ಬಾಡಿಗೆ ಮನೆಯಲ್ಲಿದ್ದಾಗ ಹೇಗಿತ್ತು ಶಾರುಖ್ ಜೀವನ? ಈಗ 6 ಸಾವಿರ ಕೋಟಿ ರೂಪಾಯಿ ಒಡೆಯ
ಶಾರುಖ್ ಖಾನ್ ಅವರು ದೆಹಲಿ ಮೂಲದವರು. ನಟನೆಗಾಗಿ 90ರ ದಶಕದಲ್ಲಿ ಮುಂಬೈಗೆ ಬಂದರು. ಹೊರಗಿನವರಾದರೂ ಚಿತ್ರರಂಗದಲ್ಲಿ ನೆಲೆ ಕಂಡರು. ಈಗ ಅವರು ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನೋದು ವಿಶೇಷ.
ಶಾರುಖ್ ಖಾನ್ (Shah Rukh Khan) ಅವರು ಸದ್ಯ ಐಪಿಲ್ನಲ್ಲಿ ಬ್ಯುಸಿ ಇದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ವೀಕ್ಷಣೆಗೆ ಅವರು ಸ್ಟೇಡಿಯಂಗೆ ಆಗಮಿಸುತ್ತಾರೆ. ಶಾರುಖ್ ಖಾನ್ ಅವರ ಆಸ್ತಿ 6300 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಓರ್ವ ಒಳ್ಳೆಯ ಉದ್ಯಮಿ ಕೂಡ ಹೌದು. ಅವರು ಜೀರೋದಿಂದ ಬದುಕು ಆರಂಭಿಸಿದವರು. ಈಗ ವಿಶ್ವದ ಶ್ರೀಮಂತ ನಟರಲ್ಲಿ ಅವರಿಗೂ ಸ್ಥಾನ ಸಿಕ್ಕಿದೆ. ಅವರು ಪತ್ನಿ ಜೊತೆ ಮೊದಲು ಬಾಡಿಗೆ ಮನೆಯಲ್ಲಿ ಇದ್ದರು. ಈ ಘಟನೆಯನ್ನು ಚಂಕಿ ಪಾಂಡೆ ಅವರು ನೆನಪಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಅವರು ದೆಹಲಿ ಮೂಲದವರು. 90ರ ದಶಕದಲ್ಲಿ ನಟನೆಗಾಗಿ ಮುಂಬೈಗೆ ಬಂದರು. ಹೊರಗಿನವರಾದರೂ ಚಿತ್ರರಂಗದಲ್ಲಿ ನೆಲೆ ಕಂಡರು. ಈಗ ಅವರು ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಚಂಕಿ ಅವರು ಶಾರುಖ್ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.
‘ಶಾರುಖ್ ಖಾನ್ ಬಾಂಬೆಗೆ ಮೊದಲು ಬಂದಾಗ ಅವರಿಗೆ ಫ್ರೆಂಡ್ ಆದವರು ನನ್ನ ಸಹೋದರ ಚಿಕ್ಕಿ ಪಾಂಡೆ. ಅವರು ಈಗಲೂ ಬೆಸ್ಟ್ ಫ್ರೆಂಡ್ಸ್. ಶಾರುಖ್ ಹಾಗೂ ಗೌರಿ ಆಗ ಬಾಡಿಗೆ ಮನೆಯಲ್ಲಿದ್ದರು. ಆಗ ಅವರು ನನ್ನ ಸಹೋದರನ ಭೇಟಿ ಮಾಡಲು ಬರುತ್ತಿದ್ದರು. ಅವರು ಒಟ್ಟಿಗೆ ಕುಳಿತು ಸಿನಿಮಾ ನೋಡುತ್ತಿದ್ದರು. ಹೀಗಾಗಿ, ಶಾರುಖ್ ಹಾಗೂ ಗೌರಿ ಆಗಾಗ ನಮ್ಮನೆಗೆ ಬರುತ್ತಲೇ ಇರುತ್ತಿದ್ದರು’ ಎಂದಿದ್ದಾರೆ ಚಂಕಿ.
ಶಾರುಖ್ ದೊಡ್ಡ ಸ್ಟಾರ್ ಆಗುತ್ತಾರೆ ಎಂದು ಚಂಕಿಗೆ ಆಗಲೇ ಅನಿಸಿತ್ತಂತೆ. ‘ಶಾರುಖ್ ಖಾನ್ ಸೂಪ್ಸ್ಟಾರ್ ಆಗುತ್ತಾರೆ ಅನ್ನೋದು ನನಗೆ ಗೊತ್ತಿತ್ತು. ಅವರಲ್ಲಿ ಆ ಬೆಂಕಿ ಇತ್ತು. ಸೂಪರ್ಸ್ಟಾರ್ ಆಗೋದಕ್ಕೂ ಮೊದಲು ಅವರು ಟ್ಯಾಲೆಂಟೆಡ್ ಆಗಿದ್ದರು. ಎತ್ತ ಕಡೆ ಹೋಗುತ್ತಿದ್ದೇನೆ ಎನ್ನುವ ಸ್ಪಷ್ಟತೆ ಇತ್ತು. ಅಂದಿನಿಂದಲೂ ನನಗೆ ಅವರ ಪರಿಚಯ ಇದೆ ಅನ್ನೋ ಬಗ್ಗೆ ಖುಷಿ ಇದೆ. ಅವರು ಈಗಲೂ ಬದಲಾಗಿಲ್ಲ’ ಎಂದಿದ್ದಾರೆ ಚಂಕಿ.
ಚಂಕಿ ಕೂಡ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಜೊತೆ ಒಳ್ಳೆಯ ಗೆಳೆತನನ ಹೊಂದಿದ್ದಾರೆ. ಅದೇ ರೀತಿ ಚಂಕಿ ಮಗಳು ಅನನ್ಯಾ ಹಾಗೂ ಶಾರುಖ್ ಮಕ್ಕಳಾದ ಸುಹಾನಾ, ಆರ್ಯನ್ ಬೆಸ್ಟ್ ಫ್ರೆಂಡ್ಸ್. ಆರ್ಯನ್, ಸುಹಾನಾ ಹಾಗೂ ಅನನ್ಯಾ ಆಗಾಗ ಒಟ್ಟಿಗೆ ಕಾಣಿಸುತ್ತಾರೆ. ಕ್ರಿಕೆಟ್ ಮ್ಯಾಚ್ಗಳಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ.
ಇದನ್ನೂ ಓದಿ: ಪುತ್ರಿ ಸುಹಾನಾ ಖಾನ್ ಸಿನಿಮಾಗಾಗಿ 200 ಕೋಟಿ ರೂಪಾಯಿ ಸುರಿಯಲಿರುವ ಶಾರುಖ್ ಖಾನ್
ಕಳೆದ ವರ್ಷ ಶಾರುಖ್ ಖಾನ್ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಮೂಲಕ ಗೆದ್ದರು. ಈ ಸಿನಿಮಾಗಳು ಸೂಪರ್ ಹಿಟ್ ಆಯಿತು. ಮೂರು ಸಿನಿಮಾಗಳಿಂದ ಎರಡುವರೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಆಗಿದೆ. ಅವರ ಹೊಸ ಸಿನಿಮಾ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಜೊತೆಗೆ ಮಗಳ ಸಿನಿಮಾಗೆ ಶಾರುಖ್ ಬಂಡವಾಳ ಹೂಡುತ್ತಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ