ಮಗನಿಗೆ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ ಮಲೈಕಾ ಅರೋರಾ; ಶಾಕ್ ಆದ ಅರ್ಹಾನ್
ಮಲೈಕಾ ಅರೋರಾ ಕಾರ್ಯಕ್ರಮ ಒಂದನ್ನು ನಡೆಸಿಕೊಟ್ಟಿದ್ದಾರೆ. ಇದರಲ್ಲಿ ಮಲೈಕಾ ಜೊತೆ ಅರ್ಹಾನ್ ಕೂಡ ಇದ್ದರು. ಮಲೈಕಾ ಅವರು ಮಗನಿಗೆ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅರ್ಹಾನ್ ಕೂಡ ಈ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ. ಅವರು ಮರು ಪ್ರಶ್ನೆ ಹಾಕಿದ್ದಾರೆ. ‘ನೀವು ಮದುವೆ ಆಗೋದು ಯಾವಾಗ’ ಎಂದು ತಾಯಿಯನ್ನು ಕೇಳಿದ್ದಾರೆ.
ಸೆಲೆಬ್ರಿಟಿಗಳು ಹಲವು ವಿಚಾರಗಳ ಬಗ್ಗೆ ಓಪನ್ ಆಗಿ ಮಾತನಾಡುತ್ತಾರೆ. ತಮ್ಮ ಮಕ್ಕಳಿಗೂ ಅದನ್ನೇ ಕಲಿಸುತ್ತಾರೆ. ಕೆಲವೊಮ್ಮೆ ಹಲವು ವಿಚಾರಗಳಲ್ಲಿ ಅವರು ಮುಚ್ಚುಮರೆ ಇಲ್ಲದೆ ಮಾತನಾಡಿ ಟೀಕೆಗೆ ಒಳಗಾಗಿದ್ದು ಇದೆ. ಈಗ ನಟಿ ಮಲೈಕಾ ಅರೋರಾ ಅವರು ಮಗ ಅರ್ಹಾನ್ಗೆ (Arhan Khan) ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಮಲೈಕಾ ಅವರನ್ನು ಟೀಕೆ ಮಾಡಿದ್ದಾರೆ.
ಮಲೈಕಾ ಅವರು ಕಾರ್ಯಕ್ರಮ ಒಂದನ್ನು ನಡೆಸಿಕೊಡುತ್ತಿದ್ದಾರೆ. ಇದಕ್ಕೆ ‘ಡಂಬ್ ಬಿರ್ಯಾನಿ’ ಎಂದು ಟೈಟಲ್ ಇಡಲಾಗಿದೆ. ಇದರಲ್ಲಿ ಮಲೈಕಾ ಜೊತೆ ಅರ್ಹಾನ್ ಹಾಗೂ ಮತ್ತೋರ್ವ ಹೋಸ್ಟ್ ದೇವ್ ರಿಯಾನಿ ಕೂಡ ಇದ್ದರು. ಮಲೈಕಾ ಅವರು ಮಗನಿಗೆ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸುವುದಕ್ಕೂ ಮೊದಲು ಅವರು ತಾಯಿಗೆ ಮರು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ: ಎರಡನೇ ಮದುವೆ ಆದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್; ಹಾರೈಸಿದ ಮಲೈಕಾ ಪುತ್ರ
‘ನೀನು ನಿನ್ನ ವರ್ಜನಿಟಿ ಕಳೆದುಕೊಂಡಿದ್ದು ಯಾವಾಗ’ ಎಂದು ಮಲೈಕಾ ಅವರು ಅರ್ಹಾನ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ‘ವೋವ್’ ಎಂದು ಹೇಳಿ ಅರ್ಹಾನ್ ನಕ್ಕಿದ್ದಾರಷ್ಟೇ. ಇದಕ್ಕೆ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಸದ್ಯ ಟೀಸರ್ನಲ್ಲಿ ಇದಿಷ್ಟೇ ವಿಚಾರ ತೋರಿಸಲಾಗಿದೆ. ಸಂಪೂರ್ಣ ವಿಡಿಯೋ ರಿಲೀಸ್ ಆದ ಬಳಿಕ ಅವರ ಉತ್ತರ ಏನು ಎಂಬುದು ತಿಳಿಯಲಿದೆ.
View this post on Instagram
ಅರ್ಹಾನ್ ಕೂಡ ಈ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ. ಅವರು ಮರು ಪ್ರಶ್ನೆ ಹಾಕಿದ್ದಾರೆ. ‘ನೀವು ಮದುವೆ ಆಗೋದು ಯಾವಾಗ’ ಎಂದು ತಾಯಿಯನ್ನು ಕೇಳಿದ್ದಾರೆ. ಇದಕ್ಕೆ ನಕ್ಕಿದ್ದಾರೆ ಮಲೈಕಾ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮಲೈಕಾ ಹಾಗೂ ಅರ್ಜುನ್ ಕಪೂರ್ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಮಲೈಕಾ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಮಲೈಕಾ ಅವರ ಫಿಟ್ನೆಸ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಮಲೈಕಾ ಹಾಗೂ ಅರ್ಬಾಜ್ ಖಾನ್ ಒಟ್ಟಿಗೆ ಸಂಸಾರ ನಡೆಸುವಾಗ ಅರ್ಹಾನ್ ಜನಿಸಿದ್ದ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ