ಪಾಕಿಸ್ತಾನ, ಅಮೆರಿಕದಲ್ಲೂ ಅನುಷ್ಕಾ ಶರ್ಮಾ ಹೋಲುವ ನಟಿಯರು; ಒಬ್ಬರಿಗೆ ಇಷ್ಟ, ಮತ್ತೊಬ್ಬರಿಗೆ ಕಷ್ಟ

Updated on: May 15, 2021 | 1:31 PM

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಜನಪ್ರಿಯತೆ ವಿಶ್ವಾದ್ಯಂತ ಹಬ್ಬಿದೆ. ಅವರನ್ನೇ ಹೋಲುವ ಬೆಡಗಿಯರು ಅಮೆರಿಕಾ ಮತ್ತು ಪಾಕಿಸ್ತಾನದಲ್ಲಿದ್ದಾರೆ. ಅನುಷ್ಕಾ ಜೊತೆ ತಮ್ಮನ್ನು ಹೋಲಿಸಿಕೊಳ್ಳುವುದು ಎಲ್ಲರಿಗೂ ಇಷ್ಟ ಆಗುವುದಿಲ್ಲ ಎಂಬುದು ಕೂಡ ನಿಜ. ಪಾಕಿಸ್ತಾನಿ ನಟಿ ರಮ್ಷಾ ಖಾನ್, ಯೇಮನ್ ಸಲೀಮ್ ಹಾಗೂ ಅಮೆರಿಕದ ಸಿಂಗರ್ ಜೂಲಿಯಾ ಮೈಕೆಲ್ಸ್ ಅವರು ಈ ವಿಚಾರದಿಂದ ಆಗಾಗ ಸುದ್ದಿ ಆಗುತ್ತಾರೆ.

1 / 8
ಪಾಕಿಸ್ತಾನದ ನಟಿ ರಮ್ಷಾ ಖಾನ್ ಅವರನ್ನು ಅಲ್ಲಿನ ಅನುಷ್ಕಾ ಶರ್ಮಾ ಎಂದು ಕೆಲವರು ಗುರುತಿಸುತ್ತಾರೆ. ಇಬ್ಬರ ಲುಕ್​ನಲ್ಲಿ ಸಾಮ್ಯತೆ ಇದೆ ಎಂಬುದು ಅನೇಕರ ಅಭಿಪ್ರಾಯ. ಈ ಬಗ್ಗೆ ರಮ್ಷಾ ಕೂಡ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ನಟಿ ರಮ್ಷಾ ಖಾನ್ ಅವರನ್ನು ಅಲ್ಲಿನ ಅನುಷ್ಕಾ ಶರ್ಮಾ ಎಂದು ಕೆಲವರು ಗುರುತಿಸುತ್ತಾರೆ. ಇಬ್ಬರ ಲುಕ್​ನಲ್ಲಿ ಸಾಮ್ಯತೆ ಇದೆ ಎಂಬುದು ಅನೇಕರ ಅಭಿಪ್ರಾಯ. ಈ ಬಗ್ಗೆ ರಮ್ಷಾ ಕೂಡ ಪ್ರತಿಕ್ರಿಯಿಸಿದ್ದಾರೆ.

2 / 8

ಅನುಷ್ಕಾ ಶರ್ಮಾ ಜೊತೆ ಹೋಲಿಸಿಕೊಳ್ಳುವುದು ನಟಿ ರಮ್ಷಾ ಖಾನ್ ಅವರಿಗೆ ಕಿಂಚಿತ್ತೂ ಇಷ್ಟ ಇಲ್ಲ. ಆ ಹೋಲಿಕೆಯನ್ನು ಅವರು ಒಪ್ಪುವುದೂ ಇಲ್ಲ. ತಮಗೆ ತಮ್ಮದೇ ಆದಂತಹ ವ್ಯಕ್ತಿತ್ವ ಇದೆ ಎಂದು ಅವರು ಹೇಳುತ್ತಾರೆ.

3 / 8

ಪಾಕಿಸ್ತಾನಿ ಕಿರುತೆರೆಯಲ್ಲಿ ಫೇಮಸ್ ಆಗಿರುವ ನಟಿ ಯೇಮನ್ ಸಲೀಮ್ ಕೂಡ ಅನುಷ್ಕಾ ಶರ್ಮಾ ರೀತಿ ಇದ್ದಾರೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ಕೇಳಿಬರುತ್ತದೆ. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ನಡೆಯುತ್ತದೆ.

4 / 8

ಯೇಮನ್ ಸಲೀಮ್ ಅವರು ಅನುಷ್ಕಾ ಶರ್ಮಾ ರೀತಿ ಇದ್ದಾರೆ ಎಂಬುದನ್ನು ಕೆಲವರು ಒಪ್ಪುತ್ತಾರೆ. ಮತ್ತೆ ಕೆಲವರು ಈ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಆ ಬಗ್ಗೆ ಅನುಷ್ಕಾ ಏನೂ ಹೇಳಿಲ್ಲ.

5 / 8

ಚುಪ್ಕೆ ಚುಪ್ಕೆ ಸೀರಿಯಲ್ ಮೂಲಕ ಯೇಮನ್ ಸಲೀಮ್ ಅವರು ಪಾಕಿಸ್ತಾನದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ. ಭಾರತದಲ್ಲೂ ಈ ಸೀರಿಯಲ್ಗೆ ಪ್ರೇಕ್ಷಕರು ಇದ್ದಾರೆ. ಹಾಗಾಗಿ ಭಾರತದಲ್ಲೂ ಯೇಮನ್ ಸಲೀಮ್ ಅಭಿಮಾನಿಗಳನ್ನು ಹೊಂದಿದ್ದಾರೆ.

6 / 8

ಅಮೆರಿಕದ ಜನಪ್ರಿಯ ಸಿಂಗರ್, ಗೀತಸಾಹಿತಿ ಜೂಲಿಯಾ ಮೈಕೆಲ್ಸ್ ಕೂಡ ಅನುಷ್ಕಾ ಶರ್ಮಾ ರೀತಿಯೇ ಇದ್ದಾರೆ. ತಮ್ಮಿಬ್ಬರನ್ನು ಜನರು ಹೋಲಿಕೆ ಮಾಡುತ್ತಾರೆ ಎಂಬ ಬಗ್ಗೆ ಈ ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ.

7 / 8

ಅನುಷ್ಕಾ ಮತ್ತು ಜೂಲಿಯಾ ಅವರು ಫೋಟೋಗಳನ್ನು ಒಟ್ಟಿಗೆ ಇಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು. ಆಗ ಅದು ಎಲ್ಲರ ಗಮನ ಸೆಳೆದಿತ್ತು. ಹಾಯ್ ಅನುಷ್ಕಾ, ನಾವಿಬ್ಬರೂ ಅವಳಿ ಸಹೋದರಿಯರು ಇರಬಹುದು ಎಂದು ಜೂಲಿಯಾ ಟ್ವೀಟ್ ಮಾಡಿದ್ದರು.

8 / 8

ಜೂಲಿಯಾ ಮಾತಿಗೆ ಪ್ರತಿಕ್ರಿಯಿಸಿದ್ದ ಅನುಷ್ಕಾ ಶರ್ಮಾ ಅವರು ಅಚ್ಚರಿ ವ್ಯಕ್ತಪಡಿಸಿದ್ದರು. ತಮ್ಮನ್ನು ಅನುಷ್ಕಾಗೆ ಹೋಲಿಸಲಾಗುತ್ತಿದೆ ಎಂಬುದರ ಬಗ್ಗೆ ಜೂಲಿಯಾ ಮೈಕೆಲ್ಸ್ ಯಾವತ್ತೂ ಬೇಸರಪಟ್ಟುಕೊಂಡಿಲ್ಲ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us