‘ಎಆರ್​ ರೆಹಮಾನ್ ಮೇಲಿರುವ ಅಭಿಮಾನ ಸತ್ತು ಹೋಯಿತು’; ಫ್ಯಾನ್ಸ್ ಬೇಸರಕ್ಕೆ ಕಾರಣ ಏನು?

ಎಆರ್​ ರೆಹಮಾನ್ ಹಾಗೂ ಅವರ ತಂಡದವರಿಂದ ಭಾನುವಾರ ವಿಶೇಷ ಕಾರ್ಯಕ್ರಮ ಇತ್ತು. ಆದರೆ, ಇದನ್ನು ಸರಿಯಾಗಿ ಮ್ಯಾನೇಜ್ ಮಾಡಲಿಲ್ಲ. ದುಡ್ಡಿನ ಆಸೆಗಾಗಿ ಹೆಚ್ಚಿನ ಟಿಕೆಟ್​ ಮಾರಾಟ ಮಾಡಲಾಗಿತ್ತು. ಟಿಕೆಟ್ ಪಡೆದ ಬಹುತೇಕರು ಆಗಮಿಸಿದ್ದರು. ಹೀಗಾಗಿ, ಒಳಗೆ ಜಾಗವೇ ಇಲ್ಲದಂತೆ ಆಗಿತ್ತು.

‘ಎಆರ್​ ರೆಹಮಾನ್ ಮೇಲಿರುವ ಅಭಿಮಾನ ಸತ್ತು ಹೋಯಿತು’; ಫ್ಯಾನ್ಸ್ ಬೇಸರಕ್ಕೆ ಕಾರಣ ಏನು?
ರೆಹಮಾನ್

Updated on: Sep 11, 2023 | 11:32 AM

ಸಂಗೀತ ಸಂಯೋಜಕ ಎಆರ್​​ ರೆಹಮಾನ್ (AR Rahman) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಒಮ್ಮೆ ನೋಡಿದರೆ ಸಾಕು ಎಂದು ಕನಸು ಕಂಡವರು ಅನೇಕರು. ಈ ಕನಸನ್ನು ನನಸು ಮಾಡಿಕೊಳ್ಳಲು ಅನೇಕರು ಚೆನ್ನೈನ ಮರಕ್ಕುಮಾ ನೆಂಜಮ್​ನಲ್ಲಿ ಆಯೋಜನೆಗೊಂಡಿದ್ದ ರೆಹಮಾನ್ ಅವರ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಅನೇಕರಿಗೆ ಬೇಸರ ಆಗುವಂಥ ಘಟನೆಯೊಂದು ನಡೆದಿದೆ. ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಡಲೇ ಇಲ್ಲ. ಈ ಬಗ್ಗೆ ಅನೇಕರು ಟ್ವಿಟರ್​ನಲ್ಲಿ ಬೇಸರ ಹೊರಹಾಕಿದ್ದಾರೆ.

ಎಆರ್​ ರೆಹಮಾನ್ ಹಾಗೂ ಅವರ ತಂಡದವರಿಂದ ಭಾನುವಾರ ವಿಶೇಷ ಕಾರ್ಯಕ್ರಮ ಇತ್ತು. ಆದರೆ, ಇದನ್ನು ಸರಿಯಾಗಿ ಮ್ಯಾನೇಜ್ ಮಾಡಲಿಲ್ಲ. ದುಡ್ಡಿನ ಆಸೆಗಾಗಿ ಹೆಚ್ಚಿನ ಟಿಕೆಟ್​ ಮಾರಾಟ ಮಾಡಲಾಗಿತ್ತು. ಟಿಕೆಟ್ ಪಡೆದ ಬಹುತೇಕರು ಆಗಮಿಸಿದ್ದರು. ಹೀಗಾಗಿ, ಒಳಗೆ ಜಾಗವೇ ಇಲ್ಲದಂತೆ ಆಗಿತ್ತು. ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಡಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘2000 ಸಾವಿರ ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿದ್ದೇವೆ. ಆದರೆ, ಒಳಗೆ ಬಿಡಲೇ ಇಲ್ಲ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ‘ಅತ್ಯಂತ ಕೆಟ್ಟದಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹಣ, ಶಕ್ತಿ ಎಲ್ಲವೂ ವ್ಯರ್ಥವಾಗಿದೆ’ ಎಂದು ವ್ಯಕ್ತಿಯೋರ್ವ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ ₹ 6.75 ಲಕ್ಷಕ್ಕೆ ಹರಾಜಾದ ಎಆರ್​ ರೆಹಮಾನ್ ದಿರಿಸು; ಹಣ ಯಾವುದಕ್ಕೆ ಬಳಕೆಯಾಗಲಿದೆ ಗೊತ್ತಾ?

‘ರೆಹಮಾನ್ ನೀಡಿದ ಅತ್ಯಂತ ಕೆಟ್ಟ ಕಾರ್ಯಕ್ರಮ. ಮಾನವೀಯತೆಯನ್ನು ಗೌರವಿಸಿ. 30 ವರ್ಷಗಳಿಂದ ರೆಹಮಾನ್ ಮೇಲಿರುವ ನನ್ನ ಅಭಿಮಾನ ಇಂದು ಸತ್ತು ಹೋಯಿತು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಈ ಬಗ್ಗೆ ಆಯೋಜಕರು ಹಾಗೂ ಎಆರ್​ ರೆಹಮಾನ್ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us