AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಲಯ್ಯಗೆ ಧನ್ಯವಾದ’; ವಿವಾದದ ಬಳಿಕ ತೇಪೆ ಹಚ್ಚುವ ಕೆಲಸ ಮಾಡಿದ ನಟಿ ಅಂಜಲಿ

ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಡೆದಿದೆ. ಇದರಲ್ಲಿ ಬಾಲಯ್ಯ ಮದ್ಯ ಸೇವನೆ ಮಾಡಿದ್ದರು ಎನ್ನುವ ಆರೋಪ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅವರ ಎದುರು ಮದ್ಯ ತುಂಬಿದೆ ಎನ್ನಲಾದ ಬಾಟಲಿ ಇತ್ತು. ಈ ಬಗ್ಗೆ ತಂಡ ಸ್ಪಷ್ಟನೆ ನೀಡಿತ್ತು. ಈಗ ಅಂಜಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಬಾಲಯ್ಯಗೆ ಧನ್ಯವಾದ’; ವಿವಾದದ ಬಳಿಕ ತೇಪೆ ಹಚ್ಚುವ ಕೆಲಸ ಮಾಡಿದ ನಟಿ ಅಂಜಲಿ
‘ಬಾಲಯ್ಯಗೆ ಧನ್ಯವಾದ’; ವಿವಾದದ ಬಳಿಕ ತೇಪೆ ಹಚ್ಚುವ ಕೆಲಸ ಮಾಡಿದ ನಟಿ ಅಂಜಲಿ
ರಾಜೇಶ್ ದುಗ್ಗುಮನೆ
|

Updated on: May 31, 2024 | 11:51 AM

Share

‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ (Gangs Of Godavari) ಈವೆಂಟ್​ನಲ್ಲಿ ತೆಲುಗು ನಟಿ ಅಂಜಲಿ ಅವರನ್ನು ಎಲ್ಲರ ಎದುರೇ ತಳ್ಳುವ ಮೂಲಕ ಬಾಲಯ್ಯ ಸುದ್ದಿ ಆದರು. ಅವರನ್ನು ಅನೇಕರು ಟೀಕೆ ಮಾಡುತ್ತಿದ್ದಾರೆ. ಈಗ ಅಂಜಲಿ ಅವರು ಈ ಘಟನೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಲ್ಲದೆ, ಬಾಲಯ್ಯಗೆ ಧನ್ಯವಾದ ಹೇಳಿದ್ದಾರೆ. ಅನೇಕರು ಇದನ್ನು ‘ತೇಪೆ ಹಚ್ಚುವ ಕೆಲಸ’ ಎಂದು ಕರೆದಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಡೆದಿದೆ. ಇದರಲ್ಲಿ ಬಾಲಯ್ಯ ಮದ್ಯ ಸೇವನೆ ಮಾಡಿದ್ದರು ಎನ್ನುವ ಆರೋಪ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅವರ ಎದುರು ಮದ್ಯ ತುಂಬಿದೆ ಎನ್ನಲಾದ ಬಾಟಲಿ ಇತ್ತು. ಈ ಬಗ್ಗೆ ತಂಡ ಸ್ಪಷ್ಟನೆ ನೀಡಿತ್ತು. ‘ಅಸಲಿಗೆ ಅಲ್ಲಿ ಬಾಟಲಿ ಇರಲೇ ಇಲ್ಲ. ಗ್ರಾಫಿಕ್ಸ್ ಮಾಡಿದ ಬಾಟಲಿ ಇಡಲಾಗಿದೆ’ ಎಂದು ತಂಡ ಹೇಳಿಕೊಂಡಿತ್ತು. ಈಗ ಅಂಜಲಿ ಅವರು ಡ್ಯಾಮೇಜ್ ಕಂಟ್ರೋಲ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

‘ನಮ್ಮ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಪ್ರೀ ರಿಲೀಸ್ ಈವೆಂಟ್​ಗೆ ಬಂದು ಬೆಂಬಲ ನೀಡಿದ್ದಕ್ಕೆ ಬಾಲಕೃಷ್ಣ ಅವರಿಗೆ ಧನ್ಯವಾದ. ನಮ್ಮಿಬ್ಬರ ಮಧ್ಯೆ ಪರಸ್ಪರ ಗೌರವ ಇದೆ. ನಮ್ಮ ನಡುವೆ ಬಹಳ ವರ್ಷಗಳಿಂದ ಒಳ್ಳೆಯ ಗೆಳೆತನ ಇದೆ. ನಿಮ್ಮ ಜೊತೆ ಮತ್ತೊಮ್ಮೆ ವೇದಿಕೆ ಹಂಚಿಕೊಳ್ಳಲು ಖುಷಿ ಇದೆ’ ಎಂದಿದ್ದಾರೆ ಅಂಜಲಿ.

‘ಈಗ ವಿಳಂಬ ಆಯಿತು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಡ್ಯಾಮೇಜ್ ಕಂಟ್ರೋಲ್ ಮಾಡಲು ತಡವಾಗಿ ಬಂದಿರಲ್ಲ’ ಎಂದು ಕೆಲವರು ಹೇಳಿದ್ದಾರೆ. ‘ಯಾರೇ ತಳ್ಳಿದರೂ ವೇದಿಕೆಯ ಮೇಲೆ ಆ ರೀತಿ ನಗುವವರನ್ನು ನಾನು ನೋಡಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಂಜಲಿ ಟ್ವೀಟ್ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ಅಂಜಲಿ, ನೇಹಾ ಕೊಲೆ ಪ್ರಕರಣ; ಸಿಐಡಿ ವಿಚಾರಣೆ ಬಳಿಕ ನಿರಂಜನ​​ ಹೇಳಿದ್ದಿಷ್ಟು

ಈ ಘಟನೆ ಬಗ್ಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದಲ್ಲಿರುವ ವಿಶ್ವಕ್ ಸೇನ್ ಇತ್ತೀಚೆಗೆ ಮಾತನಾಡಿದ್ದರು. ‘ಅವರು ಒಳ್ಳೆಯ ವ್ಯಕ್ತಿ. ಅವರು ಜಾಲಿ ಅಗಿರುತ್ತಾರೆ. ಯಾವುದನ್ನು ಗಂಭೀರವಾಗಿ ಸ್ವೀಕರಿಸಿಬೇಕು, ಯಾವುದನ್ನು ಗಂಭೀರವಾಗಿ ಸ್ವೀಕರಿಸಬಾರದು ಎಂಬುದು ನಮಗೆ ಗೊತ್ತಿರಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು