಗ್ರೆಸ್ ಸಂಸತ್ ಸದಸ್ಯ ಶಶಿ ತರೂರ್ (Shashi Tharoor) ಮಾಡಿರುವ ಟ್ವೀಟೊಂದು ವಿವಾದ ಸೃಷ್ಟಿಸಿದ್ದು ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅದರ ಬಗ್ಗೆ ಕಿಡಿಕಾರುವ ಜೊತೆಗೆ ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ಹಿಂದೆ ಮಾಡಿದ್ದ ಟ್ವೀಟೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಶ್ವಸಂಸ್ಥೆಯ ಅಧೀನ-ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಶಶಿ ತರೂರ್ ಅವರು ಮೇ 10 ರಂದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಸಿಂಗಪೂರನಲ್ಲಿ ಬ್ಯಾನ್ ಮಾಡಲಾಗಿದೆ ಅಂತ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಜೊತೆಗೆ ಅವರು ನ್ಯೂಸ್ ಏಷ್ಯಾ ಚ್ಯಾನೆಲ್ ಒಂದು ಲಿಂಕನ್ನು ಪೋಸ್ಟ್ ಮಾಡಿದ್ದಾರೆ. ‘ಭಾರತದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಪ್ರಾಯೋಜಿತ ಸಿನಿಮಾ #KashmirFiles ಸಿಂಗಪೂರ್ ನಲ್ಲಿ ಬ್ಯಾನ್ ಮಾಡಲಾಗಿದೆ,’ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಶಶಿ ತರೂರ್ ಟ್ವೀಟ್:

ಇದನ್ನೂ ಓದಿ
Image
Ashika Ranganath: ಕ್ಯೂಟ್ ಫೋಟೋಗಳ ಮೂಲಕ ಅಭಿಮಾನಿಗಳ ಮನಗೆದ್ದ ಆಶಿಕಾ ರಂಗನಾಥ್
Image
‘ಪೋಷಕರಾಗುವ ಬಗ್ಗೆ ಯೋಚಿಸುತ್ತಿದ್ದೀರಾ?’; ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗೆ ರಣವೀರ್ ಉತ್ತರ ಏನಿತ್ತು?
Image
Alia Bhatt: ಜನಸಾಮಾನ್ಯರ ಹಾದಿ ತಪ್ಪಿಸುತ್ತಿದ್ದಾರಾ ಆಲಿಯಾ ಭಟ್? ಸಾಕ್ಷಿ ಸಮೇತ ವಿವರಿಸಿದ ನೆಟ್ಟಿಗರು

‘ದಿ ಕಾಶ್ಮೀರ ಫೈಲ್ಸ್’ ಚಿತ್ರದಲ್ಲಿ ಅಭಿನಯಿಸಿರುವ ನಟ ಅನುಪಮ್ ಖೇರ್ ಅವರು ತರೂರ್ ಅವರ ಟ್ವೀಟ್ ಗೆ ತೀವ್ರ ಸ್ವರೂಪದ ಆಕ್ಷೇಪಣೆ ವ್ಯಕ್ಯಪಡಿಸಿ ಅವರದ್ದು ನಿರ್ಭಾವುಕ ಮತ್ತು ನಿರ್ಲಿಪ್ತ ಧೋರಣೆ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಅನುಮಮ್ ತಮ್ಮ ಟ್ವೀಟ್ ನಲ್ಲಿ 2013ರಲ್ಲಿ ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ಮಾಡಿದ್ದ ಟ್ವೀಟ್ ಗಳ ಸ್ಕ್ರೀನ್ ಶಾಟ್​​ಅನ್ನು ಪೋಸ್ಟ್ ಮಾಡಿದ್ದಾರೆ.

‘ಬೇರೆ ಯಾವುದೇ ಕಾರಣಕ್ಕಲ್ಲದಿದ್ದರೂ ಮೂಲತಃ ಕಾಶ್ಮೀರಿಯಾಗಿದ್ದ ಸುನಂದಾ ಅವರಿಗೋಸ್ಕರವಾದರೂ ನೀವು ಕಾಶ್ಮೀರಿ ಪಂಡಿತರನ್ನು ಕುರಿತು ಸಂವೇದನೆಶೀಲತೆಯನ್ನು ಪ್ರದರ್ಶಿಸಬೇಕಿತ್ತು ಮತ್ತು ಯಾವುದೋ ಒಂದು ದೇಶ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಬ್ಯಾನ್ ಮಾಡಿರುವ ಬಗ್ಗೆ ಗೆಲುವು ಸಾಧಿಸಿದಂಥ ಭಾವನೆಯನ್ನು ವ್ಯಕ್ತಪಡಿಸಬಾರದಿತ್ತು,’ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

ಅಲ್ಪಸಂಖ್ಯಾತರಿಗಾಗಿ ಅದರಲ್ಲೂ ವಿಶೇಷವಾಗಿ ಗಲಭೆಗಳಲ್ಲಿ ತೊಂದರೆಗೊಳಗಾದವರಿಗೆ ಸಾಕಷ್ಟು ಸವಲತ್ತುಗಳನ್ನು ಒದಗಿಸಲಾಗಿದೆ, ಆದರೆ 1989 ರಲ್ಲಿ ಅವರ ಹಾಗೆಯೇ ಕಷ್ಟಕ್ಕೀಡಾಗಿದ್ದ ಕಾಶ್ಮೀರಿಗಳನ್ನು ಯಾಕೆ ನಿರ್ಲಕ್ಷಿಸಿಲಾಗಿದೆ, ಎಂದು ಅನುಪಮ್ ಖೇರ್ ಅವರು ಪೋಸ್ಟ್ ಮಾಡಿರುವ ಇಮೇಜ್ ಪ್ರಕಾರ ಸುನಂದಾ ಪುಷ್ಕರ್ ಅವರು ಟ್ವೀಟ್ ಮಾಡಿದ್ದರು.

ಅನುಪಮ್ ಅವರ ಟ್ವೀಟ್​ಗೆ ತರೂರ್ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರತಿಕ್ರಿಯೆ ಕೆಳಗಿನಂತಿದೆ:

-ನಾನು ಇದುವರೆಗೆ ನೋಡಿರದ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ನನ್ನ ಯಾವುದೇ ಕಾಮೆಂಟ್ ಸೇರಿಸದೆ, ಒಂದು ನೈಜ್ಯ ಸುದ್ದಿಯ ಅಂಶವನ್ನು ಇಂದು ಬೆಳಗ್ಗೆ ನಾನು ಟ್ವೀಟ್ ಮಾಡಿದ್ದೆ.

-ಕಾಶ್ಮೀರಿ ಪಂಡಿತರು ಪಟ್ಟ ನೋವು ಮತ್ತು ಯಾತನೆಯನ್ನು ನಾನು ಹತ್ತಿರದಿಂದ ಬಲ್ಲವನಾಗಿರುವುದರಿಂದ ಮತ್ತು ಕಳೆದ ಹಲವಾರು ವರ್ಷಗಳಿಂದ ಸದರಿ ವಿಷಯದ ಕಡೆ ಜನರ ಗಮನವನ್ನು ಸೆಳೆಯಲು ನಿರಂತರವಾಗಿ ಪ್ರಯತ್ನಿಸುತ್ತಿರುವುದರಿಂದ ಯಾವುದೇ ಹಂತದಲ್ಲಿ ಅವರು ಅನುಭವಿಸಿದ ಯಾತನೆಯನ್ನು ‘ಗೇಲಿ’ ಇಲ್ಲವೇ ಅವಹೇಳನ ಮಾಡುವ ಕುಹುಕುತನ ನನ್ನಿಂದಾಗಿಲ್ಲ.

-ವಿನಾಕಾರಣ ನನ್ನ ದಿವಂಗತ ಪತ್ನಿ ಸುನಂದಾ ಅವರನ್ನು ಎಳೆತಂದಿರುವುದು ಅನಪೇಕ್ಷಣೀಯ ಮತ್ತು ನಿರ್ಲಜ್ಜೆತನದ ಪ್ರತೀಕವಾಗಿದೆ. ಅಕೆಯ ಭಾವನೆಗಳನ್ನು ಎಲ್ಲರಿಗಿಂತ ಚೆನ್ನಾಗಿ ನಾನು ಬಲ್ಲೆ. ಸೊಪೋರ್ ಹತ್ತಿರದ ಬೊಮೈ ಎನ್ನುವ ಸ್ಥಳದಲ್ಲಿದ್ದ ಸುನಂದಾ ಪೂರ್ವಜರ ಪಾಳುಬಿದ್ದ ಮನೆಗೆ ಅವರ ಜೊತೆ ಹೋಗಿದ್ದೆ ಮತ್ತು ಹಿಂದೂ ಹಾಗೂ ಮುಸಲ್ಮಾನರನ್ನು ಒಳಗೊಂಡ ನೆರೆಗೊರೆಯವರು ಮತ್ತು ಸಂಬಂಧಿಕರ ಜೊತೆ ಮಾತಾಡಿದ್ದೆ. ಮತ್ತೊಂದು ವಿಷಯಯವನ್ನು ನಾನು ಬಲ್ಲೆ. ಸುನಂದಾ ಈಗ ನಮ್ಮ ನಡುವೆ ಇರದ ಕಾರಣ ಮತ್ತು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಾರರು ಅಂತ ಅಂದುಕೊಂಡು ಸುಳ್ಳುಗಳನ್ನು ಪೋಣಿಸುತ್ತಿರುವವರು ಇದನ್ನು ಅರ್ಥಮಾಡಿಕೊಳ್ಳಬೇಕು: ಅವರು ಸಂತೈಸುವಿಕೆಯಲ್ಲಿ ನಂಬಿಕೆ ಉಳ್ಳವರಾಗಿದ್ದರು, ದ್ವೇಷದಲ್ಲಿ ಅಲ್ಲ, ಎಂದು ತರೂರ್, ಅನುಪಮ್ ಖೇರ್ ಅವರ ಹೆಸರು ಉಲ್ಲೇಖಿಸದೆ ಪ್ರತಿಕ್ರಿಯಿಸಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳು ಅವ್ಯಾಹತವಾಗಿ ಜಾರಿಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರನಲ್ಲಿ ಕಾಶ್ಮೀರೀ ಪಂಡಿತರು ದೇಶದ ಬೇರೆ ಬೇರೆ ಭಾಗಗಳಿಗೆ ಗುಳೆಯೆದ್ದು ಹೋದ ಅಂಶವನ್ನು ಆಧಾರವಾಗಿಟ್ಟುಕೊಂಡು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ಮಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಈಗ ಕೇಂದ್ರಾಡಳಿತ ಪ್ರದೇಶವಾಗಿದೆ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ