ಮುಂದಾಗುವುದನ್ನು ಅರ್ಥೈಸಿಕೊಂಡು ಬೇರೆ ಆದ ಮಲೈಕಾ ಅರೋರಾ-ಅರ್ಜುನ್ ಕಪೂರ್?

|

Updated on: May 31, 2024 | 2:21 PM

ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್​ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಆದರೆ, ಈ ಜೋಡಿ ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಇವರು ಬೇರೆ ಆಗುವ ನಿರ್ಧಾರಕ್ಕೆ ತೆಗೆದುಕೊಂಡಿದ್ದಾರೆ. ಭವಿಷ್ಯದ ಒಳಿತಿಗೆ ಇವರು ಈ ಬೇರೆ ಆಗಲು ನಿರ್ಧರಿಸಿದ್ದಾರೆ.

ಮುಂದಾಗುವುದನ್ನು ಅರ್ಥೈಸಿಕೊಂಡು ಬೇರೆ ಆದ ಮಲೈಕಾ ಅರೋರಾ-ಅರ್ಜುನ್ ಕಪೂರ್?
ಮಲೈಕಾ-ಅರ್ಜುನ್
Follow us on

ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ ಬೇರೆ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್  ಅಂಗಳದಿಂದ ಕೇಳಿ ಬಂದಿದೆ. ಮುಂದೇನಾಗಬಹುದು ಎಂಬುದನ್ನು ಅರ್ಥೈಸಿಕೊಂಡು ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿ ಆಗಿದೆ. ಇದು ದೊಡ್ಡ ಸುದ್ದಿ ಆಗಬಾರದು ಎನ್ನುವುದು ಇವರ ಆಶಯ. ಈ ಕಾರಣಕ್ಕೆ ಮಲೈಕಾ ಹಾಗೂ ಅರ್ಜುನ್ ಕಪೂರ್ ಈ ವಿಚಾರದಲ್ಲಿ ಸುಮ್ಮನಿದ್ದಾರೆ.

ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್​ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಸಣ್ಣವರು. ಈ ವಿಚಾರವನ್ನು ಇಟ್ಟುಕೊಂಡು ಅನೇಕರು ಟೀಕೆ ಮಾಡಿದ್ದು ಇದೆ. ಆದರೆ, ಈ ಜೋಡಿ ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗ ಇವರು ಬೇರೆ ಆಗುವ ನಿರ್ಧಾರಕ್ಕೆ ತೆಗೆದುಕೊಂಡಿದ್ದಾರೆ. ಭವಿಷ್ಯದ ಒಳಿತಿಗೆ ಇವರು ಈ ಬೇರೆ ಆಗಲು ನಿರ್ಧರಿಸಿದ್ದಾರೆ.

ಅರ್ಜುನ್ ಕಪೂರ್​ಗೆ ಇನ್ನೂ ವಿವಾಹ ಆಗಿಲ್ಲ. ಅವರು ಮದುವೆ ಆಗಿ ಮಗುವನ್ನು ಪಡೆಯಬೇಕು ಎನ್ನುವ ಕನಸು ಕಂಡಿದ್ದಾರೆ. ಮಲೈಕಾ ವಯಸ್ಸಿಗೆ ಅದು ಸಾಧ್ಯವಿಲ್ಲ. ಮಲೈಕಾಗೆ 22 ವರ್ಷದ ಮಗನಿದ್ದಾನೆ. ಒಂದೊಮ್ಮೆ ಈ ವಯಸ್ಸಿನಲ್ಲಿ ಅವರು ಮಗು ಪಡೆದರೆ ಸಾಕಷ್ಟು ಟ್ರೋಲ್ ಆಗಬೇಕಾಗುತ್ತದೆ. ಹೀಗಾಗಿ, ಸೈಲೆಂಟ್ ಆಗಿ ಇವರು ಬೇರೆ ಆಗೋ ನಿರ್ಧಾರ ತೆಗೆದುಕೊಂಡರು.

ಇತ್ತೀಚೆಗೆ ಮಲೈಕಾ ಹಾಗೂ ಅರ್ಜುನ್ ಕಪೂರ್​ಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಆದರೆ, ಈ ಬಗ್ಗೆ ಈ ಜೋಡಿ ಮೌನ ವಹಿಸಿದ್ದರು. ಅವರಿಗೆ ಈ ಮೊದಲೂ ಮದುವೆ ಆಗುವ ಆಲೋಚನೆ ಇರಲಿಲ್ಲ ಎನ್ನಲಾಗಿದೆ. ಈಗ ಇಬ್ಬರೂ ಬೇರೆ ಆಗಿದ್ದಾರೆ.

ಇದನ್ನೂ ಓದಿ: ಮಗನಿಗೆ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ ಮಲೈಕಾ ಅರೋರಾ; ಶಾಕ್ ಆದ ಅರ್ಹಾನ್

ಇಬ್ಬರ ಮಧ್ಯೆ ಈಗಲೂ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಇದನ್ನು ಇವರು ಮುರಿದುಕೊಳ್ಳುತ್ತಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಮುಂದೆಯೂ ವೇದಿಕೆಗಳ ಮೇಲೆ ಸಿಕ್ಕರೆ ಪರಸ್ಪರ ನಗುನಗುತ್ತಾ ಮಾತನಾಡುವ ನಿರ್ಧಾರವನ್ನು ಇವರು ತೆಗೆದುಕೊಂಡಿದ್ದಾರೆ. ಸಂಬಂಧಗಳು ಡೇಟ್​ಬಾರ್ ಆದಾಗ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳೋದು ಅಪರೂಪ. ಇತ್ತೀಚೆಗೆ ಮಲೈಕಾ ಹಾಗೂ ಅರ್ಜುನ್ ಅಷ್ಟಾಗಿ ಒಟ್ಟಾಗಿ ಕಾಣಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.