ಶತಕ ಬಾರಿಸಿದ ವಿರಾಟ್ ಕೊಹ್ಲಿಗೆ ಸ್ಟೇಡಿಯಂನಿಂದ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ ಶರ್ಮಾ; ಇಲ್ಲಿದೆ ವಿಡಿಯೋ

ಅನುಷ್ಕಾ ಶರ್ಮಾ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಪತಿಗೋಸ್ಕರ ಬಿಡುವು ಮಾಡಿಕೊಂಡು ಆರ್​ಸಿಬಿ ಮ್ಯಾಚ್ ನೋಡಲು ಅವರು ಬರುತ್ತಾರೆ.

ಶತಕ ಬಾರಿಸಿದ ವಿರಾಟ್ ಕೊಹ್ಲಿಗೆ ಸ್ಟೇಡಿಯಂನಿಂದ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ ಶರ್ಮಾ; ಇಲ್ಲಿದೆ ವಿಡಿಯೋ
ವಿರಾಟ್-ಅನುಷ್ಕಾ

Updated on: May 22, 2023 | 10:43 AM

ಐಪಿಎಲ್ ಟೂರ್ನಿಯ ಆರ್​​ಸಿಬಿ Vs ಜಿಟಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಿದ್ದಾರೆ. ಕೇವಲ 62 ಬಾಲ್​ಗಳಲ್ಲಿ ಅವರು 101ರನ್ ಬಾರಿಸಿದರು. ಕೊಹ್ಲಿ ಶತಕ ಸಿಡಿಸಿದರೂ ಆರ್​ಸಿಬಿ ಗೆಲುವು ಕಾಣಲಿಲ್ಲ. ಹೀಗಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಟೂರ್ನಿಯಿಂದ ಹೊರ ನಡೆದಿದೆ. ಕೊಹ್ಲಿ (Virat Kohli) ಶತಕ ಸಿಡಿಸಿದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ (Anushka Sharma) ಅವರು ಸ್ಟೇಡಿಯಿಂನಿಂದ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನುಷ್ಕಾ-ಕೊಹ್ಲಿ ದಂಪತಿಯನ್ನು ಫ್ಯಾನ್ಸ್ ಶ್ಲಾಘಿಸಿದ್ದಾರೆ.

2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರದ ಬಳಿಕ ಅನುಷ್ಕಾ ಶರ್ಮಾ ಅವರು ಮಗುವಿನ ಆರೈಕೆಯಲ್ಲಿ ಬ್ಯುಸಿ ಆದರು. ಅವರು ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿ ಅನ್ನೋದು ಅಭಿಮಾನಿಗಳ ಕೋರಿಕೆ. ಆದರೆ, ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಪತಿಗೋಸ್ಕರ ಬಿಡುವು ಮಾಡಿಕೊಂಡು ಆರ್​ಸಿಬಿ ಮ್ಯಾಚ್ ನೋಡಲು ಅವರು ಬರುತ್ತಾರೆ.

ಇದನ್ನೂ ಓದಿ: ‘ನೀನೇ ನನ್ನ ಸರ್ವಸ್ವ’; ಮಡದಿಯ ಹುಟ್ಟು ಹಬ್ಬಕ್ಕೆ ಕಿಂಗ್ ಕೊಹ್ಲಿಯ ವಿಶೇಷ ಸಂದೇಶ

ಮೇ 21ರಂದು ನಡೆದ ಮ್ಯಾಚ್ ವೀಕ್ಷಿಸಲು ಅವರು ಬೆಂಗಳೂರಿಗೆ ಬಂದಿದ್ದರು. ಕೊಹ್ಲಿ ಅವರು ಶತಕ ಬಾರಿಸಿದ ಬಳಿಕ ಸ್ಟೇಡಿಯಂನಲ್ಲಿ ಕುಳಿತ ಅನುಷ್ಕಾ ಶರ್ಮಾ ಅವರು ಪತಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಪ್ರೀತಿ ನೋಡಿದರೆ ಖುಷಿ ಆಗುತ್ತದೆ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ